ಧಾರ್ಮಿಕ

ಜ.17ರಂದು ಕುಂಭಾಸಿಯಲ್ಲಿ ಚತುಃಪವಿತ್ರ ನಾಗಮಂಡಲ ಸೇವೆ: ಚಪ್ಪರ ಮಹೂರ್ತ

Views: 258

ಕನ್ನಡ ಕರಾವಳಿ ಸುದ್ದಿ: ಕುಂಭಾಸಿಯಲ್ಲಿ ನಿರ್ಮಾಣಗೊಂಡಿರುವ ವೆಂಕಟಲಕ್ಷ್ಮಿ ಟವರ್ಸ್ ನ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಜನವರಿ 17ರಂದು ಚತುಃ ಪವಿತ್ರ ನಾಗಮಂಡಲ ಸೇವೆ, ಸಹಸ್ರನಾರಿಕೇಳ ಗಣಯಾಗ,  ಜ.18ರಂದು ಚಂಡಿಕಾ ಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಗಳು ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ಚಪ್ಪರ ಮುಹೂರ್ತ ಕಾರ್ಯಕ್ರಮ ಬುಧವಾರ ಕುಂಭಾಸಿಯಲ್ಲಿ ನಡೆಯಿತು.

ಚತುಃ ಪವಿತ್ರ ನಾಗಮಂಡಲ ಸೇವೆಯ ಪ್ರಧಾನ ಪುರೋಹಿತರಾದ ವೇದಮೂರ್ತಿ ಕಜ್ಕೆ ರಾಮಕೃಷ್ಣ ಭಟ್ ಅವರು ಚಪ್ಪರ ಮುಹೂರ್ತದ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಅನುವಂಶಿಕ ಅರ್ಚಕ ಶ್ರೀಧರ್ ಉಪಾಧ್ಯಾಯ ಮಂಗಳೂರಿನ ವೆಂಕಟಲಕ್ಷ್ಮಿ ಬಿಲ್ಡರ್ಸ್ ಡೈರೆಕ್ಟರ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಗಳಾದ ಹೇಮಾವತಿ ಚಂದ್ರಶೇಖರ್ ಸಿ ಐತಾಳ್, ರಾಮಚಂದ್ರ ವರ್ಣ, ಗಣೇಶ್ ಭಟ್ ಬೆಳ್ವೆ ಡಾ. ಎಂ ಆರ್ ಅಡಿಗ, ಸೀತಾರಾಮ್ ಧನ್ಯ ಶೀಲತಾ ಐತಾಳ್, ಬಾಬಣ್ಣ ಪೂಜಾರಿ ಇನ್ನಿತರು ಉಪಸ್ಥಿತರಿದ್ದರು.

Related Articles

Back to top button
error: Content is protected !!