ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ,” ಅನುಭವಾತ್ಮಾಕ ಕಲಿಕೆ ಹಾಗೂ ತರಗತಿ ನಿರ್ವಹಣೆ ಕೌಶಲ್ಯ “ ವಿಶೇಷ ಕಾರ್ಯಗಾರ
Views: 186
ಕನ್ನಡ ಕರಾವಳಿ ಸುದ್ದಿ: ವಕ್ವಾಡಿಯ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ” ಅನುಭವಾತ್ಮಕ ಕಲಿಕೆ ಹಾಗೂ ತರಗತಿ ನಿರ್ವಹಣೆ ಕೌಶಲ್ಯಗಳು “ ಎಂಬ ಒಂದು ದಿನದ ವಿಶೇಷ ಕಾರ್ಯಗಾರವನ್ನು ಮೇ.21ರಂದು ಹಮ್ಮಿಕೊಳ್ಳಲಾಗಿತ್ತು
ಬೆಂಗಳೂರಿನ ಏಕ್ತಾ ಸ್ಕೂಲಿನ ಸಂಸ್ಥಾಪಕ ಪ್ರಾಂಶುಪಾಲರು ಹಾಗೂ ಸಿಬಿಎಸ್ ಇ ಯ ಸಂಪನ್ಮೂಲ ವ್ಯಕ್ತಿಯಾದ ಡಾ. ಹೇಮಲತಾ ಖಾತ್ರಿಯವರು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಅನುಭವಾತ್ಮಕ ಕಲಿಕೆಯು ವಿದ್ಯಾರ್ಥಿಗಳ ಸರ್ವಾಂಗೀಣ ಕಲಿಕೆಗೆ ಉತ್ತಮ ಮಾರ್ಗವಾಗಿದ್ದು, ಶಿಕ್ಷಕರು ಪ್ರಾಯೋಗಿಕವಾಗಿ ಬೋಧನಾ ತಂತ್ರಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳ ಅರಿವಿನ ಮಟ್ಟವನ್ನು ಹೆಚ್ಚಿಸಬೇಕೆಂದರು . ಆಧುನಿಕ ಕಾಲದಲ್ಲಿ ಬಹುರೂಪಿ ಬೋಧನಾ ತಂತ್ರಜ್ಞಾನಗಳನ್ನು ನಾವು ಬಳೆಸಿಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ, ಯಶ್ ಶೆಟ್ಟಿ ಅವರು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಡಾ. ರೂಪಾ ಶೆಣೈರವರು ಕಾರ್ಯಗಾರಕ್ಕೆ ಶುಭ ಕೋರಿದರು. ಶಿಕ್ಷಕಿ ಕೀರ್ತಿ ಶೆಟ್ಟಿಯವರು ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಸಂಪ್ರೀತಾರವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.






