ಮುಂದೇನು? ಮಾಡಲಿದೆ ರೋವರ್- ಲ್ಯಾಂಡರ್ ಓದಿ ಕನ್ನಡ ಕರಾವಳಿ ಸುದ್ಧಿ

Views: 18
ಚಂದ್ರಯಾನ- 3 ಯಶಸ್ವಿಯಾದ ಬಳಿಕ ಮುಂದೇನು? ಜನಸಾಮಾನ್ಯರಲ್ಲಿ ಇರುವ ಪ್ರಶ್ನೆ ಚಂದ್ರನ ಮೇಲಿನ ಅಧ್ಯಯನಕ್ಕಾಗಿ ಅದನ್ನು ಕಳುಹಿಸಲಾಗಿದೆ ಎಂಬುವುದು ಎಲ್ಲರಿಗೂ ಗೊತ್ತಿದ್ದರೂ ನಿರ್ದಿಷ್ಟ ಕಾರ್ಯ ನಿರ್ವಹಣೆ ಹೇಗೆ?
ಲ್ಯಾಂಡರ್ ರೋವರ್ ಗಳ ಕಾರ್ಯವೇನು? ಎಂಬುವುದು ಬಹುತೇಕರಿಗೆ ಗೊತ್ತಿಲ್ಲ. ವಿಕ್ರಂ ಲ್ಯಾಂಡ್ ಚಂದ್ರನ ಮೇಲೆ ಕಾಲೂರಿದ ಮೂರು ಗಂಟೆಯ ಅವಧಿಯಲ್ಲಿ ಅಂದುಕೊಂಡಂತೆಯೇ ಪ್ರಗ್ಯಾನ ರೋವರ್ ಅನ್ನು ನಿಯೋಜಿಸಿದೆ.
ಚಂದ್ರನ ಇಡೀ ದಿನ ಅಂದರೆ ನಮ್ಮ 14 ದಿನಗಳವರೆಗೆ ರೋವರ್ ತನ್ನ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ. ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳನ್ನು ನಡೆಸಲು ಅವೆರಡಕ್ಕೂ ವೈಜ್ಞಾನಿಕ ಪೇ ಲೋಡ್ ಗಳನ್ನು ಅಳವಡಿಸಲಾಗಿದೆ. ಇದು ಚಂದ್ರನ ದಕ್ಷಿಣ ಧ್ರುವವನ್ನು ಭೂಮಿಗೆ ಪರಿಚಯಿಸಲಿದೆ.
ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ ರೋವರ್ ಎರಡು ಒಟ್ಟಿಗೆ ಕಾರ್ಯಾಚರಣೆ ನಡೆಸಲಿದೆ. ಪರಸ್ಪರ ಸಂಪರ್ಕ ಸಾಧಿಸಿಕೊಂಡು ಕೆಲಸ ಮಾಡಲಿದೆ. ಇನ್ನೇನು ಕೆಲ ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ನೀರು ಗಡ್ಡೆಗಳು ಮತ್ತು ಬೆಲೆಬಾಳುವ ಖನಿಜ ಇರುವುದನ್ನು ಜಗತ್ತಿಗೆ ಸಾರುವ ನಿರೀಕ್ಷೆ ಇದೆ.
ರೋವರ್ ನ ಕಾರ್ಯವೇನು?
ಎಕ್ಸರೇ ಮತ್ತು ಲೇಸರ್ ಎರಡು ಉಪಕರಣಗಳಿವೆ.
ಇದರ ಲೇಸರ್ ಪ್ರೇರಿತ ಬ್ರೇಕ್ ಡೌನ್ ಸ್ಟೆಕ್ಟ್ರೋ ಸ್ಕೋಪ್ ಪ್ರಪಲ್ಷನ್ ಮಾಡ್ಯೂಲ್ ಗುಣಾತ್ಮಕ ಮತ್ತು ಪರಿಮಾಣಾತ್ಮಕ ಧಾತುರೂಪದ ವಿಶ್ಲೇಷಣೆ
ಚಂದ್ರನ ಮೇಲ್ಮೈ ಬಗ್ಗೆ ರಾಸಾಯನಿಕ ಖನಿಜ ಸಂಯೋಜನೆಯ ಮಾಹಿತಿ.
