ಮಾಹಿತಿ ತಂತ್ರಜ್ಞಾನ

ವಿಶ್ವದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಕಣ್ಣುಗಳೀಗ ವಿಕ್ರಂ ಲ್ಯಾಂಡರ್ ಮೇಲೆ!

Views: 0

ಇಸ್ರೋದ ಚಂದ್ರಯಾನ- 3 ರ ಲ್ಯಾಂಡರ್ ವಿಕ್ರಂ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದರೆ ಆ ಸಾಧನೆ ಮಾಡಿದ ವಿಶ್ವದ ಪ್ರಥಮ ರಾಷ್ಟ್ರ ಎಂಬ ಹಿರಿಮೆಗೆ ಭಾರತ ಪಾತ್ರವಾಗಲಿದೆ. ಹಾಗಾಗಿಯೇ ಇಡೀ ಜಗತ್ತಿನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಕಣ್ಣುಗಳೀಗ ವಿಕ್ರಂ ಲ್ಯಾಂಡರ್ ಮೇಲಿದೆ.

ಜು. 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಉಡಾವಣೆಗೊಂಡ ಚಂದ್ರಯಾನ- 3 ಅಗಸ್ಟ್ 23ರ ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಗಬೇಕಿದೆ. ವಿಕ್ರಂ ಲ್ಯಾಂಡರ್ ತಾನು ಚಂದ್ರನಲ್ಲಿ ಇಳಿಯುವುದಕ್ಕೆ ಸಮತಟ್ಟಾದ ಜಾಗದ ಹುಡುಕಾಟ ದಲ್ಲಿರುವಾಗಲೇ ಆ ಕಾರ್ಯಕ್ಕೆ ನೆರವಾಗಲು ಭಾರತದ ಇಸ್ರೋ ಜೊತೆಗೆ ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ‘ನಾಸಾ’ ಮತ್ತು ಯುರೋಪ್ ಒಕ್ಕೂಟದ ‘ಯುರೋಪಿಯನ್ ಸ್ಪೇಸ್ ಏಜೆನ್ಸಿ’ ( ಇಎಸ್ ಎ) ನೆರವಿನ ಹಸ್ತಚಾಚಿದೆ.

ಭಾನುವಾರ ಬೆಳಿಗ್ಗೆವರೆಗೂ ಚಂದ್ರನ ಮೇಲ್ಮೈನಿಂದ ಲ್ಯಾಂಡರ್ ವಿಕ್ರಂನ ಕನಿಷ್ಠ ಅಂತರ ಮತ್ತಷ್ಟು ತಗ್ಗಿದೆ. ಸೋಮವಾರ ತನ್ನ ಕ್ಯಾಮರಾ ಕಣ್ಣು ತೆರೆದ ವಿಕ್ರಂ ಕೆಲವು ಫೋಟೋಗಳನ್ನು ತೆಗೆದು ಭೂಮಿಗೆ ( ಇಸ್ರೋ)ರವಾನಿಸಿದೆ.

ವಿಕ್ರಂ ಚಂದ್ರನ ಮೇಲೆ ಇಳಿಯುವುದು ನಿಗದಿಯಾದಂತೆ ಸ್ಥಳೀಯ ಕಾಲಮಾನ ಸಂಜೆ 5:20 ರಿಂದ ವಿಕ್ರಂ ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗಲಿದೆ ಎಂದು ಇಸ್ರೋ ತಿಳಿಸಿದೆ.

ಅಂದು ವಿಕ್ರಂ ದಕ್ಷಿಣ ದ್ರುವದಲ್ಲಿ ವ್ಯತ್ಯಾಸವಾದರೆ ಲ್ಯಾಂಡಿಂಗ್ ಘಳಿಗೆಗಾಗಿ ಮತ್ತೆ 14 ದಿನಗಳವರೆಗೆ ಕಾಯಬೇಕಾಗುತ್ತದೆ ಎಂಬ ಆತಂಕವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಚಂದ್ರಯಾನ -3 ರಲ್ಲಿ ಬಹಳಷ್ಟು ಸುಧಾರಣೆಗಳನ್ನು ಮಾಡಿದೆ ಎಂದು ಇಸ್ರೋ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!