ಧಾರ್ಮಿಕ

ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಎಂದು ವಂಚಿಸಿ ಭಕ್ತರಿಗೆ  ಲಕ್ಷಾಂತರ ರೂಪಾಯಿ ವಂಚನೆ

Views: 0

ಕುಂದಾಪುರ:: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಎಂಬುದಾಗಿ ಸುಳ್ಳು ಹೇಳಿ ನಂಬಿಸಿ ಲಕ್ಷಾಂತರ ರೂಪಾಯಿ ಭಕ್ತರಿಗೆ ವಂಚಿಸಿರುವ ಪ್ರಕರಣ ದಾಖಲಾಗಿದೆ..

ಬೆಂಗಳೂರಿನ ಭಕ್ತರೊಬ್ಬರು ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಸುಧೀರ್ ಕುಮಾರ್ ಎಂಬಾತನ ಪರಿಚಯ ಮಾಡಿಕೊಂಡು ಈತ ತಾನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯ ಎಂಬುದಾಗಿ ಸುಳ್ಳು ಹೇಳಿ ಅವರನ್ನು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಹಾಕುವಂತೆ ಕೇಳಿದ್ದರು.

ಸುಧೀರ್ ಕುಮಾರ್ ಅವರು ತನ್ನ ಖಾತೆಗೆ ಹಣ ಹಾಕುವಂತೆ ವಿನಂತಿಸಿಕೊಂಡಿದ್ದರು ಹಾಗೆ ದಿಲ್ನಾ ಅವರಿಗೆ ಸಂಬಂಧಪಟ್ಟ ಜಾಗದ ಬದಲಾವಣೆ ಮಾಡಿ ಕೊಡುವುದಾಗಿ ಹೇಳಿ ಖಾತೆಗೆ ಹಣವನ್ನು ಹಾಕಿಸಿಕೊಂಡಿದ್ದರು. ಎಂದು ದೂರಲಾಗಿದೆ.

ಆದರೆ ಸುಧೀರ್ ಕುಮಾರ್ ಅವರು ಭಕ್ತರಿಂದ ಹಣದ ಪಡೆದುಕೊಂಡು ದೇವಸ್ಥಾನದಲ್ಲಿ ಯಾವುದೇ ಪೂಜೆ ಸಲ್ಲಿಸದೆ ಜಾಗದ ಖಾತೆ ಬದಲಾವಣೆ ಮಾಡದೆ ವಂಚಿಸಿದ್ದಾರೆ.

ಈ ಬಗ್ಗೆ ಎಲ್ಲಾ ಅನುಮಾನಗೊಂಡು ದೇವಸ್ಥಾನಕ್ಕೆ ಬಂದು ಸಂಬಂಧ ಪಟ್ಟವರನ್ನು ವಿಚಾರಿಸಿದಾಗ ಸುಧೀರ್ ಕುಮಾರ್ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯನು ಆಗಿರದೆ ದೇವಸ್ಥಾನಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲದ ವ್ಯಕ್ತಿ ಎಂಬುದಾಗಿ ತಿಳಿಯಲಾಗಿತ್ತು ಈತ ಭಕ್ತರನ್ನ ವಂಚಿಸಿ 3 ಲಕ್ಷಕ್ಕೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.

Related Articles

Back to top button
error: Content is protected !!