ಚಂದ್ರನ ಲ್ಯಾಂಡಿಂಗ್ ಸೈಟ್ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಅಧ್ಯಯನ
ಮೆಗ್ನೀಷಿಯಂ ಅಲುಮಿನಿಯಂ ಸಿಲಿಕಾನ್ ಪೊಟ್ಯಾಶಿಯಂ ಕ್ಯಾಲ್ಸಿಯಂ ಟೈಟಾನಿಯಂ ಕಬ್ಬಿಣದಂತಹ ದಾತುರೂಪದ ಸಂಯೋಜನೆಯನ್ನು ನಿರ್ಧರಿಸುತ್ತದೆ.
ಲ್ಯಾಂಡರ್ ನ ಕಾರ್ಯವೇನು?
ಲ್ಯಾಂಡರ್ ಲೆಗ್, ರೋವರ್ ರಾಂಪ್, ರೋವರ್, ಐಎಲ್ಎಸ್ಎ, ರಾಮ್ಟಾ ಮತ್ತು ಜಾಸ್ಟ್ ಪೇ ಲೋಡ್ ಗಳು, ಹೊಕ್ಕುಳಿನ ಕನೆಕ್ಟರ್ ಪ್ರೋಟಿಕ್ಸನ್ ಮೆಕ್ಯಾನಿಸಂ ಮತ್ತು ಎಕ್ಸ್ ಬ್ಯಾಂಡ್ ಆಂಟಿನಾ ಹೊಂದಿದೆ.
ರೋವರ್ ಸೇರಿ 1749.86 ಕೆ.ಜಿ ದ್ರವ್ಯರಾಶಿ ಹೊಂದಿರುವ ಲ್ಯಾಂಡರ್ ಆರು ಕಾರ್ಯ ವಿಧಾನಗಳನ್ನು ಹೊಂದಿದೆ.
ಲ್ಯಾಂಡರ್ ನಲ್ಲಿರುವ ನಾಲ್ಕು ವೈಜ್ಞಾನಿಕ ಪೇ ಲೋಡ್ ಗಳು ಚಂದ್ರನಲ್ಲಿ ಬೇರೆ ಬೇರೆ ಅಧ್ಯಯನಗಳನ್ನು ನಿಯೋಜಿಸಿದೆ.
ವಾತಾವರಣದ ಸಂಪೂರ್ಣ ಅಧ್ಯಯನ ಮಾಡುತ್ತದೆ.
ಸಮೀಪದ ಮೇಲ್ಮೈ ಪ್ಲಾಸ್ಮಾ ಸಾಂದ್ರತೆಯನ್ನು ಮತ್ತು ಸಮಯದೊಂದಿಗೆ ಅದರ ಬದಲಾವಣೆಗಳನ್ನು ಅಳೆಯುತ್ತದೆ.
ಚಂದ್ರನ ಮೇಲ್ಮೈ ಥರ್ಮೋ ಮೇಲ್ಮೈ ಉಷ್ಣ ಗುಣಲಕ್ಷಣ ಮಾಪನ ಕೈಗೊಳ್ಳುತ್ತದೆ.
ಚಂದ್ರನ ಭೂಕಂಪನ ಚಟುವಟಿಕೆಯ ಸಾಧನ ಮೂಲಕ ಲ್ಯಾಂಡಿಂಗ್ ಪ್ರದೇಶದ ಸುತ್ತಲೂ ಭೂಕಂಪನವನ್ನು ಅಳೆಯುತ್ತದೆ.
ಚಂದ್ರ ನಿಖರವಾಗಿ ಭೂಮಿಯಿಂದ ಎಷ್ಟು ದೂರದಲ್ಲಿದ್ದಾನೆ ಎಂಬ ಮಾಹಿತಿ ನೀಡುತ್ತದೆ.
ಅಪಾಯ ಪತ್ತೆ ಮತ್ತು ಅದನ್ನು ತಪ್ಪಿಸುವ ಕ್ಯಾಮರಾ ಸೇರಿದಂತೆ ಏಳು ಸಂವೇದಕಗಳನ್ನು ಹೊಂದಿದ್ದು, ರೋವರ್ ಗೆ ರಕ್ಷಣೆ ನೀಡುತ್ತದೆ.