ಹೆದ್ದಾರಿ ಸೇತುವೆಯ ಗೋಡೆಗೆ ವೇಗವಾಗಿ ಬಂದು ಬಡಿದ ಬಸ್:12 ಬಲಿ, 37 ಗಾಯ

Views: 277
ಕನ್ನಡ ಕರಾವಳಿ ಸುದ್ದಿ :ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 12 ಜನರ ದುರ್ಮರಣವನ್ನು ಅಪ್ಪಿದ್ದು, 40 ಜನರಿಗೆ ಗಂಭೀರ ಗಾಯಗಳಾಗಿವೆ. ಸಲಾಸರ್ದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಬರುತ್ತಿದ್ದ ಬಸ್ ಸಿಕಾರ್ ಜಿಲ್ಲೆಯ ಲಕ್ಷ್ಮೀಗರ್ ಸಮೀಪದಲ್ಲಿ ಹೆದ್ದಾರಿಯ ಸೇತುವೆ ಗೊಡೆಗೆ ಗುದ್ದಿದೆ ಪರಿಣಾಮವಾಗಿ 12 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಇನ್ನು ಗಂಭೀರವಾಗಿ ಗಾಯಗೊಂಡಿರುವವರಲ್ಲಿ ಅನೇಕರ ಆರೋಗ್ಯದ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಲಕ್ಷ್ಮೀನಗರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಪೊಲೀಸರು ಹೇಳುವ ಪ್ರಕಾರ ಈ ಒಂದು ಘಟನೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನಡೆದಿದೆ. ಸಲಾಸರ್ನಿಂದ ಬರುತ್ತಿದ್ದ ಬಸ್ ವಿಪರೀತ ವೇಗದಿಂದಾಗಿ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯ ಸೇತುವೆಯ ಗೋಡೆಗೆ ಗುದ್ದಿದೆ ಪರಿಣಾಮವಾಗಿ ಸ್ಥಳದಲ್ಲಿಯೇ 12 ಜನರು ಪ್ರಾಣ ಕಳೆದುಕೊಂಡಿದ್ದು ಬಹಳಷ್ಟು ಜನರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಸಿಕಾರ್ ಜಿಲ್ಲೆಯ ಎಸ್ಪಿ ಭುವನ್ ಭೂಷಣ್ ಹೇಳಿದ್ದಾರೆ
ಎಸ್ ಕೆ ಆಸ್ಪತ್ರೆಯ ಅಧೀಕ್ಷಕರು ಹೇಳುವ ಪ್ರಕಾರ ಅಪಘಾತವಾದಾಗ ಸ್ಥಳದಲ್ಲಿಯೇ ಸುಮಾರು 7 ಜನರ ಸಾವನ್ನಪ್ಪಿದ್ದರು. ಆಸ್ಪತ್ರೆಗೆ ಕರೆತಂದಿದ್ದ 37 ಜನರಲ್ಲಿ ಇಬ್ಬರು ಮೃತಪಟ್ಟಿದ್ದರು. ಇನ್ನು ಮೂವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನು ಗಾಯಾಳುಗಳಲ್ಲಿ 7 ಜನರನ್ನು ಜೈಪುರ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. 22 ರಿಂದ 23 ಜನರಿಗೆ ಇನ್ನೂ ಚಿಕಿತ್ಸೆಯು ಮುಂದುವರಿದೆ ಎಂದು ಮಹೇಂದ್ರ ಕಿಚಡ್ ಹೇಳಿದ್ದಾರೆ.






