ಯುವಜನ

ಲಾಡ್ಜ್ ನಲ್ಲಿ ಬೆಂಕಿ ಅವಘಡ: ಯುವಕ, ಯುವತಿ ನಿಗೂಢ ಸಾವು!

Views: 107

ಕನ್ನಡ ಕರಾವಳಿ ಸುದ್ದಿ:ಬೆಂಗಳೂರಿನ ಯಲಹಂಕ ನ್ಯೂಟೌನ್ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್, ಇದೇ ಲಾಡ್ಜ್ನ ರೂಂನಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿ ಅನಾಹುತದಲ್ಲಿ 30 ವರ್ಷದ ರಮೇಶ್ ಮತ್ತು ಕಾವೇರಿ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.

ಅವನದ್ದು ಗದಗ ಮತ್ತು ಆಕೆಯದ್ದು ಬಾಗಲಕೋಟೆಯ ಹುನಗುಂದ. ಈ ಇಬ್ಬರು ಒಂದು ವಾರದಿಂದ ಇದೇ ಲಾಡ್ಜ್ ನಲ್ಲಿ ವಾಸವಿದ್ರಂತೆ. ನಿನ್ನೆ ಬೆಳಗ್ಗೆ ಇಬ್ಬರಿಗೂ ಜಗಳ ಆಗಿದೆ ಎನ್ನಲಾಗಿದೆ. ಮಧ್ಯಾಹ್ನ ಹೊರಗಡೆ ಹೋಗಿ ವಾಪಸ್ ಬರುವಾಗ ರಮೇಶ್, ಪೆಟ್ರೋಲ್ ತುಂಬಿದ ಬಾಟಲ್ ಹಿಡಿದು ವಾಪಸ್ ಬಂದಿದ್ದ.ಸ್ಪಾನಲ್ಲಿ ಯುವತಿ ಕೆಲಸ, ಖಾಸಗಿ ಕಂಪನಿಯಲ್ಲಿ ಯುವಕ ಕೆಲಸ ರೂಮಿನಲ್ಲಿ ಏನಾಯ್ತೋ ಏನೋ ರಮೇಶ್ ಬೆಂಕಿ ಹಚ್ಚಿಕೊಂಡಿದ್ದಾನೆ ಆದರೆ ಕಾವೇರಿ ಬಾತ್ ರೂಂಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ ಕೆಲಸ ಮಾಡ್ತಿದ್ದ ಸ್ಪಾ ಓನರ್ಗೆ ಯುವತಿ ಫೋನ್ ಮಾಡಿ ಮಾಹಿತಿ ಅಷ್ಟೊತ್ತಿಗಾಗಲೇ ಇಡೀ ಲಾಡ್ಜ್ ಗೆ ವ್ಯಾಪಿಸಿದ ಬೆಂಕಿಯ ಹೊಗೆ ಅಗ್ನಿಶಾಮಕ, ಪೊಲೀಸರಿಗೆ ಮಾಹಿತಿ ನೀಡಿದ ಲಾಡ್ಜ್ ಮಾಲೀಕ‌ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು, ಬಿಲ್ಡಿಂಗ್ ಗ್ಲಾಸ್ ಒಡೆದು ಒಳ ನುಗ್ಗಿದ್ದಾರೆ. ಅಷ್ಟೋತ್ತಿಗಾಗಲೇ ರಮೇಶ್ ಸಂಪೂರ್ಣ ಸುಟ್ಟು ಕರಕಲಾಗಿದ್ರೆ, ಕಾವೇರಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸದ್ಯ ಇಬ್ಬರ ಮೃತದೇಹಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡ್ಲಾಗಿದ್ದು, ಯಲಹಂಕ ನ್ಯೂ ಟೌನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

.

Related Articles

Back to top button