ಸಲಿಂಗ ವಿವಾಹಕ್ಕಿಲ್ಲ ಕಾನೂನು ಮಾನ್ಯತೆ: ಇದು ಮೂಲಭೂತ ಹಕ್ಕಲ್ಲ, ಸಂಸತ್ತಿನ ವ್ಯಾಪ್ತಿಗೆ ಮಹತ್ವದ ತೀರ್ಪು

Views: 0
ದೇಶದಲ್ಲಿ ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಇದು ಮೂಲಭೂತ ಹಕ್ಕಲ್ಲ. ಈ ವಿಷಯವನ್ನು ಸಂಸತ್ತಿನ ವ್ಯಾಪ್ತಿಗೆ ಬಿಡುವ ಮೂಲಕ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.ಸಲಿಂಗ ವಿವಾಹಕ್ಕೆ ಮಾನ್ಯತೆ ಸಿಗಲಿದೆ ಎಂದು ಕಾದುಕುಳಿತ್ತಿದ್ದ ಸಲಿಂಗ ಕಾಮಿಗಳಿಗೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ತಣ್ಣೀರೆಚಿದೆ.ಈ ಮೂಲಕ 18 ಸಲಿಂಗಕಾಮಿ ದಂಪತಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಿಲೇವಾರಿ ಮಾಡಿತು.
ಸಲಿಂಗಕಾಮಕ್ಕೆ ದೇಶದಲ್ಲಿ ಕಾನೂನಿನ ಮಾನ್ಯತೆ ನೀಡಬೇಕು ಎನ್ನುವ ಸಲಿಂಗಿಗಳ ಬೇಡಿಕೆಯನ್ನು ಸಂವಿಧಾನಿಕ ಪೀಠ ಬಹುಮತದಿಂದ ತಿರಸ್ಕರಿಸಿ ಈ ವಿಷಯ ಸಂಸತ್ ವ್ಯಾಪ್ತಿಗೆ ಬರುತ್ತದೆ. ಅದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರ ಪೀಠ, ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ 18 ಅರ್ಜಿಗಳ ವಿಚಾರಣೆ ವೇಳೆ ನ್ಯಾಯಪೀಠ ವಾದ ಪ್ರತಿವಾದ ಆಲಿಸಿ, ತೀರ್ಪುನ್ನು ಕಾಯ್ದಿರಿಸಿತ್ತು. ಈ ವಿಚಾರದಲ್ಲಿ ಸಂಸತ್ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದೆ.
ಲೈಂಗಿಕ ದೃಷ್ಟಿಕೋನದ ಆಧಾರದ ಮೇಲೆ ಸಲಿಂಗ ಕಾಮ ಅಥವಾ ವಿವಾಹ ಪ್ರವೇಶಿಸುವ ವ್ಯಕ್ತಿಯ ಹಕ್ಕನ್ನು ನಿರ್ಬಂಧಿಸಲಾಗುವುದಿಲ್ಲ. ವಿವಾಹ ಸಮಾನತೆ ಕಾನೂನು ಬದ್ಧಗೊಳಿಸುವುದನ್ನು ಸಂಸತ್ ನಿರ್ಧರಿಸಬೇಕು ಎಂದು ಸಂಸತ್ ಅಂಗಳಕ್ಕೆ ಚೆಂಡು ರವಾನಿಸಿದೆ.
ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮ ಆಯ್ಕೆ ಮಾಡುವ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21ರ ಅಡಿಯಲ್ಲಿ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಮೂಲವಾಗಿದೆ ಎಂದು ಹೇಳಿದೆ.
ವಿವಾಹ ಸಮಾನತೆ ಎಂಬುದು ನಗರ, ಗಣ್ಯರ ಪರಿಕಲ್ಪನೆ ಎಂಬ ಕೇಂದ್ರದ ವಾದವನ್ನು ಒಪ್ಪದ ಮುಖ್ಯ ನ್ಯಾಯಮೂರ್ತಿಗಳು, ಈ “ವಿಚಾರ ಸಲಿಂಗಕಾಮ ಅಥವಾ ವಿಲಕ್ಷಣತೆ ನಗರ ಪರಿಕಲ್ಪನೆಯಲ್ಲಿ ಅಥವಾ ಸಮಾಜದ ಮೇಲ್ವರ್ಗದವರಿಗೆ ಸೀಮಿತವಾಗಿಲ್ಲ” ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ, ಚಂದ್ರಚೂಡ್ ವಿಶ್ಲೇಷಿಸಿದ್ದಾರೆ.
