ಮಾಹಿತಿ ತಂತ್ರಜ್ಞಾನ
ಮೊದಲ ವಿಡಿಯೋ ದೃಶ್ಯ ರವಾನಿಸಿದ ಚಂದ್ರಯಾನ- 3

Views: 0
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನೌಕೆ ಚಂದ್ರನ ಮೊದಲ ನೋಟವನ್ನು ಸೆರೆಹಿಡಿದು ಅದರ ದೃಶ್ಯವನ್ನು ಭೂಮಿಗೆ ಕಳುಹಿಸಿದೆ.ಇದರ ವಿಡಿಯೋವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ )ಬಿಡುಗಡೆ ಮಾಡಿದೆ.
ಚಂದ್ರಯಾನ- 3 ಯೋಜನೆಗೆ 23 ದಿನಗಳ ಕಾಲ ಪಯಣವನ್ನು ಬಲು ಯಶಸ್ವಿಯಾಗಿ ಭಾನುವಾರ ಪೂರ್ಣಗೊಳಿಸಿದೆ.
ಮೊದಲಿಗೆ ಚಂದ್ರನ ಚಂದದ ವಿಡಿಯೋ, ಇಸ್ರೋ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಚಂದ್ರಯಾನ- 3 ಯೋಜನೆ ಯೋಜಿಸಿದಂತೆಯೇ ಸಾಗಿರುವುದು ಇಸ್ರೋ ವಿಜ್ಞಾನಿಗಳಲ್ಲಿ ಸಂತಸ ಮೂಡಿದೆ.
ಚಂದ್ರಯಾನ ಅಗಸ್ಟ್ 23ರಂದು ಚಂದ್ರನ ಮೇಲೆ ಇಳಿಯಲಿದೆ. ಚಂದ್ರನ ವಿಡಿಯೋ ರವಾನೆಯಿಂದ ಕೋಟ್ಯಂತರ ಭಾರತೀಯರ ನಿರೀಕ್ಷೆ ಇಮ್ಮಡಿ ಗೊಳಿಸಿದೆ.