ಯುವಜನ

ಲಾಡ್ಜ್ ನಲ್ಲಿ ಪ್ರೇಮಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್ !

Views: 278

ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಯಲಹಂಕಾ ಲಾಡ್ಜ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಪ್ರಿಯಕರ ರಮೇಶ್ ಸುಟ್ಟು ಕರಕಲಾಗಿದ್ರೆ, ಪ್ರಿಯತಮೆ ಕಾವೇರಿ ಲಾಡ್ಜ್ ಬಾತ್ ರೂಂ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಳು. ಈ ಘಟನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಯಲಹಂಕ ನ್ಯೂ ಟೌನ್ ನಲ್ಲಿ ಮಹಿಳೆ ಯುವಕ ಸಾವು ಕೇಸ್ ಕೈಗೆತ್ತಿಕೊಂಡ ಪೊಲೀಸರಿಗೆ ಅವರಿಬ್ಬರ ಹೊರತಾಗಿ ಅದೇ ರೂಂ ನಲ್ಲಿ ಬೆಂಕಿ ಹೊತ್ತಿಕೊಳ್ಳುವ ಮುನ್ನ ಮತ್ತೋರ್ವ ಇದ್ದ ಎನ್ನುವುದು ಪಕ್ಕಾ ಆಗಿತ್ತು. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಪ್ರತ್ಯಕ್ಷ ದರ್ಶಿ ಅಸಲಿ ವಿಚಾರ ಹೊರಹಾಕಿದ್ದಾನೆ. ಮೃತ ಮಹಿಳೆ ಚಿಕ್ಕಪ್ಪನ ಮಗ ಪ್ರಶಾಂತ್ ನನ್ನು ವಿಚಾರಣೆ ಮಾಡಿದ ಪೊಲೀಸರು, ಮೃತ ರಮೇಶ ಪೆಟ್ರೋಲ್ ಸುರಿದುಕೊಂಡು ಬೆಂಕಿ ಇಟ್ಟುಕೊಂಡಾಗ ಪಕ್ಕದಲ್ಲೇ ಇದ್ದಿದ್ದಾಗಿ ಹೇಳಿದ್ದಾನೆ‌.

ಕಾವೇರಿ ತನಗೆ ಮೂವರು ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಇತ್ತೀಚೆಗೆ ರಮೇಶನನ್ನ ದೂರ ಇಟ್ಟಿದ್ದಳು. ಇದರಿಂದ ಇಬ್ಬರ ನಡುವೆ ಜಗಳವಾಗಿತ್ತು. 1 ವಾರದ ಬಳಿಕ ಇಬ್ಬರು ಯಲಹಂಕ ನ್ಯೂ ಟೌನ್ ನಲ್ಲಿರೋ ಕೂಲ್ ಕಂಫರ್ಟ್ ಲಾಡ್ಜ್ ನಲ್ಲಿ ಸೇರಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ರಮೇಶ್ ಪೆಟ್ರೋಲ್ ಸುರಿದುಕೊಂಡಿದ್ದ ಅನ್ನೋ ವಿಚಾರ ತನಿಖೆ ವೇಳೆ ಬಯಲಾಗಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಪ್ರಶಾಂತ ಭಯದಿಂದ ಹೊರ ಓಡಿಬಂದು ಪರಾರಿಯಾಗಿದ್ದ, ಇದಕ್ಕೂ ಮುನ್ನ ಇದೇ ವೇಳೆ ಓಡಿ ಬಾ ಎಂದು ಕಾವೇರಿಯನ್ನು ಪ್ರಶಾಂತ್ ಕರೆದಿದ್ದನಂತೆ. ಆದರೆ ಹೊರ ಹೋಗದೆ ಬಾತ್ ರೂಮ್ ಒಳಗೆ ಲಾಕ್ ಮಾಡಿ ಕುಳಿತುಕೊಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.

ಲಾಡ್ಜ್ ಪಕ್ಕದಲ್ಲೇ ಹೋಗಿ ಒಂದು ಲೀಟರ್ ಪೆಟ್ರೋಲ್ ತಂದಿದ್ದ ಮೃತ ರಮೇಶ್, ಒಂದು ಲೀಟರ್ ಪೆಟ್ರೋಲ್ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನಂತೆ. ಪೆಟ್ರೋಲ್ ಸುರಿದುಕೊಳ್ಳುವಾಗ ಕೋಪದಲ್ಲಿ ಬೈದಿದ್ದ ಕಾವೇರಿಗೆ ಬೆದರಿಕೆ ಹಾಕಲು ಹೋಗಿ ಬೆಂಕಿ ಇಟ್ಟುಕೊಂಡು ಸುಟ್ಟು ಕರಕಲಾಗಿದ್ದ. ಮತ್ತೊಂದ್ಕಡೆ ಉಸಿರುಗಟ್ಟಿ ಮಹಿಳೆ ಕಾವೇರಿ ಸಾವನ್ನಪ್ಪಿದ್ದಳು.

ಮೂವರು ಮಕ್ಕಳಿದ್ದಾರೆಂದು ಇತ್ತೀಚೆಗೆ ಕಾವೇರಿ ರಮೇಶನನ್ನು ಅವೈಡ್ ಮಾಡ್ತಿದ್ದಳು, ಇದರಿಂದ ಇಬ್ಬರ ನಡುವೆ ಒಂದು ವಾರದ ಹಿಂದೆ ಜಗಳವಾಗಿತ್ತು.

ಇನ್ನು 2016ರಲ್ಲೇ ಕಾವೇರಿಗೆ ಹುನಗುಂದದಲ್ಲಿ ಮದುವೆಯಾಗಿತ್ತು. 3 ತಿಂಗಳ ಹಿಂದೆಯಷ್ಟೇ ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯ ಸ್ಪಾ ಒಂದರಲ್ಲಿ ಕೆಲಸ ಮಾಡಲು ಆಕೆ ಬೆಂಗಳೂರಿಗೆ ಬಂದಿದ್ದಳು ಎನ್ನಲಾಗಿದೆ. ತನ್ನ ಪತಿ ಹಾಗೂ ಮಕ್ಕಳನ್ನು ಊರಲ್ಲೇ ಬಿಟ್ಟು ಕೆಲಸಕ್ಕಾಗಿ ಇಲ್ಲಿಗೆ ಬಂದಿದ್ದಳು. ಇತ್ತೀಚೆಗೆ ರಮೇಶ್ ಪರಿಚಯವಾದ ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ದಿನಕಳೆದಂತೆ ರಮೇಶ್ ಮದುವೆಗೆ ಒತ್ತಾಯಿಸುತ್ತಿದ್ದ ಎಂದು ಪ್ರಶಾಂತ್ ಹೇಳಿದ್ದಾನೆ.

Related Articles

Back to top button