ಶಿಕ್ಷಣ

ಕುಂದಾಪುರ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕೆ. ರಾಜೀವ ಶೆಟ್ಟಿ ನಿಧನ 

Views: 324

ಕನ್ನಡ ಕರಾವಳಿ ಸುದ್ದಿ: ಕುಂದಾಪುರ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕೊಕ್ಕರ್ಣೆ ರಾಜೀವ್ ಶೆಟ್ಟಿ(95) ಇಂದು ಮೇ. 22 ರಂದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 

ಮೃತರು ಪುತ್ರ ಪಶುವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್ ಶೆಟ್ಟಿ ಸೇರಿದಂತೆ ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ಮತ್ತು ಮಂಗಳೂರು ಸೈಂಟ್ ಅಲೋಸಿಸ್ ಕಾಲೇಜಿನಲ್ಲಿ ಪದವಿ ಪಡೆದು 60ರ ದಶಕದಲ್ಲಿ ಕುಂದಾಪುರದ ಬೋರ್ಡ್ ಹೈಸ್ಕೂಲ್ ನಲ್ಲಿ ಎಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಸಿದ್ದಾಪುರದ ಹೈಸ್ಕೂಲ್ ನಲ್ಲಿ ಮುಖ್ಯೋಪಾಧ್ಯಾಯರಾಗಿ ನಂತರ ಕುಂದಾಪುರದಲ್ಲಿ ಸಹಾಯಕ ಶಿಕ್ಷಣಾಧಿಕಾರಿಯಾಗಿ ಆ ಕಾಲದಲ್ಲಿ ಉತ್ತಮ ಹೆಸರುಗಳಿಸಿದ್ದರು. 

ಕೊಕ್ಕಣೆ೯ ರಾಜೀವ್ ಶೆಟ್ಟಿಯವರು ಉಡುಪಿ ಎಂಜಿಎಂ.ಕಾಲೇಜಿನ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿ ಕಾಲೇಜಿನ ಸಂಸ್ಥಾಪಕರಾದ ಡಾ.ಮಾಧವ ಪೈಗಳ ಪ್ರೀತಿಗೂ ಪಾತ್ರರಾದವರು.ದಿ.ಟಿ.ಮೇೂಹನದಾಸ್ ಪೈ;ನಾಗಲ್ಯಾಂಡ್‌ ಮಾಜಿ ರಾಜ್ಯಪಾಲ ದಿ.ಪಿ.ಬಿ.ಆಚಾರ್ಯ ಪ್ರೊ.ಶ್ರೀಶ ಬಲ್ಲಾಳ್ ರಂತಹ ಹಿರಿಯರ ಜೊತೆ ಎಂಜಿಎಂ.ಕಾಲೇಜಿನಲ್ಲಿ ಒಟ್ಟಿಗೆ ಕಲಿತ ಹೆಗ್ಗಳಿಕೆಗೆ ಇವರಿಗೆ ಸಲ್ಲುತ್ತದೆ

ಮೃತರ ಅಂತ್ಯಕ್ರಿಯೆ ಕುಂದಾಪುರ ತಾಲೂಕಿನ ಅಸೋಡಿನಲ್ಲಿ ಮೇ.23ರಂದು ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

Related Articles

Back to top button
error: Content is protected !!