ಜ.22 ರಿಂದ 24ರವರೆಗೆ ಯುಡಾಡಿ-ಮತ್ಯಾಡಿ, ಕೇಸನಮಕ್ಕಿ ಬಾಲಚಿಕ್ಕು ಮತ್ತು ಪರಿವಾರ ದೈವಸ್ಥಾನದಲ್ಲಿ “ಪುನರ್ ಪ್ರತಿಷ್ಠೆ- ಬ್ರಹ್ಮಕಲಶಾಭಿಷೇಕ”

Views: 117
ಭಗವದ್ಭಕ್ತರೆ,
ಕನ್ನಡ ಕರಾವಳಿ ಸುದ್ದಿ: ಕ್ರೋಧಿ ನಾಮ ಸಂವತ್ಸರದ ಮಕರ ಮಾಸ ದಿನ 8 ಸಲುವ ಪೌಷ ಕೃಷ್ಣ 8 ಯು ದಿನಾಂಕ 22-01-2025 ನೇ ಬುಧವಾರದಿಂದ ಆರಂಭಿಸಿ ದಿನಾಂಕ 24-01-2025ನೇ ಶುಕ್ರವಾರ ಮಧ್ಯಾಹ್ನ ಪರ್ಯಂತ ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿ ಗ್ರಾಮದ ಕೇಸನಮಕ್ಕಿ ‘ಬಾಲಚಿಕ್ಕು ಮತ್ತು ಪರಿವಾರ ದೈವಸ್ಥಾನ’ದಲ್ಲಿ ಕೆ.ರತ್ನಾಕರ ಹೆಗ್ಡೆ, ಕೋಟ ಆಶ್ರಿತ್ ನರ್ಸಿಂಗ್ ಕಾಲೇಜಿನ ಚೇರ್ಮನ್, ಕೇಸನ ಮಕ್ಕಿ ಬಡಾಮನೆ ಇವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕುಂದಾಪುರದ ಗಿಶ ಕನ್ಸ್ಟ್ರಕ್ಷನ್ ನ ಉಮೇಶ್ ಆಚಾರ್ ಅವರಿಂದ ಸುಂದರ ಮತ್ತು ಆಕರ್ಷಕವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ
“ಜೀರ್ಣೋದ್ಧಾರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ” ನಡೆಯಲಿದೆ.
ಸಕಲ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರಧಾನ ದೇವರು ಬಾಲಚಿಕ್ಕು ಪರಿವಾರ ದೈವಗಳಾದ ನಂದಿ, ಹೈಗುಳಿ, ದೊಡ್ಡ ಕಾಲು ಚಿಕ್ಕು, ಗುರು ಚಿಕ್ಕು, ಹಳೆಯಮ್ಮ, ಹಿರಿಚಿಕ್ಕು, ಮಾಸ್ತಿಯಮ್ಮ, ಬಾನ್ ಚಿಕ್ಕು, ಮೋಟು ಕಾಲು ಚಿಕ್ಕು, ಬೊಬ್ಬು ಚಿಕ್ಕು, ಅವತಾರ ಚಿಕ್ಕು, ಹೊನ್ನಮ್ಮ, ಚಿಕ್ಕು, ಕಿರುಚಿಕ್ಕು ದೈವಗಳನ್ನು ಸ್ಥಾಪಿಸಲಾಗಿದೆ.
ದೈವಸ್ಥಾನದ ಬಲಭಾಗದ ಮುಂಭಾಗದಲ್ಲಿ ಮರ್ಲ್ ಚಿಕ್ಕು, ಮಾಸ್ತಿ ಅಮ್ಮ, ಹೈಗುಳಿ, ಗೆಂಡದ ಹೈಗುಳಿ, ರಕ್ತ ಹೈಗುಳಿ,ಯಕ್ಷಿ, ನೀಚ, ದೈವಸ್ಥಾನದ ಎಡಭಾಗದಲ್ಲಿ ಕ್ಷೇತ್ರಪಾಲ, ಮಂತ್ರ ಗಣ, ಮಾರಿಗಣ ಪರಿವಾರ ದೈವಗಳಿವೆ.
