ಇತರೆ
ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ತೆರಳಿದ ಯೋಧ ಮತ್ತು ಬಾಲಕ ಸಾವು

Views: 73
ಕನ್ನಡ ಕರಾವಳಿ ಸುದ್ದಿ: ನದಿಯಲ್ಲಿ ಮುಳುಗಿ ಯೋಧ ಸಹಿತ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಣ್ಣೀರಿ ಗ್ರಾಮ ನಡೆದಿದೆ.
ಮೃತರನ್ನು ಹಂಸನೂರು ಗ್ರಾಮದ ಶೇಖಪ್ಪ(15) ಮತ್ತು ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ (25) ಎಂದು ಗುರುತಿಸಲಾಗಿದೆ.
ನದಿಯಲ್ಲಿ ಸ್ನಾನ ಮಾಡಲು ಶೇಖಪ್ಪ ಮೊದಲು ನದಿಗೆ ಇಳಿದ್ದ. ಈ ವೇಳೆ ಈಜಲಾಗದೆ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಯೋಧ ಧಾವಿಸಿದ್ದಾರೆ. ಆದರೆ, ನದಿಯ ದಡ ಸೇರಲಾರದೇ ಇಬ್ಬರೂ ಮೃತಪಟ್ಟಿದ್ದಾರೆ.
ಸೈನಿಕ ಮಹಾಂತೇಶ ರಜೆ ಮೇಲೆ ಬಂದಿದ್ದ. ಇನ್ನೆರಡು ದಿನಗಳಲ್ಲಿ ಕರ್ತವ್ಯಕ್ಕೆ ತೆರಳಲಿದ್ದ. ಬೇಸಿಗೆ ಬಿಸಿಲಿನ ತಾಪದಿಂದಾಗಿ ನದಿಯಲ್ಲಿ ಮಾವ ಮತ್ತು ಅಳಿಯ ಈಜಲು ಹೋಗಿದ್ದರು ಎನ್ನಲಾಗಿದೆ.
ಅಗ್ನಿಶಾಮಕ ದಳ ಮತ್ತು ಪೋಲಿಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ. ಘಟನೆ ಸಂಬಂಧ ಬಾದಾಮಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.