ಭಾವಿಸಮೀರ ಶ್ರೀ ವಾದಿರಾಜರ ಜನ್ಮ ಕ್ಷೇತ್ರ ಹೂವಿನ ಕೆರೆ, ಫೆ.15 ರಿಂದ ಫೆ.21ರ ವರೆಗೆ ನೂತನ ಪ್ರಾಸಾದ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವ

Views: 453

ಕುಂದಾಪುರ: ಕನ್ನಡ ಹರಿದಾಸ ಕ್ಷೇತ್ರದ ದೀಮಂತ ಶ್ರೇಷ್ಠರಾದ ಪುರಂದರದಾಸರು,ಕನಕದಾಸರ ಸಮಕಾಲೀನರಾಗಿದ್ದ ದಾರ್ಮಿಕ ಜಾಗೃತಿಯ ನವಚೇತನವನ್ನು ಮೂಡಿಸಿದಾರ್ಶನಿಕ ಪುಣ್ಯ ಪವಾಡ ಪುರುಷರು ಮಧ್ವಾಚಾರ್ಯರು ಸ್ಥಾಪಿಸಿದ ಅಷ್ಟಮಠಗಳಲ್ಲಿ ಒಂದಾಗಿರುವ ವಾದಿರಾಜರ ಜನ್ಮ ಕ್ಷೇತ್ರ ಅಸೋಡು ಗ್ರಾಮದ ಹೂವಿನಕೆರೆಯಲ್ಲಿದೆ.
ವಾದಿರಾಜರು ನಡೆದಾಡಿದ ಪುಣ್ಯಭೂಮಿ ಆನೆಗುಡ್ಡೆ ದೇವಸ್ಥಾನದ ಹಿಂಬಾಗದಿಂದ ವಕ್ವಾಡಿ ಮಾರ್ಗವಾಗ 4 ಕಿ.ಮೀ ದೂರದ ಹೂವಿನಕೆರೆ ಎಂಬ ಹಳ್ಳಿಯಲ್ಲಿ ಶಾರ್ವರಿ ಸಂವತ್ಸರದ ಮಾಘ ಮಾಸ ಶುದ್ದ ದ್ವಾದಶಿಯಂದು ಬೆಳಗಿನ ಜಾವ ಕ್ರಿ.ಶ. 1481 ರಲ್ಲಿ ವಾದಿರಾಜರು ಜನಿಸಿದ್ದಾರೆ. ತಂದೆ ಶ್ರೀ ರಾಮಾಚಾರ್ಯ, ತಾಯಿ ಗೌರಿ ದೇವಿ
ವಾದಿರಾಜರು ಜನಿಸಿದ `ಗೌರಿ ಗದ್ದೆ’
ಅಸೋಡು ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ದಕ್ಷಿಣ ಭಾಗದಲ್ಲಿ ಕಂಗೊಳಿಸುತ್ತಿರುವ ಹಸಿರು ಸಮೃದ್ಧ ಬೆಳೆಯ ಪರಿಸರದ ತಪ್ಪಲಲ್ಲಿ ಪುಣ್ಯ ಭೂಮಿ ಹೂವಿನಕೆರೆಯ ಗೌರಿ ಗದ್ದೆ ಇಂದಿಗೂ ಪ್ರಸಿದ್ಧಿ.
ಹಲವಾರು ವರ್ಷಗಳಿಂದ ಪುತ್ರ ಸಂತಾನವಿಲ್ಲದ ರಾಮಾಚಾರ್ಯ ದಂಪತಿಗಳು ಅಂದಿನ ಅಷ್ಠ ಮಠದ ಮಹಾಜ್ಞಾನಿಗಳು ಪವಾಡ ಪುರುಷರೆಂದೇ ಖ್ಯಾತರಾಗಿರುವ ವಾಗೀಶ ತೀರ್ಥರಲ್ಲಿ ಪುತ್ರ ಸಂತಾನಕ್ಕಾಗಿ ಬಯಕೆ ಮುಂದಿಟ್ಟು ಯತಿಗಳ ಸಂಸ್ಥಾನದ ಆರಾದ್ಯಮೂರ್ತಿ ಶ್ರೀ ಭೂವರಹ ಸ್ವಾಮಿಯ ಫಲ ಮಂತ್ರಾಕ್ಷತೆ ನೀಡಿ. ನಿಮಗೆ ಹುಟ್ಟುವ ಮಗುವು ನಮ್ಮ ಪೀಠದ ಸಂನ್ಯಾಸಿಯೇ ಆಗುವನು ಆದರೆ, ಮನೆಯೊಳಗೆ ಮಗು ಹುಟ್ಟದರೆ ನಿಮಗಿರಲಿ ಹೊರಗೆ ಜನಿಸಿದರೆ ನಮ್ಮ ದೇವರಿಗಿರಲಿ’ ಎಂದು ವಾಗ್ದಾನ ನೀಡಿದರು.

