ಯುವಜನ

ಮುರಿದು ಬಿತ್ತು 12 ವರ್ಷದ ಲವ್ :ಸ್ಯಾಡ್ ರೀಲ್ಸ್ ಮಾಡುವಾಗ 13ನೇ ಅಂತಸ್ತಿನಿಂದ ಬಿದ್ದು ಪ್ರಾಣ ತೆತ್ತ ಯುವತಿ

Views: 157

ಕನ್ನಡ ಕರಾವಳಿ ಸುದ್ದಿ: ನಿರ್ಮಾಣ ಹಂತದ ಕಟ್ಟಡದಲ್ಲಿ ರೀಲ್ಸ್ ಮಾಡುವಾಗ 13ನೇ ಅಂತಸ್ತಿನಿಂದ ಯುವತಿ ಬಿದ್ದು ಜೀವ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸ್ನೇಹಿತರೆಲ್ಲಾ ಸೇರಿ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲೆಂದು ಯುವತಿ ನಂದಿನಿ ಹೋಗಿದ್ದಳು. ಈ ಪಾರ್ಟಿಯಲ್ಲಿ ಪ್ರೀತಿ ವಿಚಾರಕ್ಕಾಗಿ ಮಾತುಕತೆ ನಡೆದು ಗಲಾಟೆ ಆಗಿದೆ. 12 ವರ್ಷದ ಲವ್ ಮುರಿದು ಬಿದ್ದಿತ್ತು. ಇದರಿಂದ ಬೇಸರಗೊಂಡಿದ್ದ ಯುವತಿ ಸ್ಯಾಡ್ ರೀಲ್ಸ್ ಮಾಡಲು ಹೋಗಿದ್ದಳು. ಆದರೆ ರೀಲ್ಸ್ ಮಾಡುವಾಗ ತಾನು ಎಲ್ಲಿ ಇದ್ದೇನೆ ಎನ್ನುವುದು ಮರೆತ್ತಿದ್ದ ನಂದಿನಿ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದಿದ್ದಾಳೆ.

ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ಗಾಗಿ ಬಿಡಲಾಗಿದ್ದ ಸ್ಥಳದಲ್ಲಿ ಮೇಲಿನಿಂದ ಕೆಳಗೆ ಬಿದ್ದು ಯುವತಿ ಜೀವ ಬಿಟ್ಟಿದ್ದಾಳೆ. ಇನ್ನು ಈ ನಂದಿನಿ ಶಾಪಿಂಗ್ ಮಾರ್ಟ್ವೊಂದರಲ್ಲಿ ಕೆಲಸ ಮಾಡುತ್ತಿದ್ದು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಮೃತ ನಂದಿನಿಯ 12 ವರ್ಷದ ಪ್ರೀತಿ ಫೇಲ್ಯೂರ್ ಆಗಿತ್ತು. ಹೀಗಾಗಿ ಅದೇ ಫೀಲಿಂಗ್ನಲ್ಲಿ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಜೊತೆ ಮದ್ಯಪಾನ ಮಾಡಲು ಹೋಗಿದ್ದಳು. ಈ ವೇಳೆ ಮದ್ಯಪಾನ ಕುಡಿದು ಸ್ಯಾಡ್ ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದು ನಂದಿನಿ ಜೀವ ಬಿಟ್ಟಿದ್ದಾಳೆ.

Related Articles

Back to top button
error: Content is protected !!