ಇತರೆ

ಅಕ್ರಮ ಸಂಬಂಧ ಶಂಕೆ: ಅಂಗನವಾಡಿಯಲ್ಲಿಯೇ ಅಕ್ಕನನ್ನು ಭೀಕರ ಕೊಲೆ ಮಾಡಿದ ತಮ್ಮ 

Views: 102

ಕನ್ನಡ ಕರಾವಳಿ ಸುದ್ದಿ: ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ, ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಶಂಕೆಯಿಂದ ಸ್ವಂತ ತಮ್ಮನೇ ತನ್ನ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅಂಗನವಾಡಿ ಸಹಾಯಕಿಯಾಗಿದ್ದ ಮಹಿಳೆಯ ಮೇಲೆ ಮಚ್ಚಿನಿಂದ ದಾಳಿ ಮಾಡಿ, ಆಕೆ ಕೆಲಸ ಮಾಡುತ್ತಿದ್ದ ಕೇಂದ್ರದಲ್ಲಿಯೇ ಹತ್ಯೆಗೈದಿದ್ದಾನೆ.

ಕೊಲೆಯಾದ ಮಹಿಳೆಯನ್ನು 29 ವರ್ಷದ ಸುಮಾ ಶಿವಶಂಕರ್ ವನಹಳ್ಳಿ ಎಂದು ಗುರುತಿಸಲಾಗಿದೆ. ಸಂಜು ಕೊಲೆ ಆರೋಪಿ

ಸುಮಾ ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇಂದು ಬೆಳಗ್ಗೆ ಎಂದಿನಂತೆ ಸುಮಾ ಶಿಗ್ಗಾವಿ ಪಟ್ಟಣದ ಮೌಲಾಲಿ ಗುಡ್ಡದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದರು. ಈ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಂದ ಸಂಜು, ಅಕ್ಕನ ಮೇಳೆ ಮಚ್ಚಿನಿಂದ ದಾಳಿ ನಡೆಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.

ಮಚ್ಚಿನ ದಾಳಿಗೆ ಒಂದು ಕೈ ತುಂಡಾಗಿದ್ದು, ಕುತ್ತಿಗೆ ಸೀಳಿ ಅಪಾರ ಪ್ರಮಾಣದ ರಕ್ತಸ್ರಾವದಿಂದ ಸುಮಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಂಗನವಾಡಿ ಮುಖ್ಯದ್ವಾರದ ಬಳಿಯೇ ರಕ್ತದ ಮಡುವಿನಲ್ಲಿ ಸುಮಾ ಅವರ ಹೆಣ ಬಿದ್ದಿರೋದನ್ನು ಕಂಡು ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ.

ಇಂದು ಬೆಳಗ್ಗೆ ಸುಮಾರು 10.15ರ ವೇಳೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ಮರಣೋತ್ತರ ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶಿಗ್ಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

 

 

Related Articles

Back to top button
error: Content is protected !!