ಸಾಂಸ್ಕೃತಿಕ

ಹಾಸ್ಯ ನಟ ಚಿಕ್ಕಣ್ಣ ಮದುವೆಯಾಗುತ್ತಿರುವ ಚಲುವೆ ಯಾರು ಗೊತ್ತಾ? 

Views: 256

ಕನ್ನಡ ಕರಾವಳಿ ಸುದ್ದಿ: ತಮ್ಮ ಕಾಮಿಡಿ ಮೂಲಕ ಸಿನಿ ಪ್ರಿಯರನ್ನು ರಂಜಿಸುವ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಗುಡ್ ನ್ಯೂಸ್ ಹೊರ ಬಿದ್ದಿದೆ.

ಬಹಳ ಕಷ್ಟಪಟ್ಟು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಣ್ಣ ಇಷ್ಟು ವರ್ಷ ಬ್ಯಾಚುಲ‌ರ್ ಆಗಿದ್ದರು. ಆದರೆ ಇದೀಗ ಹಸೆಮಣೆ ಎರಲು ತಯಾರಾಗಿದ್ದಾರೆ.

ಚಿಕ್ಕಣ್ಣ ಅವರು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯನ್ನು ವಿವಾಹವಾಗುತ್ತಿದ್ದಾರೆ. ಮನೆಯವರು ನೋಡಿರುವ ಸಂಬಂಧ ಇದು ಎನ್ನಲಾಗಿದೆ.

ಚಿಕ್ಕಣ್ಣ ತಮ್ಮ ಮದುವೆ ನಿಶ್ಚಯವನ್ನು ಸದ್ದಿಲ್ಲದೆ ಮುಗಿಸಿಕೊಂಡಿದ್ದಾರೆ. ಹೂ ಮುಡಿಸುವ ಶಾಸ್ತ್ರವನ್ನು ಮಾಡಿ ಆಗಿದೆ. ಮದುವೆಯ ದಿನಾಂಕವೂ ನಿಗದಿ ಆಗಿದೆಯಂತೆ

ಚಿಕ್ಕಣ್ಣ ಮದುವೆ ಆಗುತ್ತಿರುವ ಯುವತಿಯ ಹೆಸರು ಪಾವನಾ. ಮಹದೇವಪುರ ಗ್ರಾಮದ ಯುವತಿ ಈಕೆ. ಇತ್ತೀಚೆಗಷ್ಟೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಚಿಕ್ಕಣ್ಣ ಟಾಕ್ ಶೋಗಳಲ್ಲಿ ಮದುವೆ ವಿಷಯ ಮಾಡಿದಾಗೆಲ್ಲ ತಮಾಷೆ ಮಾಡುತ್ತಾ ಹಾರಿಕೆ ಉತ್ತರ ನೀಡುತ್ತಿದ್ದರು. ಈಗ ಕೊನೆಗೆ ಗೃಹಸ್ಥರಾಗಲು ಸಜ್ಜಾಗಿದ್ದಾರೆ.

ಹಾಸ್ಯನಟ ನಂತರ ಹೀರೋ ಸಹ ಅದ ಚಿಕ್ಕಣ್ಣ ಮದುವೆಯಿಂದ ದೂರವಿದ್ದರು. ಆದರೆ ಈಗ ಕೊನೆಗೂ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿದ್ದು ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ.

Related Articles

Back to top button