ಬಾರ್ಕೂರು: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ “ಮಹಾಶಿವರಾತ್ರಿ ಮಹೋತ್ಸವ”

Views: 134
ಕನ್ನಡ ಕರಾವಳಿ ಸುದ್ದಿ: ಶ್ರೀ ಕ್ಷೇತ್ರ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಅಹೋರಾತ್ರಿ ಭಜನೆ- ಸಂಕೀರ್ತನೆ- ಜಾಗರಣೆ ಕಾರ್ಯಕ್ರಮ ನಡೆಯಿತು.
ದೇವಳದ ಅಧ್ಯಕ್ಷ ಶ್ರೀಲಕ್ಷ್ಮಣ ಕರಾವಳಿ ಮತ್ತು ಸುಮತಿ ಕೂಡಮಾಡಿದ ಬೃಹತ್ ಕಾಲು ದೀಪವನ್ನು ಸಮರ್ಪಿಸಿ ದೀಪ ಪ್ರಜ್ವಲಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಶ್ರೀಧರ್ ಭಂಡಾರಿ, ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಬಾರ್ಕೂರು ಶ್ರೀ ಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ, ಆಡಳಿತ ಮೊಕ್ತೇಸರ ಡಾ.ಜಯರಾಮ್ ಶೆಟ್ಟಿಗಾರ್, ಪುರುಷೋತ್ತಮ ಮಣಿಪಾಲ, ಭಾಸ್ಕರ್ ಶೆಟ್ಟಿಗಾರ್ ಸಾಸ್ತಾನ, ವಿನಯಕುಮಾರ ಸಿಕೆ, ಸುಧಾಕರ ವಕ್ವಾಡಿ, ಅಶೋಕ ಭಂಡಾರಿ, ಸುಭಾಷ್ ಗುಂಡಿಬೈಲು, ಸಂತೋಷ್ ಭಂಡಾರಿ ಕುತ್ಪಾಡಿ, ಯೋಗೀಶ್ ಭಂಡಾರಿ ಬಾರ್ಕೂರು, ಸುರೇಶ್ ಭಂಡಾರಿ ಹೀರೆಬೆಟ್ಟು ಆತ್ರಾಡಿ, ದೇವದಾಸ್ ಹೊಸ್ಕರ್, ಸದಾಶಿವ ಪೂಜಾರಿ, ಸೋಮಶೇಖರ ಭಂಡಾರಿ ಉಪಸ್ಥಿತರಿದ್ದರು.