ವಿಡಿಯೋ ಮಾಡಿ, ಮದುವೆಯ ದಿನ ಧರಿಸಿದ್ದ ಉಡುಪಿನಲ್ಲೇ ದಂಪತಿ ಆತ್ಮಹತ್ಯೆ!

Views: 340
ಕನ್ನಡ ಕರಾವಳಿ ಸುದ್ದಿ: ನಾಗ್ಪುರದ ಜಾರಿಪಟ್ಕಾ ಪೊಲೀಸ್ ಠಾಣೆಯ ಮಾರ್ಟಿನ್ನಗರದಲ್ಲಿ ದಂಪತಿ ಮೊದಲು ಅವರು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟು, ಮನೆಯಲ್ಲಿ ತಮ್ಮ ವಿವಾಹ ಉಡುಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜೆರಿಲ್ ಮ್ಯಾನ್‌ಕ್ರೀಪ್ ಮತ್ತು ಆನ್ನೆ ಮ್ಯಾನ್‌ಕ್ರೀಪ್ ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಮನೆಯಲ್ಲಿಯೇ ಡೆತ್ನೋಟ್ ಪತ್ತೆಯಾಗಿದೆ. ನಮ್ಮ ಮೇಲೆ ಯಾರೂ ಒತ್ತಡ ಹಾಕಿಲ್ಲ. ಸಾವಿಗೆ ಯಾರೂ ಕಾರಣರಲ್ಲ. ಕೌಟುಂಬಿಕ ಪರಿಸ್ಥಿತಿ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ನಾವು ಪ್ರಾಣ ಕಳೆದುಕೊಳ್ಳುತ್ತಿದ್ದೇವೆ ಎಂದು ಅದರಲ್ಲಿ ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಂಡು ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ, ದಂಪತಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾಹ ವಸ್ತ್ರದಲ್ಲಿ ಆತ್ಮಹತ್ಯೆ : ಪತಿ ಜೆರಿಲ್ ಮ್ಯಾನ್‌ಕ್ರೀಪ್ ಬಾಣಸಿಗ ವೃತ್ತಿ ಮಾಡುತ್ತಿದ್ದರೆ, ಪತ್ನಿ ಆನ್ನೆ ಮ್ಯಾನ್‌ಕ್ರೀಪ್ ಗೃಹಿಣಿಯಾಗಿದ್ದರು. ದಂಪತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕೆಲ ಕೌಟುಂಬಿಕ ಸಂಕಷ್ಟಗಳನ್ನೂ ಎದುರಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೋಮವಾರ (ಜನವರಿ 6 ರಂದು) ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಮದುವೆಯ ದಿನ ಧರಿಸಿದ್ದ ಉಡುಪಿನಲ್ಲೇ ಸಂಭ್ರಮ ಆಚರಿಸಿದ್ದಾರೆ. ಬಳಿಕ ಇಬ್ಬರೂ ಅದೇ ಉಡುಗೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.






