ಯುವಜನ

ಮೋಟಾರ್‌ ಆನ್‌ ಮಾಡಲು ತೆರಳಿದ್ದ ಯುವತಿ ಸ್ಥಳದಲ್ಲೇ ಸಾವು

Views: 113

ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ. ಮೋಟಾರ್ ಸ್ಟಾರ್ಟ್ ಮಾಡುವಾಗ ಯುವತಿ ನಿಸರ್ಗ (15) ಮೃತಪಟ್ಟಿದ್ದಾಳೆ.

ನಿಸರ್ಗ ತಮ್ಮ ಮನೆಯಲ್ಲಿನ ಕುಡಿಯುವ ನೀರಿನ ಟ್ಯಾಂಕ್‌ಗೆ ನೀರು ಬಿಡುವ ಸಲುವಾಗಿ ಮೋಟಾರ್‌ ಆನ್‌ ಮಾಡಲು ತೆರಳಿದ್ದರು. ಈ ವೇಳೆ ಅವರಿಗೆ ಕರೆಂಟ್‌ ಹೊಡೆದಿದೆ. ಸ್ಥಳದಲ್ಲಿಯೇ ಕುಸಿದು ಬಿದ್ದ ನಿಸರ್ಗ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Related Articles

Back to top button