ಗುರುವಿನ ಅನುಗ್ರಹದಂತೆ ಗೌರಿ ಗರ್ಬಿಣಿಯಾದಳು ಪ್ರಸವಕ್ಕೆ ಹತ್ತಿರವಾಗುತ್ತಿದ್ದಂತೆ ಮನೆಯಿಂದ ಹೊರಗೆ ಹೋಗದೆ ಒಳಗೆ ಇರಲು ಪ್ರಯತ್ನಿಸಿದರು. ಅಂದು ಏಕಾದಶಿ ದಿನ ರಾತ್ರಿಯಿಂದಲೇ ರಾಮಾಚಾರ್ಯರು ವೃತದಲ್ಲಿದ್ದರು. ಬೆಳಗಿನ ಜಾವ ಹೊಲದಲ್ಲಿ ದನ ಪೈರು ಮೆಯುತ್ತಿರುದನ್ನು ಕಂಡು ಓಡಿಸಲು ಯಾರು ಇಲ್ಲದೆ ಇದ್ದಾಗ ಗೌರಿ ದೇವಿಯೇ ಅಲ್ಲಿಗೆ ಹೋಗಲೆ ಬೇಕಾಯಿತು. ಇದ್ದಕ್ಕಿದ್ದಂತೆ ಹೊಲದಲ್ಲಿಯೇ ಪ್ರಸವ ವೇದನೆ ಪ್ರಾರಂಭವಾಗಿ ಗೌರಿ ಅಲ್ಲಿಯೇ ಕುಸಿದಳು. ಮೊದಲೇ ತಿಳಿದಿದ್ದ ವಾಗೀಶ ತೀರ್ಥರು ಪ್ರಸವಕ್ಕೆ ಸೂಲಗಿತ್ತಿಯರನ್ನು ಅಲ್ಲಿಗೆ ಕಳುಹಿಸಿ ಸುಖ ಪ್ರಸವ ಮಾಡಿಸಿದರು.
ಭೂವರಹನ ಅನುಗ್ರಹದಿಂದ ಹುಟ್ಟಿದ ಮಗುವಿಗೆ `ಭೂವರಹ’ ಎಂದು ನಾಮಕರಣ ಮಾಡಿ ಮಗುವನ್ನು ಕರೆದೊಯ್ಯಲು ವಾಗೀಶ ತೀರ್ಥರು ಅಲ್ಲಿಗೆ ಬಂದರು. 1488 ರಲ್ಲಿ ವಾಗೀಶ ತೀರ್ಥರಿಂದ ಸಂನ್ಯಾಸ ದೀಕ್ಷೆ ನೀಡಿ ‘ವಾದಿರಾಜ ತೀರ್ಥ’ ಎಂಬ ಹೆಸರು ನೀಡಿದರು. ಹೀಗೆ ವಾದಿರಾಜರು ಜನ್ಮತಾಳಿದ ಸ್ಥಳಕ್ಕೆ `ಗೌರಿ ಗದ್ದೆ’ ಎಂದಾಯಿತು ಇದೇ ಸ್ಥಳದಲ್ಲಿ ಈಗ ವಾದಿರಾಜರ ಗುಡಿ ನಿರ್ಮಾಣಗೊಂಡಿದೆ. ಸೊದೆ ಮಠಕ್ಕೆ ಈಗಲೂ ಗೌರಿಗದ್ದೆಯಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ವಾದಿರಾಜರ ಆರಾಧನೆಗೆ ತಂದು ನೈವೆದ್ಯ ಮಾಡುತ್ತಾರೆ. ( ಸುಮಾರು 120 ವರ್ಷಗಳ ಕಾಲ ಬದುಕಿದ್ದ ವಾದಿರಾಜರು ಕೊನೆಯಲ್ಲಿ ಶಿರಸಿಯಿಂದ 20ಕಿ.ಮೀಟರ್ ದೂರದಲ್ಲಿರುವ ಸೋಂದ ಎಂಬಲ್ಲಿ ಸಶರೀರ ವೃಂದಾವನಸ್ಥರಾದರು.)

