ವೇಗವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿಯಲ್ಲಿ ನೇತಾಡಿದ ಯುವಕ; ಕೊನೆಗೆ ಆಗಿದ್ದೇನು?

Views: 66
ಕನ್ನಡ ಕರಾವಳಿ ಸುದ್ದಿ: ವೇಗವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿಯ ಹೊರಭಾಗದಲ್ಲಿ ಯುವಕನೊಬ್ಬ ನೇತಾಡುತ್ತಾ ಹೋಗಿ ನಂತರ ಕೆಳಗೆ ಬಿದ್ದಿದ್ದಾನೆ. ಈ ಆಘಾತಕಾರಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಸಹ ಪ್ರಯಾಣಿಕನ ಕೈ ಹಿಡಿದು ಚಲಿಸುತ್ತಿದ್ದ ರೈಲಿನ ಕಿಟಿಕಿಯ ಬಳಿ ನೇತಾಡಿದ್ದಾನೆ. ಸ್ವಲ್ಪ ಸಮಯದವರೆಗೆ ನೇತಾಡಿದ ನಂತರ ಆತ ರೈಲಿನಿಂದ ಜಿಗಿದು ಕೆಳಗೆ ಬಿದ್ದಿದ್ದಾನೆ. ಅದೃಷ್ಟವಶಾತ್, ರೈಲು ಅಷ್ಟರಲ್ಲೇ ನಿಂತಿದ್ದರಿಂದ ದೊಡ್ಡ ಅಪಘಾತ ತಪ್ಪಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ಈ ವಿಡಿಯೊಗೆ ಕಾನ್ಪುರದ ಎಡಿಜಿ ಸರ್ಕಾರಿ ರೈಲ್ವೆ ಪೊಲೀಸ್ ಯುಪಿ (ಜಿಆರ್‌ಪಿ) ಅನ್ನು ಟ್ಯಾಗ್ ಮಾಡಿ ಈ ವಿಷಯವನ್ನು ಪರಿಶೀಲಿಸುವಂತೆ ನಿರ್ದೇಶನ ನೀಡಿದ್ದಾರೆ. ನಂತರ ಜಿಆರ್‌ಪಿ ಯುಪಿ ಎಸ್‍ಪಿ ಜಿಆರ್‌ಪಿ ಆಗ್ರಾ ಅವರನ್ನು ಟ್ಯಾಗ್ ಮಾಡಿ ಈ ವಿಷಯವನ್ನು ಪರಿಶೀಲಿಸಲು ನಿರ್ದೇಶನ ನೀಡಿದೆ. ಆಗ್ರಾ ಎಸ್‌ಪಿ ತಕ್ಷಣ ಪ್ರತಿಕ್ರಿಯಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಆರ್‌ಪಿ ಫರೂಕಾಬಾದ್ ಪೊಲೀಸ್ ಠಾಣೆಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.