ಯುವಜನ

ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯನ್ನು ರಕ್ಷಿಸಿ, ಮದುವೆಯಾದ ಯುವಕ!

Views: 193

ಕನ್ನಡ ಕರಾವಳಿ ಸುದ್ದಿ: ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಯುವತಿಯೊಬ್ಬಳನ್ನು ರಕ್ಷಿಸಿ ಆಕೆಯನ್ನೇ ಮದುವೆ ಆಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಬಕ್ಸಾರ್‌ನ ನಿವಾಸಿಯಾಗಿರುವ ಗೋಲು ಯಾದವ್ ರೈಲು ಪ್ರಯಾಣ ಮಾಡುವಾಗ ನಡೆದ ಘಟನೆಯೊಂದು ಆತನ ಜೀವನದ ದಿಕ್ಕನ್ನೇ ಬದಲಾಯಿಸಿದೆ.

ಗೋಲು ಯಾದವ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ರೈಲಿನೊಳಗೆ ಯುವತಿಯೊಬ್ಬಳು ಭಿಕ್ಷೆ ಬೇಡುತ್ತಾ ಬಂದಿದ್ದಾಳೆ. ಯುವತಿ ಭಿಕ್ಷೆ ಕೇಳುವಾಗ ಕೆಲ ಪ್ರಯಾಣಿಕರು ಆಕೆಯನ್ನು ಬೇರೆ ನೋಟದಿಂದ ನೋಡಿದ್ದಾರೆ. ಇದನ್ನು ನೋಡಿದ ಗೋಲು ಮಾನವೀಯ ದೃಷ್ಟಿಯಿಂದ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ. ಯುವತಿಯ ಬಳಿ ಹೋಗಿ ಆಕೆಯನ್ನು ಆ ಸ್ಥಳದಿಂದ ರಕ್ಷಿಸಿ ಆಕೆಯ ಬಳಿ ಮಾತನಾಡಿದ್ದಾರೆ.

ಯುವತಿಯ ಹಿನ್ನೆಲೆಯ ಬಗ್ಗೆ ಗೋಲು ಕೇಳಿದ್ದಾರೆ. ಯುವತಿ ಅನಾಥೆಯಾಗಿರುವ ವಿಚಾರವನ್ನು ಕೇಳಿದ ಬಳಿಕ ಗೋಲುಗೆ ಆಕೆಯನ್ನು ಅಲ್ಲೇ ಬಿಟ್ಟು ಹೋಗುವುದು ಬೇಡ ಎಂದು ಅನಿಸಿದೆ. ಈ ಕಾರಣದಿಂದ ಮನೆಯವರಿಗೆ ಕರೆ ಮಾಡಿ ಯುವತಿಯ ಪರಿಸ್ಥಿತಿಯನ್ನು ಹೇಳಿದ್ದಾರೆ. ಇದರಿಂದ ಮನೆಯವರು ಕೊಡ ಯುವತಿಯನ್ನು ಮನೆಗೆ ಕರೆದುಕೊಂಡು ಬರಲು ಹೇಳಿರುವುದಾಗಿ ವರದಿ ತಿಳಿಸಿದೆ.

ಗೋಲು ಭಿಕ್ಷೆ ಬೇಡುತ್ತಿದ್ದ ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದಾದ ಕೆಲ ದಿನಗಳ ಬಳಿಕ ಗೋಲು’ ಹೆತ್ತವರ ಒಪ್ಪಿಗೆಯೊಂದಿಗೆ, ಆ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಅದರಂತೆ ಗೋಲು ಯುವತಿಯನ್ನು ಮದುವೆ ಆಗಿದ್ದಾರೆ.

 

Related Articles

Back to top button