ತಾಯಿಯ ಅನುಗ್ರಹ ಪಡೆದು ವಾದಿರಾಜರ ವಿಶ್ವಪರಿಯಟನೆ
ಗುರುಗಳಿಂದ ದೀಕ್ಷೆ ಪಡೆದ ವಾದಿರಾಜರು ವೈಷ್ಣವ ತೀರ್ಥ ಕ್ಷೇತ್ರಗಳಿಗೆ ಪಾದಯಾತ್ರೆಯ ಮುಖಾಂತರ ವಿಶ್ವಪರಿಯಟನೆಗೆ ತಾಯಿಯ ಅನುಗ್ರಹ ಪಡೆಯಲು ಹುಟ್ಟೂರಾದ ಹೂವಿನಕೆರೆಗೆ ಬರುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಕಾಲ್ನನಡಿಗೆಯಲ್ಲಿ ಕ್ರಮಿಸುವ ವಿಷಯ ಕೇಳಿ ತಾಯಿ ಒಪ್ಪಿಗೆ ನೀಡಲಿಲ್ಲ ಆದರೆ ತಾಯಿಯನ್ನು ಸಂತೈಸುತ್ತಾ ಗುರು ಆಜ್ಞೆಯನ್ನು ಪಡೆದ ನಂತರ ನನ್ನ ನಿರ್ಧಾರ ಬದಲಿಸುವಂತಿಲ್ಲ ನೀನು ದುಖಿಸಬಾರದು ನನ್ನ ಬದಲಿಗೆ ನನ್ನದೆ ಪಡಿಯಚ್ಚಿನಂಥ ಮೂರ್ತಿಯನ್ನು ನಿನಗೆ ಮಾಡಿ ಕೊಡುತ್ತೇನೆ. ನನ್ನ ನೆನಪಾದಗಲೆಲ್ಲ ಅದನ್ನು ನೋಡುತ್ತಾ ನನ್ನ ಸಾಮೀಪ್ಯ ನೆನಸಿಕೊ ಎಂದು ಕಂಚಿನ ಮೂರ್ತಿಯನ್ನು ರಚಿಸಿ ತಾಯಿಗೆ ಸಮರ್ಪಿಸುತ್ತಾರೆ ಆ ವಿಗ್ರಹ ಇಂದಿಗೂ ಸೊದೆ ಶ್ರೀಗಳ ಆಶ್ರಯದಲ್ಲಿದ್ದು ಪರಂಪರೆಯಿಂದ ಪೂಜೆಗೊಳ್ಳುತ್ತಾ ಬಂದಿದೆ.

ವಾದಿರಾಜರ ಸಾಧನೆ ಶ್ರೀ ವಾದಿರಾಜರು ನಿತ್ಯ ನೈವೇದ್ಯವನ್ನು ಚಿನ್ನದ ಹರಿವಾಣದಲ್ಲಿಟ್ಟು ತನ್ನ ತಲೆಯ ಮೇಲೆ ಎತ್ತಿ ಹಿಡಿದ ಕೂಡಲೇ ಶ್ರೀ ಹಯಗ್ರೀವ ದೇವರು ಕುದುರೆ ರೂಪದಲ್ಲಿ ಬಂದು ಎರಡೂ ಕಾಲುಗಳನ್ನು ಶ್ರೀ ವಾದಿರಾಜರ ಭುಜದ ಮೇಲಿಟ್ಟು ನೈವೇದ್ಯ ಸ್ವೀಕರಿಸಿ ವಾದಿರಾಜರಿಗೆ ವಿಶೇಷ ಅನುಗೃಹ ವಾಗುತ್ತಿತ್ತಂತೆ. ಶ್ರೀ ವಾದಿರಾಜರು ಶ್ರೀ ಕೃಷ್ಣ ಮಠಕ್ಕೆ ವಿಶೇಷ ಕೊಡುಗೆಯಾಗಿ ಕೃಷ್ಣನ ಸನ್ನಿಧಿಯಲ್ಲಿ ಮುಖ್ಯ ಪ್ರಾಣ ಮತ್ತು ಗರುಡ ದೇವರನ್ನು ಎಡ-ಬಲದಲ್ಲಿ ಸ್ಥಾಪಿಸಿ ನಿತ್ಯ ಪೂಜಿಸಿ,ತಮ್ಮ ಗುರುಗಳಾದ ಮದ್ವಾಚಾರ್ಯರ ವಿಶಿಷ್ಟ ಶೈಲಿಯ ವಿಗ್ರಹ ಸ್ಥಾಪಿಸಿ ಅಷ್ಟ ಮಠದ ಯತಿಗಳಿಗೆ ಗುರು ಪೂಜೆಯಲ್ಲಿ ವ್ಯವಸ್ಥೆ ಮಾಡಿದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಪ್ರತಿಷ್ಠೆ ಮಾಡಿದ್ದಾರೆ. ವಾದಿರಾಜರ ಸೇವಕರಾಗಿ ಸೊದೆಯಲ್ಲಿ ಶ್ರೀ ಭೂತರಾಜರು ನೆಲೆಸುವಂತಾಯಿತು. ತಿರುಪತಿ ಬೆಟ್ಟವನ್ನೇರಿ ಮೊಣಕಾಲನ್ನೂರಿಕೊಂಡೇ ಶ್ರೀನಿವಾಸ ದೇವರನ್ನು ಸಂದರ್ಶಸಿಸಿ ಆತನಿಗೆ `ಸಾಲಿಗ್ರಾಮ ಮಾಲಿಕೆ’ ಅರ್ಪಿಸಿದರು.
ವಾದಿರಾಜರ ಸರ್ವಶ್ರೇಷ್ಠ ಗ್ರಂಥ `ಶ್ರೀ ರುಕ್ಮೀಣೇಶ ವಿಜಯ’ ಕೇವಲ 19 ದಿನಗಳಲ್ಲಿ ರಚಿಸಿ 19 ಅದ್ಯಯನದ 1238 ಶ್ಲೋಕಗಳನ್ನೊಳಗೊಂಡಿದೆ.
ವಾದಿರಾಜರು ನಡೆದಾಡಿದ ಸ್ಥಳದಲ್ಲಿ ಹೆಜ್ಜೆಯ ಗುರುತು ಇಲ್ಲಿಯೇ. ಸಮೀಪ ಹೂವಿನಕೆರೆಯಿಂದ ಹರಿದುಹೋಗುವ ನದಿಯ ಪಕ್ಕದಲ್ಲಿ ಬಂಡೆಯ ಮೇಲೆ ವಾದಿರಾಜರು ಬಾಲ್ಯದಲ್ಲಿ ನಡೆದಾಡಿದ ಸ್ಥಳದಲ್ಲಿ ಮರ‍್ನಾಲ್ಕು ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ. ಹಿಂದೆ ಬೀಮನ ಹೆಜ್ಜೆಯ ಗುರುತು ಎಂದು ಹೇಳಲಾಗಿತ್ತು. ಕ್ರಮೇಣ ಪಾಜಕ ಕ್ಷೇತ್ರದಲ್ಲಿ ಮದ್ವಾಚಾರ್ಯರ ಪಾದಕ್ಕೆ ಈ ಹೆಜ್ಜೆಗಳು ಹೋಲಿಕೆಯಾಗಿದ್ದರಿಂದ ವಾದಿರಾಜರ ಹೆಜ್ಜೆ ಎಂದು ಭಕ್ತರು ನಂಬಿದ್ದರು. ಈ ಹೆಜ್ಜೆಯ ಗುರುತುಗಳನ್ನು ರಕ್ಷಣೆಗಾಗಿ 1980 ರಲ್ಲಿ ಮಂಟಪ ಕಟ್ಟಲಾಗಿದೆ. ವಾದಿರಾಜರು ಭಾವಿಸಮೀರರಾದ ಕಾರಣ ವಾಯು ಶಕ್ತಿಯಿಂದ ಕ್ಷಣಮಾತ್ರದಲ್ಲಿ ಹೆಜ್ಜೆಯ ಗುರುತು ಕಾಣಿಸಿಕೊಂಡಿದೆ ಎಂಬುವುದು ಭಕ್ತರ ನಂಬಿಕೆಗೆ ಅರ್ಹವಾಗಿದೆ.
