ಯುವಜನ
ಹೆಮ್ಮಾಡಿ: ಕಾರು -ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಸಾವು
Views: 160
ಕನ್ನಡ ಕರಾವಳಿ ಸುದ್ದಿ: ಹೆಮ್ಮಾಡಿ ರಸ್ತೆಯ ಬಾಳಿಕೆರೆ ಜಾಡಿ ಹೈಗುಳಿ ದೇವಸ್ಥಾನದ ಜಾಡಿ ರಸ್ತೆಯ ಬಳಿ ಮಂಗಳವಾರ ನಡೆದ ಕಾರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಗುಡ್ಡಮ್ಮಾಡಿಯ ರಾಘವೇಂದ್ರ – ನಾಗರತ್ನ ದಂಪತಿಯ ಪುತ್ರ ದರ್ಶಿತ್ (3) ಮೃತ ಬಾಲಕ.
ಈತ ತಂದೆ ತಾಯಿ ಜತೆ ಬೈಕಿನಲ್ಲಿ ಕೊಲ್ಲೂರು ಕಡೆಯಿಂದ ಹೆಮ್ಮಾಡಿ ಕಡೆಗೆ ಬರುತ್ತಿದ್ದಾಗ ಹೆಮ್ಮಾಡಿ ಕಡೆಯಿಂದ ಜೋಶಿ ವಿ. ತೋಮಸ್ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿಯಾಗಿತ್ತು. ಪರಿಣಾಮ ಬೈಕ್ ಸವಾರ ರಾಘವೇಂದ್ರ, ನಾಗರತ್ನ ಹಾಗೂ ದರ್ಶಿತ್ ಗಾಯಗೊಂಡಿದ್ದರು. ಮೂವರನ್ನೂ ಆಸ್ಪತ್ರೆಗೆ ಸೇರಿಸಿದ್ದು, ದರ್ಶಿತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರಾಘವೆಂದ್ರ ಹಾಗೂ ನಾಗರತ್ನ ಚೇತರಿಸಿಕೊಳ್ಳುತ್ತಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