ಕಾರ್ಯಕ್ರಮಗಳ ವಿವರ
ದಿನಾಂಕ: 22-01-2025 ನೇ ಬುಧವಾರ
ಸಂಜೆ:ಪ್ರಾರ್ಥನ ಫಲನ್ಯಾಸ ಪೂರ್ವಕ ಸಾಮೂಹಿಕ ಪ್ರಾರ್ಥನೆ, ಗಣೇಶ ಪೂಜೆ, ಶಸ್ತ್ರ ಪೂಜೆ, ಸ್ಥಾನ ಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜಾ ಬಲಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ಅಧಿವಾಸ ಪೂಜೆ, ಅಧಿವಾಸ ಹೋಮ, ರಾತ್ರಿ ಶುಭ ಮುಹೂರ್ತದಲ್ಲಿ ರತ್ನನ್ಯಾಸ ಪೂರ್ವಕ ಶ್ರೀ ದೇವಿಯ ಪ್ರತಿಷ್ಟೆ ತದಂಗ ನ್ಯಾಸಾದಿಗಳು
ದಿನಾಂಕ: 23-01-2025ನೇ ಗುರುವಾರ ಪೂರ್ವಾಹ್ನ: ತತ್ವಹೋಮ, ಪ್ರಾಯಶ್ಚಿತ ಹೋಮಯಾದಿಗಳು, ರಾತ್ರಿ ಬ್ರಹ್ಮಾರಿ ಮಂಡಲ ರಚನೆ, ಮಂಡಲ ಪೂಜೆ, ಪಂಚವಿಂಶತಿ ದ್ರವ್ಯ ಕಲಶ ಪೂರ್ವಕ 108 ಪರಿಕಲಶ ಸಹಿತ, ಕಲಾತತ್ವ, ಬ್ರಹ್ಮ ಕಲಶ ಸ್ಥಾಪನೆ, ಅಧಿವಾಸ ಹೋಮಾದಿಗಳು ನಡೆಯಲಿದೆ.
ದಿನಾಂಕ: 24-01-2025ನೇ ಶುಕ್ರವಾರ
ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪ್ರಸಾದ ವಿತರಣೆ.
ಮಧ್ಯಾಹ್ನ 1ಗಂಟೆಗೆ
ಸಾರ್ವಜನಿಕ “ಮಹಾ ಅನ್ನಸಂತರ್ಪಣೆ”
ವಿಶೇಷ ಸೂಚನೆ: ಕಲಶಾಭಿಷೇಕ ಮಾಡಿಸುವವರು ರೂಪಾಯಿ 900 ಪಾವತಿಸಿದಲ್ಲಿ ಅವರಿಗೆ ಕಲಶಾಭಿಷೇಕದ ಕಲಶ ಪ್ರಸಾದವನ್ನು ಕೊಡಲಾಗುವುದು.
ಹೊರೆಕಾಣಿಕೆಯನ್ನು ಆದರದಿಂದ ಸ್ವೀಕರಿಸಲಾಗುವುದು.
ಶ್ರೀ ದೇವರ ಇಚ್ಛೆ ಹಾಗೂ ತಮ್ಮೆಲ್ಲರ ಸಂಪೂರ್ಣ ಸಹಾಯದಿಂದಲೇ ನಡೆಯುವ, ಈ ದೇವತಾ ಕಾರ್ಯಕ್ಕೆ ತಾವೆಲ್ಲರೂ ಆಗಮಿಸಿ, ತನು-ಮನ-ಧನ ಸಹಾಯವನ್ನು ನೀಡಿ ಸಹಕರಿಸಿ, ಶ್ರೀ ದೇವರ ಪವಿತ್ರ ಪ್ರಸಾದವನ್ನು ಸ್ವೀಕರಿಸಿ, ಸಪರಿವಾರ ಬಾಲಚಿಕ್ಕುವಿನ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ.
ಇಂತೀ ತಮ್ಮ ಆಗಮನಾಭಿಲಾಷಿಗಳು,ಸರ್ವರಿಗೂ ಸ್ವಾಗತ ಬಯಸುವ,
ಕೇಸನಮಕ್ಕಿ ಬಡಾಮನೆ, ಕೇಸನ ಮಕ್ಕಿ ಮೇಲ್ಮನೆ, ಕೇಸನಮಕ್ಕಿ ಕೆಳಮನೆ, ಕೇಸನಮಕ್ಕಿ ತೆಂಕು ಮನೆಯವರು
ಕರುಣಾಕರ ಹೆಗ್ಡೆ, ರತ್ನಾಕರ್ ಹೆಗ್ಡೆ (ಆರ್ ಎಚ್ ರಿಯಾಲ್ಟಿ ಮಣಿಪಾಲ) ಕೇಸನ ಮಕ್ಕಿ ಬಡಾಮನೆ
ಕೇಸನಮಕ್ಕಿ ನಾಲ್ಕು ಮನೆಯವರು, ನಂಬಿದ ಭಕ್ತಾಭಿಮಾನಿಗಳು ಊರಿನ ಹತ್ತು ಸಮಸ್ತರು
ಸಂಪರ್ಕ:9008052447, 9449639538, 9449639612, 8453513276, 8618021796
ಶುಭ ಕೋರುವವರು,