ವಾದಿರಾಜರ ಕುಟುಂಬಿಕರ ಆರಾದ್ಯ ದೇವರಾದ ಚೆನ್ನಕೇಶವ ದೇವಾಲಯ ಅವರ ಪರಮ ಶಿಷ್ಯ ಭೂತದೇವರ ಮೂರ್ತಿ ಇಲ್ಲಿದ್ದು ನಿತ್ಯವು ಪೂಜೆ ನಡೆಯುತ್ತಿದೆ. ದೇವಸ್ಥಾನದ ಎದುರುಗಡೆ ವಿಶಾಲವಾದ ಕೆರೆ, ಗೌರಿ ಗದ್ದೆಯಲ್ಲಿ ವಾದಿರಾಜರ ಸಾಲಿಗ್ರಾಮ ಮೂರ್ತಿ ಭಕ್ತಾಭಿಮಾನಿಗಳನ್ನು ಆಕರ್ಷಿಸಿದೆ.

ಮಠದಲ್ಲಿ ಪೂಜಾ ಕೈಂಕರ್ಯ: ಹೂವಿನಕೆರೆ ಮತ್ತು ಸುತ್ತ ಮುತ್ತ ಗ್ರಾಮಗಳು ವಾದಿರಾಜ ಮಹಾ ಸಂಸ್ಥಾನಕ್ಕೆ ಸೇರಿದ್ದು ಕಳೆದ ಮೂರು ತಲೆಮಾರುಗಳಿಂದ ವೇದ ಮೂರ್ತಿ ಗುಂಡಾ ಭಟ್ಟರು ಚೆನ್ನಕೇಶವ ದೇವರ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಬಂದಿದ್ದು, ನಂತರ ಅವರ ಮಗ ವಿದ್ವಾನ್ ವಾದಿರಾಜ ಭಟ್ ಪ್ರಸ್ತುತ ವಾಗೀಶ ಭಟ್ಟರು ನಿತ್ಯ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇಲ್ಲಿಯೇ ಪಕ್ಕದಲ್ಲಿರುವ ಭೂತರಾಜರ ಪೂಜೆಯನ್ನು ಇತ್ತೀಚೆಗೆ ಮಂಜುನಾಥ ಉಡುಪ ಮತ್ತು ಮಕ್ಕಳಿಂದ ನಡೆಯುತ್ತಿದೆ. ಸೋದೆ ಮಠದ ಶ್ರೀಗಳಾದ ವಿಶ್ವ ವಲ್ಲಭ ತೀರ್ಥರು ಪರ್ಯಾಯ ಪೀಠವನ್ನು ಏರುವ ಸಂದರ್ಭದಲ್ಲಿ ಹೂವಿನಕೆರೆ ವಾದಿರಾಜರ ಜನ್ಮ ಕ್ಷೇತ್ರವು ವಿಶೇಷ ಆಕರ್ಷಣೀಯ ಸ್ಥಳವಾಗಿ ರಾಜ್ಯಾದ್ಯಾಂತ ಭಕ್ತಾಭಿಮಾನಿಗಳು ಇಂದಿಗೂ ಇಲ್ಲಿಗೆ ಆಗಮಿಸುತ್ತಿದ್ದಾರೆ.

ವಾದಿರಾಜ ಜಯಂತಿಯಂದು ಪ್ರತಿವರ್ಷವು ಸೊದೆ ಮಠದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ವಾದಿರಾಜ ಸಂಸ್ಥಾನದ ಶಿಷ್ಯರಿಂದ ಪೂಜೆ, ಆರಾದನಾ ಕಾರ್ಯಕ್ರಮಗಳು ನಡೆಯುತ್ತದೆ. ದೈವಜ್ಞ ಬ್ರಾಹ್ಮಣರು, ರಾಯ್ಕರ್, ವರ್ಣಿಕರ್, ಕುಟುಂಬಸ್ಥರು ಹೆಚ್ಚಾಗಿ ಈ ಮಠದ ಶಿಷ್ಯರು ಆರಾದಕರಾಗಿದ್ದಾರೆ,
ಫೆ 15 ರಿಂದ 21: ಭಾವಿಸಮೀರ ಶ್ರೀ ವಾದಿರಾಜ ಗುರು ಸಾರ್ವಮರಿಗೆ ನೂತನ ಪ್ರಾಸಾದ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವ
ಪರಮಪೂಜ್ಯ ಶ್ರೀಶ್ರೀವಿಶ್ವೋತ್ತಮ ತೀರ್ಥರ ಪರಮಾನುಗ್ರಹದಿಂದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥರ ಮಾರ್ಗದರ್ಶನದಲ್ಲಿ ಗುರುರಾಜರ ಭಕ್ತರ ಸಹಕಾರದಿಂದ ಗರ್ಭಾಲಯಕ್ಕೆ ಸುಂದರವಾದ ಪ್ರಾಸಾದವನ್ನು ನಿರ್ಮಿಸಲಾಗಿದೆ.ಇದರ ಸಮರ್ಪಣಾ ಮಹೋತ್ಸವ ಇದೇ ಬರುವ ಫೆಬ್ರವರಿ 15ರಿಂದ 21ರವರೆಗೆ ನಡೆಯಲಿದೆ.
ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ 15.02.2024ನೇ ಗುರುವಾರ ಬೆಳಿಗ್ಗೆ 9:30ಕ್ಕೆ ಪ್ರಾರ್ಥನೆ, ಪುಣ್ಯಾಹ, ನಾಂದೀ, ಅರಣಿಮಥನ, ಗಣಪತಿ ಯಾಗ
ಸಂಜೆ 4 ರಿಂದ ಹೊರ ಕಾಣಿಕೆ ಸಮರ್ಪಣೆ- ಹೂವಿನಕೆರೆ ಕ್ರಾಸ್ ನಿಂದ ಮೆರವಣಿಗೆ
ಸಾಯಂಕಾಲ 4:30 ರಿಂದ ವಾಸ್ತು ರಕ್ಷೋಘ್ನ,ಪ್ರಾಸಾದ ಶುದ್ಧಿ.
16.02 2024 ನೇ ಶುಕ್ರವಾರ ಬೆಳಿಗ್ಗೆ 6 ರಿಂದ ಗವ್ಯಯಾಗ, ಭೂವರಾಹಯಾಗ,
ಸಾಯಂಕಾಲ 7ಕ್ಕೆ ರಾಮಭದ್ರಕ ಮಂಡಲ ಪೂಜೆ.
17.02.2024 ನೇ ಶನಿವಾರ ಬೆಳಿಗ್ಗೆ 7ರಿಂದ ತತ್ತ್ವ ಯಾಗ, ವಿಷ್ಣು ಗಾಯತ್ರಿ ಯಾಗ, ಪವಮಾನ ಹೋಮ.
ಸಾಯಂಕಾಲ 5ಕ್ಕೆ ಅಶ್ವತ್ಥ ಕಟ್ಟೆ, ನಾಗಬನ ಸರೋವರದಲ್ಲಿ ವಾಸ್ತು.
ಸಂಜೆ 5 ರಿಂದ ಸಭಾ ಕಾರ್ಯಕ್ರಮ
ಅಧ್ಯಕ್ಷತೆ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸೋದೆ ಶ್ರೀ ವಾದಿರಾಜ ಮಠ
ಮುಖ್ಯ ಅಭ್ಯಾಗತರು: ನಿಪ್ಪಾಣಿ ಗುರುರಾಜ ಆಚಾರ್ಯ ಆಸ್ಥಾನ ವಿದ್ವಾಂಸರು ಸೋದೆ ಶ್ರೀ ವಾದಿರಾಜ ಮಠ
ಕಿರಣ್ ಕುಮಾರ್ ಕೊಡ್ಗಿ, ಶಾಸಕರು, ಕುಂದಾಪುರ.
ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವರು.
ಹೆಚ್ ವಿ ಶಾಂತರಾಮ್ ರಾವ್, ಅಧ್ಯಕ್ಷರು, ಶ್ರೀ ಕೃಷ್ಣ ಸೇವಾ ಸಮಾಜ ಟ್ರಸ್ಟ್.
ಗೋಪಾಡಿ ಶ್ರೀನಿವಾಸ ರಾವ್, ಮುಖ್ಯಸ್ಥರು, ಮಯೂರ ಸಮೂಹ ಸಂಸ್ಥೆ.
ನೇರಂಬಳ್ಳಿ ರಾಘವೇಂದ್ರರಾವ್, ಅಧ್ಯಕ್ಷರು, ಹೂವಿನಕೆರೆ ಮಠ ಸೇವಾ ಸಮಿತಿ.
ಹರಿಶ್ಚಂದ್ರ ಬುರುಡೆ, ಉದ್ಯಮಿಗಳು, ಕುಂದಾಪುರ.