ಜೀವನ ಸಂಗಾತಿ ಆಯ್ಕಮಾಡಿಕೊಳ್ಳುವುದು ಅವಿಭಾಜ್ಯ ಭಾಗ, ಸಲಿಂಗ ವಿವಾಹವಾಗುವ ವ್ಯಕ್ತಿಗಳ ಹಕ್ಕುಗಳನ್ನು ನಿರ್ಧರಿಸಲು ಸಮಿತಿ ರಚಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯ ಕಾನೂನು ಮಾಡಲು ಸಾಧ್ಯವಿಲ್ಲ. ಆದರೆ ಅದನ್ನು ಅರ್ಥೈಸಬಲ್ಲದು ಮತ್ತು ಅದರ ಪರಿಣಾಮ ಮಾತ್ರ ನೀಡುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರ, ಸಂಸತ್ ಅಗತ್ಯ ಕಾನೂನು ರೂಪಿಸಬೇಕು.ವಿಶೇಷ ವಿವಾಹ ಕಾಯಿದೆಯ ಆಡಳಿತದಲ್ಲಿ ಬದಲಾವಣೆಯನ್ನು ಸಂಸತ್ತು ನಿರ್ಧರಿಸಬೇಕು. ಶಾಸಕಾಂಗ ವಿಷಯದಲ್ಲಿ ನ್ಯಾಯಾಲಯ ಪ್ರವೇಶಿದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಪಡಿತರ ಚೀಟಿ, ಪಿಂಚಣಿ, ಗ್ರಾಚ್ಯುಟಿ ಮತ್ತು ಉತ್ತರಾಧಿಕಾರ ಸಮಸ್ಯೆಗಳಂತಹ ಸಲಿಂಗ ದಂಪತಿಗಳ ಪ್ರಾಯೋಗಿಕ ಕಾಳಜಿ ಪರಿಹರಿಸಲು ಸಮಿತಿಯ ರಚನೆಯೊಂದಿಗೆ ಮುಂದುವರಿಯುವಂತೆ ಐವರು ನ್ಯಾಯಾಧೀಶರಿದ್ದ ಸಾಂವಿಧಾನಿಕ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ವಿವಾಹ ಸಮಾನತೆಯ ಪ್ರಶ್ನೆಗೆ ಒಳಪಡದೆ ಸಲಿಂಗ ದಂಪತಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಆಡಳಿತಾತ್ಮಕ ಪರಿಹಾರ ಕಂಡುಕೊಳ್ಳಲು ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲು ಯೋಜಿಸಲಾಗಿದೆ ಎಂದು ಕೇಂದ್ರವು ಮೇ 3 ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.
ಮಕ್ಕಳನ್ನು ದತ್ತು ಹಕ್ಕುಗಳ ಹಕ್ಕಿಗೆ ಸಂಬಂಧಿಸಿದಂತೆ ನ್ಯಾಯಪೀಠ, 3-2 ತೀರ್ಪು ನೀಡಿತು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ವಿಲಕ್ಷಣ ದಂಪತಿಗಳ ದತ್ತು ಪಡೆಯುವ ಹಕ್ಕನ್ನು ಗುರುತಿಸಿದರೆ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ಈ ವಾದ ಒಪ್ಪಲಿಲ್ಲ. ಅಂತಿಮವಾಗಿ ಬಹುಮತಕ್ಕೆ ನ್ಯಾಯಪೀಠ ಜೈ ಎಂದಿದೆ.
ಈ ಸಂಬಂಧ ಕೇಂದ್ರ, ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳಲಿ.ನ್ಯಾಯಾಂಗ ಪರಿಶೀಲನೆ ಮತ್ತು ಅಧಿಕಾರವನ್ನು ಬೇರ್ಪಡಿಸುವ ಸಮಸ್ಯೆ ನಿಭಾಯಿಸಿದ್ದೇನೆ” ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
“ಸಲಿಂಗ ಸಂಬಂಧಗಳನ್ನು ಪ್ರಾಚೀನ ಕಾಲದಿಂದಲೂ ಗುರುತಿಸಲಾಗಿದೆ, ಕೇವಲ ಲೈಂಗಿಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಭಾವನಾತ್ಮಕ ನೆರವೇರಿಕೆಗಾಗಿ ಸಂಬಂಧಗಳನು ಸೂಫಿ ಸಂಪ್ರದಾಯಗಳನ್ನು ಉಲ್ಲೇಖಿಸಿದ್ದೇನೆ. ಎಂದು ಮುಖ್ಯ ನ್ಯಾಯಾಧೀಶರ ತೀರ್ಪನ್ನು ಒಪ್ಪುತ್ತೇನೆ ಎಂದು ನ್ಯಾಯಪೀಠದ ಮತ್ತೊಬ್ಬ ನ್ಯಾಯಾಧೀಶ ಕಲಾ ಭಟ್ ಹೇಳಿದ್ದಾರೆ.
ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ನ್ಯಾಯಾಲಯ ಸಾಂವಿಧಾನಿಕ ನೈತಿಕತೆಯಿಂದ ಮಾರ್ಗದರ್ಶಿಸಲ್ಪಟ್ಟಿದೆಯೇ ಹೊರತು ಸಾಮಾಜಿಕ ನೈತಿಕತೆಯಿಂದ ಎಂದು ತಿಳಿಸಿದ್ದಾರೆ.






