ಅರ್ಚಕರ ನಗ್ನ ಚಿತ್ರ ಇಟ್ಟುಕೊಂಡು ಬ್ಲ್ಯಾಕ್ ಮೇಲ್..10 ಲಕ್ಷ ರೂ.ವಂಚಿಸಿದ ಯಕ್ಷಗಾನ ಸ್ತ್ರೀವೇಷಧಾರಿ ಬಂಧನ

Views: 663
ಕನ್ನಡ ಕರಾವಳಿ ಸುದ್ದಿ: ತೆಂಕು-ಬಡಗುತಿಟ್ಟಿನ ಸ್ತ್ರೀವೇಷಧಾರಿಯೊಬ್ಬರು ಸಲುಗೆ ಬೆಳೆಸಿ ಬೆತ್ತಲೆ ಪೋಟೋ, ಅಶ್ಲೀಲ ಸಂಭಾಷಣೆಯ ನಗ್ನ ವೀಡಿಯೋ ಕಾಲ್ ಮಾಡಿ, ಪ್ರಚಾರ ಮಾಡುವುದಾಗಿ ಬೆದರಿಕೆ ಹಾಕಿ 10ಲಕ್ಷ ರೂ ಪಡೆದು ವಂಚಿಸಿದ ಸ್ತ್ರೀವೇಷಧಾರಿ ಅಶ್ಶಥ್ ಆಚಾರ್ಯ ಅವರನ್ನು ಬಂಧಿಸಿ ಬದಿಯಡ್ಕ ಠಾಣೆಗೆ ಹಸ್ತಾಂತರಿಸಲಾಯಿತು.
ವ್ಯಕ್ತಿಯೊಬ್ಬರನ್ನು ಜಾಲತಾಣದ ಮೂಲಕ ಪರಿಚಯಗೊಂಡು, ಸ್ನೇಹ ಬೆಳೆಸಿ, ಬಳಿಕ ಸಲುಗೆ ಯಾಗಿ ಬೆತ್ತಲೆ ಫೋಟೋ, ಆಶ್ಲೀಲ ಮಾತುಗಳ ವೀಡಿಯೋ ಕಾಲ್ ಗಳನ್ನು ಪಡೆದು ಅನಂತರ ಅದನ್ನು ಜಾಲತಾಣದಲ್ಲಿ ಹಾಕಿ ಪ್ರಚಾರ ಮಾಡುವುದಾಗಿ ಬೆದರಿಸಿ 10ಲಕ್ಷಕ್ಕೂ ಅಧಿಕ ರೂ.ದೋಚಿದ ಹಿನ್ನೆಲೆಯಲ್ಲಿ ಬದಿಯಡ್ಕ ಠಾಣಾ ವ್ಯಾಪ್ತಿಯ ಅರ್ಚಕರು ನೀಡಿದ ದೂರಿನಂತೆ ಬದಿಯಡ್ಕ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಬಳಿಕ ಮಂಜೇಶ್ವರ ಎಸ್.ಐ.ಅನೂಪ್ ಕುಮಾರ್ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾಗಿ ರಾತೋರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಮಂಗಳೂರಿನ ಕೊಳಂಬೆಯಲ್ಲಿರುವ ಅಶ್ವತ್ ಆಚಾರ್ಯ ಮನೆಗೆ ಆಗಮಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.
ಇವರೊಳಗೆ ಸಲುಗೆ ಏರ್ಪಟ್ಟು, ಅದು ಅನೈತಿಕ ಮಾತುಕತೆಗಳಾಗಿ ಸಲಿಂಗ ಸಂಬಂಧದಂತೆ ಬೆಳೆದವು. ನಗ್ನ ಚಿತ್ರಗಳು, ಮತ್ತು ವೀಡಿಯೋ ಕಾಲ್ ಮಾತುಗಳು ಅಶ್ವಥ್ ಕೈ ಸೇರಿದ್ದವು. ಬಳಿಕ ಇದನ್ನೇ ಬಳಸಿ ಬ್ಲಾಕ್ ಮೇಲ್ ಮಾಡಿದ ಆರೋಪಿ ಕಳೆದ 2024ರ ನವಂಬರ್ 26ರಿಂದ ನಿಂದ ಡಿಸೆಂಬರ್ 4ರ ಅವಧಿಯಲ್ಲಿ ಹಂತ ಹಂತವಾಗಿ 10,05,000ರೂ ಗೂಗಲ್ ಪೇ ಮೂಲಕ ಪಡೆದು ವಂಚಿಸಿರುವುದಾಗಿ ದೂರು ದಾಖಲಾಗಿದೆ.