ಪ್ರಶಾಂತ್ ಶೇಟ್, ಎಸ್ ಎಲ್ ಶೇಟ್ ಜುವೆಲರ್ಸ್ ಅಂಡ್ ಡೈಮಂಡ್ ಹೌಸ್ ,ಮಂಗಳೂರು.
ಮಂಜುನಾಥ್ ಶೆಟ್ಟಿಗಾರ್, ಅಧ್ಯಕ್ಷರು ,ಕಾಳಾವರ ಗ್ರಾಮ ಪಂಚಾಯತ್.
ಪಾಡಿಗಾರು ಶ್ರೀನಿವಾಸ್ ತಂತ್ರಿಗಳು, ದಿವಾನರು, ಸೋದೆ ವಾದಿರಾಜ ಮಠ.
ವಿಶೇಷ ಉಪನ್ಯಾಸ: ಬಿ. ಎನ್ ವಿಜಯೀಂದ್ರ ಆಚಾರ್ಯ, ಮೈಸೂರು.
ಸಂಜೆ 6 ರಿಂದ ಭಕ್ತಿಗಾನ ಸುಧೆ
ವಿದ್ವಾನ್ ಪ್ರಾದೇಶ ಆಚಾರ್ಯ ಹಾಗೂ ಸಂಗಡಿಗಳರಿಂದ ಶ್ರೀ ವಾದಿರಾಜರ ಕೀರ್ತನೆಗಳ ಗಾಯನ
18.02. 2024ನೇ ಭಾನುವಾರ
ಬೆಳಿಗ್ಗೆ 5:30ಕ್ಕೆ :ಬ್ರಹ್ಮಕಲಶ ಪ್ರತಿಷ್ಠೆ, ಪ್ರಧಾನ ಯಾಗ
8:30ಕ್ಕೆ :ಬ್ರಹ್ಮಕಲಶಾಭಿಷೇಕ
9.00ಕ್ಕೆ ನಾಗ ಪ್ರತಿಷ್ಠೆ,ಅಶ್ವತ್ಥ ವಿವಾಹ.
9:45ಕ್ಕೆ ಯತಿವರೇಣ್ಯರ ಶೋಭಾ ಯಾತ್ರೆ ಹೂವಿನಕೆರೆ ಕ್ರಾಸ್ ನಿಂದ
ದಿವ್ಯ ಉಪಸ್ಥಿತಿಯೊಂದಿಗೆ ಅನುಗ್ರಹ
ಶ್ರೀ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಶ್ರೀ ಕೃಷ್ಣಾಪುರ ಮಠ.
ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠ.
ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು,ಶ್ರೀ ಕಾಣೆಯೂರು ಮಠ.
ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಸುಬ್ರಹ್ಮಣ್ಯ ಮಠ.
ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸೋದೆ ಶ್ರೀ ವಾದಿರಾಜ ಮಠ.
ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು, ಶ್ರೀ ಭೀಮನ ಕಟ್ಟೆ ಮಠ.
ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಅದಮಾರು ಮಠ.
ಶ್ರೀ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಶ್ರೀಪಾದರು, ಕಿರಿಯಪಟ್ಟ, ಶ್ರೀ ಪಲಿಮಾರು ಮಠ.
ಮಧ್ಯಾಹ್ನ 11:30 ಕ್ಕೆ ತೀರ್ಥ ಪ್ರಸಾದ.
ಮಧ್ಯಾಹ್ನ 12:30 ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ.
ಸಾಯಂಕಾಲ 7ಕ್ಕೆ ದೀಪಾ ಆರಾಧನೆ, ರಂಗ ಪೂಜೆ,ಆಶ್ಲೇಷ ಬಲಿ .
ರಾತ್ರಿ 7 ರಿಂದ ಶ್ರೀ ಅನಂತಪದ್ಮನಾಭ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದವರಿಂದ ಯಕ್ಷಗಾನ ಬಯಲಾಟ .ಪ್ರಸಂಗ ಪಟ್ಟಾಭಿಷೇಕ- ಚಕ್ರ ಚಂಡಿಕೆ,
19.02.2024 ನೇ ಸೋಮವಾರ
ಮಧ್ಯಾಹ್ನ 11:30ಕ್ಕೆ ಸ್ವಪ್ನ ವೃಂದಾನಾಖ್ಯಾನ ಹೋಮ ಪೂರ್ಣಾಹುತಿ.
