ಹೆಂಡತಿ ಮತ್ತು ಆಕೆಯ ಬಾಯ್‌ಫ್ರೆಂಡ್ಸ್ ಗಳಿಂದ ನನ್ನನ್ನು ಕಾಪಾಡಿ ಎಂದು ಮುಖ್ಯಮಂತ್ರಿಗೆ ಪತ್ರ ಬರೆದ ಗಂಡ!

Views: 111
ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಗ್ವಾಲಿಯರ್ನ ನಡುರಸ್ತೆಯಲ್ಲಿ ಕುಳಿತ 38 ವರ್ಷದ ವ್ಯಕ್ತಿಯೊಬ್ಬ, ನನಗೆ ನನ್ನ ಪತ್ನಿ ಹಾಗೂ ಆಕೆಯ ಪ್ರೇಮಿಗಳಿಂದ ಜೀವಭಯವಿದೆ ನನಗೆ ರಕ್ಷಣೆ ಬೇಕು ಎಂದು ಪ್ರತಿಭಟನೆ ಕುಳಿತ ವಿಚಿತ್ರ ಘಟನೆ ನಡೆದಿದೆ.
ಪತ್ನಿ ಹಾಗೂ ಆಕೆಯ ಬಾಯ್ಫ್ರೆಂಡ್ಗಳು ನನ್ನನ್ನನು ಸಾಯಿಸುತ್ತಾರೆ. ಅದಕ್ಕಾಗಿ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಹಿಂದೆ ಗಂಡನನ್ನು ಹತ್ಯೆ ಮಾಡಿ ಡ್ರಮ್ನಲ್ಲಿ ತುಂಬಿಸಿದ ಮೀರತ್ನಲ್ಲಿ ನಡೆದ ಮಾದರಿಯಲ್ಲಿಯೇ ನನ್ನ ಹತ್ಯೆ ಪ್ಲ್ಯಾನ್ ಮಾಡಿದ್ದಾರೆ, ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಗೆ ಪತ್ರ ಬರೆದಿದ್ದಾನೆ.
ಪ್ರತಿಭಟನೆ ಕುಳಿತಿರುವ ವ್ಯಕ್ತಿ ಮಾಡಿರುವ ಇನ್ನೊಂದು ಗಂಭೀರವಾದ ಆರೋಪ ಅಂದ್ರೆ , ನನ್ನ ಹೆಂಡತಿಗೆ ಒಬ್ಬನಲ್ಲ ನಾಲ್ವರ ಪ್ರಿಯಕರರು ಇದ್ದಾರೆ. ಆಕೆ ತನ್ನ ಪ್ರಿಯಕರರೊಂದಿಗೆ ಸೇರಿ ನನ್ನ ಮಗ ಹರ್ಷನನ್ನು ಕೊಲ್ಲಲು ಷಡ್ಯಂತ್ರ ಮಾಡಿದ್ದಳು ಮತ್ತು ಸಣ್ಣ ಮಗನನ್ನು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾಳೆ. ಈಗ ನನ್ನನ್ನು ಕೊಲ್ಲಲು ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಅವಳಿಗೆ ನಾಲ್ವರು ಪ್ರೇಮಿಗಳು ಇದ್ದಾರೆ. ಅದರಲ್ಲಿ ಒಬ್ಬನೊಂದಿಗೆ ಲೀವ್ ಇನ್ ರಿಲೇಷನ್ಶೀಪ್ನಲ್ಲಿ ಇದ್ದಾಳೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.
ಸಂತ್ರಸ್ತ ಹೇಳುವ ಪ್ರಕಾರ ಈಗಾಗಲೇ ಆತ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾನಂತೆ. ಆದರೆ ಪೊಲೀಸರು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ನಾನೀಗ ನಿಸ್ಸಾಹಯಕನಾಗಿದ್ದೇನೆ ಎಂದು ಗ್ವಾಲಿಯರ್ನ ಪುಲ್ಭಾಗ್ ರಸ್ತೆಯ ನಡುವೆ ಕುಳಿತು ಪ್ರತಿಭಟನೆ ಮಾಡಿದ್ದಾನೆ. ಅಲ್ಲದೇ ಸಿಎಂಗೆ ಪತ್ರ ಬರೆದು ನನ್ನ ನೋವನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡು ನನಗೆ ನ್ಯಾಯ ಒದಗಿಸುತ್ತಾರೆ ಎಂದು ಭರವಸೆಯಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾನೆ.