ಯುವಜನ
ಉಡುಪಿ:ಅಲೆವೂರಿನಲ್ಲಿ ನದಿಗೆ ಈಜಲು ತೆರಳಿದ ಇಬ್ಬರು ವಿದ್ಯಾರ್ಥಿಗಳು ಸಾವು

Views: 76
ಮಣಿಪಾಲ: ಅಲೆವೂರಿನ ನೈಲಪಾದೆಯ ಚಶ್ಮಾವತಿ ನದಿಯಲ್ಲಿ ಈಜಾಡಲು ತೆರಳಿ ನೀರಿನಲ್ಲಿ ಮುಳುಗಿ ಗಂಭೀರ ಅಸ್ವಸ್ಥಗೊಂಡ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಮೃತರನ್ನು ಕೇರಳದ ತ್ರಿವೆಂಡಮ್‌ನ ಆರೊನ್ ರೋಜರ್ ಲೀನ್(17) ಹಾಗೂ ಕೋಲ್ಕತಾದ ಮಾಧವ್(18) ಮೃತ ವಿದ್ಯಾರ್ಥಿಗಳು.
ಅಗಸ್ಟ್ 25 ರಂದು ನಾಲ್ಕು ಮಂದಿ ವಿದ್ಯಾರ್ಥಿಗಳು ನದಿಗೆ ತೆರಳಿದ್ದು, ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು.ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಎರಡು ದಿನಗಳಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ಬುಧವಾರ ಮುಂಜಾನೆ ಮೃತಪಟ್ಟರೆ ಇನ್ನೋರ್ವ ವಿದ್ಯಾರ್ಥಿ ಬುಧವಾರ ಸಂಜೆಯ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮೃತಪಟ್ಟ ಇಬ್ಬರೂ ಮಣಿಪಾಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