ಮಧ್ಯಾಹ್ನ 2:30 ರಿಂದ ಯಕ್ಷಗಾನ ತಾಳಮದ್ದಳೆ
ಪ್ರಸಂಗ: “ಶ್ರೀ ವಾದಿರಾಜ ವಿಜಯ” ಪಧ್ಯ ರಚನೆ :ಅವಧಾನಿ ಸುಬ್ರಹ್ಮಣ್ಯ ಭಟ್. ನಿರ್ದೇಶನ :ವಾಸುದೇವ ರಂಗಾಭಟ್.
ಸಾಯಂಕಾಲ 5 ರಿಂದ ಚಕ್ರಾಬ್ಜ ಮಂಡಲ ಪೂಜೆ.
ರಾತ್ರಿ 7 ರಿಂದ ‘ಭರತನಾಟ್ಯ’ ಕೋಟೇಶ್ವರ ಮಾಗಣೆಯ ಕಲಾವಿದರಿಂದ
20.02.2024 ನೇ ಮಂಗಳವಾರ
ಬೆಳಿಗ್ಗೆ 6 ರಿಂದ ಅಹೋರಾತ್ರಿ ಭಜನೆ.
ಪ್ರಾತಃಕಾಲ 6 ರಿಂದ ಮರುದಿನ 6 ರವರೆಗೆ ಶ್ರೀ ವಾದಿರಾಜ ಭಜನಾ ಮಂಡಳಿ ಹೂವಿನಕೆರೆ, ಇವರ ಆಶ್ರಯದಲ್ಲಿ ವಿವಿಧ ಭಜನೆ ತಂಡಗಳಿಂದ ಅಹೋರಾತ್ರಿ ಭಜನೆ.
ಸಂಜೆ 5 ರಿಂದ ‘ವಿಶೇಷ ನಾಮ ಸಂಕೀರ್ತನೆ’
ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಉಡಯಾಲೂರು ಕಲ್ಯಾಣ ರಾಮನ್ ಹಾಗೂ ಸಂಗಡಿಗರಿಂದ.
21.2.2024 ನೇ ಬುಧವಾರ ಶ್ರೀ ವಾದಿರಾಜ ಜಯಂತಿ
ಪಂಚ ವಿಂಶತಿ ಕಲಶಾಭಿಷೇಕ
ಬೆಳಿಗ್ಗೆ 4:30 ರಿಂದ ಪಟ್ಟದ ದೇವರ ಪೂಜೆ ಪ್ರಾರಂಭ.
ಬೆಳಿಗ್ಗೆ 6:30 ರಿಂದ ತೀರ್ಥ ಪ್ರಸಾದ
ರಾತ್ರಿ 7ಕ್ಕೆ ಶ್ರೀ ಭೂತರಾಜರ ವಿಶೇಷ ಪೂಜೆ.
ವಿಳಾಸ: ಶ್ರೀ ವಾದಿರಾಜ ಮಠ ಹೂವಿನಕೆರೆ ಅಸೋಡು ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು 576222 ಉಡುಪಿ ಜಿಲ್ಲೆ.
ಮಾರ್ಗಸೂಚಿ: *ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಿಂದ 3 ಕಿ.ಮೀ. *NH 66 ಬೀಜವಾಗಿ ಕ್ರಾಸ್ ನಿಂದ ವಕ್ವಾಡಿ ಮಾರ್ಗವಾಗಿ 4ಕಿ.ಮೀ. *ಚಾರುಕೊಟ್ಟಿಗೆಯಿಂದ 2.5 ಕಿ.ಮೀ
ಸಂಪರ್ಕ: 9448881144/7019999265/9964587498
ಸರ್ವರಿಗೂ ಆದರದ ಸ್ವಾಗತ ಬಯಸುವ;
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶ್ರೀ ವಾದಿರಾಜ ಮಠ ಹೂವಿನಕೆರೆ, ದಿವಾನರು ಸೋದೆ ಶ್ರೀ ವಾದಿರಾಜ ಮಠ, ಶ್ರೀ ವಾದಿರಾಜ ಭಜನಾ ಮಂಡಳಿ ಹೂವಿನಕೆರೆ
—–ಸುಧಾಕರ ವಕ್ವಾಡಿ. ಸಂಪಾದಕರು, ‘ಕನ್ನಡ ಕರಾವಳಿ’







