ಹನಿಮೂನ್‌ಗೆಂದು ತೆರಳಿದ ದಂಪತಿ ನಿಗೂಢ ನಾಪತ್ತೆ ಪ್ರಕರಣ: ಇದೀಗ ಪತಿಯ ಮೃತದೇಹ ಪತ್ತೆ

Views: 143
ಕನ್ನಡ ಕರಾವಳಿ ಸುದ್ದಿ: ಶಿಲ್ಲಾಂಗ್ ಹನಿಮೂನ್‌ಗೆಂದು ಹೋದ ದಂಪತಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಶಿಲ್ಲಾಂಗ್‌ನಲ್ಲಿ ನಡೆದಿತ್ತು.ಇದೀಗ ಪತಿಯ ಮೃತದೇಹ ಪತ್ತೆಯಾಗಿದೆ.
ಮೇ 11ರಂದು ವಿವಾಹವಾಗಿದ್ದ ರಾಜಾ ಹಾಗೂ ಸೋನಮ್ ರಘುವಂಶಿ ದಂಪತಿ ಹನಿಮೂನ್‌ಗೆಂದು ಶಿಲ್ಲಾಂಗ್‌ಗೆ ತೆರಳಿದ್ದು ನಂತರ ನಾಪತ್ತೆಯಾಗಿದ್ದರು. ಡೋನ್‌ಗಳ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ, 11ನೇ ದಿನ ಹಳ್ಳದಲ್ಲಿ ಪತಿಯ ಮೃತದೇಹ ಕಂಡುಬಂದಿದೆ.
ಕೈಯಲ್ಲಿ ರಾಜ ಎಂದು ಬರೆದಿರುವ ಹಚ್ಚೆಯನ್ನು ನೋಡಿದ ನಂತರ ಕುಟುಂಬವು ಶವವನ್ನು ದೃಢಪಡಿಸಿತು. ಸ್ಥಳದಲ್ಲಿ ಮಹಿಳೆಯ ಬಿಳಿ ಶರ್ಟ್, ಸ್ಮಾರ್ಟ್ ವಾಚ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ರಾಜಾ ಅವರ ಮೃತದೇಹ ಪತ್ತೆಯಾದ ನಂತರವೂ ಸೋನಂ ಅವರ ಯಾವುದೇ ಸುಳಿವು ಸಿಕ್ಕಿಲ್ಲ. 6 ಪೊಲೀಸ್ ತಂಡಗಳು ನಿರಂತರವಾಗಿ ಹುಡುಕಾಟ ನಡೆಸುತ್ತಿವೆ. ಆರಂಭದಲ್ಲಿ ಮೇಘಾಲಯ ಆಡಳಿತವು ಗಂಭೀರತೆಯನ್ನು ತೋರಿಸಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಹವಾಮಾನ ವೈಪರೀತ್ಯದ ನೆಪ ಹೇಳಿ ಸಹಾಯ ತಡವಾಗಿ ಸಿಕ್ಕಿತು. ಸಮಯಕ್ಕೆ ಸರಿಯಾಗಿ ರಕ್ಷಣಾ ಕಾರ್ಯ ಮಾಡಿದ್ದರೆ ರಾಜಾ ಅವರ ಜೀವ ಉಳಿಸಬಹುದಿತ್ತು ಎಂದು ಕುಟುಂಬ ಹೇಳಿದೆ.