ಇತರೆ
ಸ್ವಾತಂತ್ರ್ಯದಿನಾಚರಣೆ ದಿನವೇ ಭೀಕರ ಸ್ಫೋಟ: ಬಾಲಕ ಸಾವು, 8ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ

Views: 162
ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ಸಂಭವಿಸಿದ್ದ ಅನುಮಾನಾಸ್ಪದ ಸ್ಫೋಟದಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದಾನೆ. ಮುಬಾರಕ್ (8) ಮೃತ ಬಾಲಕ
ವಿಲ್ಸನ್ ಗಾರ್ಡನ್ ನ ಚೆನ್ನಯ್ಯನ ಪಾಳ್ಯದಲ್ಲಿ ಇಂದು ಬೆಳಿಗ್ಗೆ ಏಕಾಏಕಿ ಸ್ಫೋಟಗೊಂಡಿದ್ದು, 10ಕ್ಕೂ ಹೆಚ್ವ್ಹು ಮನೆಗಳು ನೆಲಸಮವಾಗಿವೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಓರ್ವ ಗಾಯಾಳು ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.