ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 08-06-2025ನೇ ಅದಿತ್ಯವಾರದಿಂದ ಮೊದಲ್ಗೊಂಡು ದಿನಾಂಕ: 10-06-2025ನೇ ಮಂಗಳವಾರದವರೆಗೆ ವೇದಮೂರ್ತಿ ಶ್ರೀ ಪ್ರಸನ್ನ ಕುಮಾರ ತಂತ್ರಿಗಳ ನೇತೃತ್ವದಲ್ಲಿ “ಅಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಹಳೆಯಮ್ಮ ದೇವಿಯ ಪುನರ್ ಪ್ರತಿಷ್ಠೆ, ನವೀನ ನಾಗಬನದಲ್ಲಿ ನಾಗ ಪ್ರತಿಷ್ಠೆ” ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ದಿನಾಂಕ: 08-06-2025 ಅದಿತ್ಯವಾರ
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಹಳೆಯಮ್ಮದೇವಿ ಸಪರಿವಾರ ದೈವಸ್ಥಾನದಲ್ಲಿ ಸಂಜೆ 6:00 ರಿಂದ ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಅಧಿವಾಸ ಹೋಮಗಳು, ರಾತ್ರಿ ಘಂಟೆ 9:00ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ
ದಿನಾಂಕ 09-06-2025 ಸೋಮವಾರ
ಬೆಳಿಗ್ಗೆ 8:00ರಿಂದ ದೇವರ ಉತ್ಸವ ಕಟ್ಟೆನಾಗ ಮತ್ತು ದೇವಸ್ಥಾನದ ನಾಗ ದೇವರ ಪ್ರತಿಷ್ಠೆ ಮತ್ತು ನವಕಪ್ರಧಾನ ಕಲಶಾಭಿಷೇಕ 10:15ರ ಕರ್ಕಾಟಕ ಲಗ್ನದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ, ಶಿಖರ ಪ್ರತಿಷ್ಠೆ ಮತ್ತು ಹೋಮಗಳು, ಬೆಳಿಗ್ಗೆ ಘಂಟೆ 11:00ರಿಂದ ಹಳೆಯಮ್ಮದೇವಿ ಸನ್ನಿಧಾನದಲ್ಲಿರುವ ನೂತನ ಕಟ್ಟೆಯಲ್ಲಿ ನಾಗದೇವರ ಪ್ರತಿಷ್ಠೆ ಮತ್ತು ಕಲಾಹೋಮ ಹಾಗೂ ಕಲಶಾಭಿಷೇಕ ಬೆಳಿಗ್ಗೆ 11:30ಕ್ಕೆ ನಾಗದೇವರ ದರ್ಶನ,12:00ಕ್ಕೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ 12.30ಕ್ಕೆ ಶ್ರೀ ಮಹಾಲಿಂಗೇಶ್ವರನಿಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಸಂಜೆ 5:00ರಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ ಸ್ಥಾಪನೆ (1008 ಕಲಶ) ಮತ್ತು ಇತರ ಹೋಮಗಳು ಸಂಜೆ 7:30ರಿಂದ ಹಳೆಯಮ್ಮದೇವಿ ಪರಿವಾರ ದೈವಗಳಿಗೆ ಪ್ರತಿಷ್ಠಾಪನೆ ಕಲಾಹೋಮ ಮತ್ತು ಕಲಶಾಭಿಷೇಕ ಸಂಜೆ 7:30ಕ್ಕೆ ದೇವಿಯ ದರ್ಶನ ಸೇವೆ, ಸಂಜೆ 8:00ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಜರುಗಲಿರುವುದು.
ದಿನಾಂಕ 10-06-2025 ಮಂಗಳವಾರ
ಬೆಳಿಗ್ಗೆ ಘಂಟೆ 7:00ರಿಂದ ಕಲಶಾಧಿವಾಸಹೋಮ ಮತ್ತು ಬ್ರಹ್ಮಕಲಶೋತ್ಸವ (1008) ಬೆಳಿಗ್ಗೆ 10-30ಕ್ಕೆ ಶತರುದ್ರಾಭಿಷೇಕ, ಮಹಾಪೂಜೆ ಬೆಳಿಗ್ಗೆ 11:00ಕ್ಕೆ ಧಾರ್ಮಿಕ ಪ್ರವಚನ ಡಾ| ವಿಜಯ ಮಂಜರು ಪಾಂಡೇಶ್ವರ ಸಾಸ್ತಾನ.
ಬೆಳಿಗ್ಗೆ 11:30ಕ್ಕೆ ರೂ 25,000 ಮತ್ತು ಅದಕ್ಕಿಂತ ಹೆಚ್ಚಿಗೆ ದೇಣಿಗೆ ನೀಡಿದ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮ ಮಧ್ಯಾಹ್ನ 12:00ಕ್ಕೆ ಮಹಾ ಮಂಗಳಾರತಿ ಮತ್ತು ಪ್ರಸಾದ ವಿತರಣೆ. ಮಧ್ಯಾಹ್ನ 12:30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.