ಸಾಂಸ್ಕೃತಿಕ

ಸಿನಿಮಾ ಟಿಕೆಟ್‌ಗೆ ಗರಿಷ್ಠ 200 ರೂ. ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿ ಆದೇಶ 

Views: 106

ಕನ್ನಡ ಕರಾವಳಿ ಸುದ್ದಿ: ಮಲ್ಟಿಪ್ಲೆಕ್ಸ್‌  ಸೇರಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಯ ಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂ.ಗಳ ಏಕರೂಪ ದರ ನಿಗದಿಪಡಿಸಿದ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಮಧ್ಯಂತರ ತಡೆ ನೀಡುವ ಕುರಿತಂತೆ ಮನವಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಇಂದು ಈ ಕುರಿತು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಜ್ಯ ಸರ್ಕಾರ 200 ರೂಪಾಯಿ ಟಿಕೆಟ್ ದರ ನಿಗದಿ ಮಾಡಿತ್ತು. ಇದೀಗ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಲ್ಟಿಪ್ಲೆಕ್ಸ್ ಅಸೋಸಿಯೇಷನ್‌ ಆಫ್‌ ಇಂಡಿಯಾ, ಹೊಂಬಾಳೆ ಫಿಲಂನ ವಿಜಯ್‌ ಕಿರಗಂದೂರು, ಪಿವಿಆರ್‌ ಐನಾಕ್ಸ್ ಲಿಮಿಟೆಡ್‌, ವಿಕೆ ಫಿಲಂಸ್‌, ಕೀ ಸ್ಟೋನ್‌ ಎಂಟರ್‌ಟೇನ್ಮೆಂಟ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಹೊಸಮನಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಕಾಂತಾರ ಚಾಪ್ಟರ್‌ 1 ಅನ್ನು ಅಕ್ಟೋಬರ್‌ ಮೊದಲ ವಾರದಲ್ಲಿ ತೆರೆಗೆ ತರಲಿರುವ ಹೊಂಬಾಳೆ ಫಿಲಂಸ್‌ ಸಂಸ್ಥೆಗೆ ಸರಕಾರದ ಈ ಕಾನೂನಿನಿಂದ ಮೊದಲ ಹೊಡೆತ ಬೀಳಲಿತ್ತು. ಬೆಂಗಳೂರಿ ಹಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾಂತಾರ ಸೇರಿದಂತೆ ಬಿಗ್‌ ಬಜೆಟ್‌ ಸಿನೆಮಾಗಳ ಟಿಕೆಟ್‌ಗಳು ಮೊದಲ ಶೋದಿಂದಲೇ ಹೌಸ್‌ಫುಲ್‌ ಆಗುತ್ತವೆ ಹಾಗೂ 1000 ಮೇಲ್ಪಟ್ಟು ದರ ವಿಧಿಸುತ್ತವೆ. ಗರಿಷ್ಠ 200 ರೂ.ಗಳ ದರದಿಂದ ಕಾಂತಾರದ ಗಳಿಕೆಗೆ ಹೊಡೆತ ಬೀಳುವ ಸಾಧ್ಯತೆ ಇತ್ತು. ಇದೀಗ ಹೈಕೋರ್ಟ್‌ ಮಧ್ಯಂತರ ತೀರ್ಪಿನಿಂದ ಬೀಸುವ ದೊಣ್ಣೆ ತಪ್ಪಿದೆ.

ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರಕ್ಕೆ ಕಡಿವಾಣವೇ ಇಲ್ಲದಂತೆ ಆಗಿತ್ತು. ಇದರಿಂದ ಸಾಮಾನ್ಯ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ಕಾರಣದಿಂದ ಜನರು ಥಿಯೇಟರ್ನತ್ತ ಮುಖ ಮಾಡುತ್ತಿಲ್ಲ ಎಂದು ಹೇಳಲಾಗಿತ್ತು. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಆದೇಶ ಹೊರಿಡಿಸಿತ್ತು. ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ಜೊತೆಗೆ ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ನಿಗದಿ ಮಾಡಲು ಮಾತ್ರ ಅವಕಾಶ ಇತ್ತು. ಹೊಸ ಆದೇಶವು ಸೆಪ್ಟೆಂಬರ್ 12ರಂದು ಜಾರಿಗೆ ಬಂದಿತ್ತು. ಎರಡು ವಾರ ಕಳೆಯುವುದರೊಳಗೆ ಆದೇಶಕ್ಕೆ ಬ್ರೇಕ್ ಬಿದ್ದಿದೆ.

Related Articles

Back to top button
error: Content is protected !!