ಮಾಹಿತಿ ತಂತ್ರಜ್ಞಾನ

ಮಾರುಕಟ್ಟೆಗೆ ಬಂದಿದೆ ಆಧುನಿಕ ಸೌಲಭ್ಯ ಹೊಂದಿರುವ ಸ್ಮಾರ್ಟ್ ಟಿವಿ

Views: 144

ಕನ್ನಡ ಕರಾವಳಿ ಸುದ್ದಿ: ಭಾರತದ ಗ್ಯಾಜೆಟ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಏಸರ್ ಸಂಸ್ಥೆ ಇದೀಗ ಇಂದಿನ ಜನರೇಷನ್ ಬಯಸುವ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಟಿವಿಯನ್ನು ಕಡಿಮೆ ದರದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ.

ಆ್ಯಂಡ್ರಾಯ್ಡ್ 14 ಓಎಸ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್ ಟಿವಿ ಎನಿಸಿರುವ ಏಸರ್ ಏ ಪ್ರೊ ಕ್ಯೂ ಟಿವಿ ಇತ್ತೀಚಿಗೆ ಬಿಡುಗಡೆಯಾಗಿದ್ದು, ಈ ಟಿವಿಯಲ್ಲಿ ಕೃತಕ ಬುದ್ದಿಮತ್ತೆಯ ಸಾಮರ್ಥ್ಯ ಹೊಂದಿರುವುದು ವಿಶೇಷ. ಕಾಲಕ್ಕೆ ತಕ್ಕಂತೆ ಆಧುನಿಕ ಮನೆಗಳಿಗಾಗಿ ಏಸರ್ ಕಂಪನಿ ಐ ಗೂಗಲ್ ಟಿವಿಗಳನ್ನು ಬಿಡುಗಡೆಮಾಡಿದೆ. ಈ ಸರಣಿಯಲ್ಲಿ 43 ಇಂಚು, 50 ಇಂಚು ಮತ್ತು 55 ಇಂಚಿನ ಟಿವಿಗಳು ಲಭ್ಯವಿದೆ.

ಈ ನೂತನ ಬ್ರಾಂಡ್‌ನ ಟಿವಿ ಪ್ರೇಮ್ ಲೆಸ್ ವಿನ್ಯಾಸದಲ್ಲಿ ಸಿದ್ದವಾಗಿರುವುದರಿಂದ ಸೀನ್ ಸ್ಪೇಸ್ ಹೆಚ್ಚಾಗಿದೆ. 4ಕೆ ಕ್ಯೂಎಲ್‌ಇಡಿ ಡಿಸ್ಟ್ರೇ ಇರುವುದರಿಂದ, ವಿಶೇಷವಾಗಿ ಡ್ಯುಯಲ್ ಎಐ ಪ್ರೊಸೆಸರ್ ಇರುವುದರಿಂದ ಅತ್ಯುತ್ತಮ ಗುಣಮಟ್ಟದ ವಿಡಿಯೊಗಳು ಸಿಗುತ್ತದೆ. ಈ ಟಿವಿಯನ್ನು ಕೇವಲ ಸಿನಿಮಾ ವೀಕ್ಷಣೆಗೆ ಮಾತ್ರ ವಲ್ಲದೇ, ಗೇಮಿಂಗ್‌ಗೂ ಅನುಕೂಲವಾಗುವಂತೆ ರೂಪಿಸಲಾಗಿದೆ.

ಏನೇನು  ಸೌಲಭ್ಯಗಳಿವೆ

—ಗೂಗಲ್ ಅಸಿಸ್ಟೆಂಟ್, ಗೂಗಲ್ ಕಾಸ್ಟ್

–30 ವ್ಯಾಟ್ ಕ್ವಾಂಟಮ್ ಹೈ-ಫೈ ಸ್ಪೀಕರ್, ಡಾಲ್‌ಬಿ ಅಟ್ಠಾಸ್ ಮತ್ತು ಡಾಲ್‌ಬಿ ಆಡಿಯೊ

—1 ದೇಶದ ಮೊದಲ ಆ್ಯಂಡ್ರಾಯ್ಡ್ 14 ಓಎಸ್ ಹೊಂದಿರುವ ಪ್ರೇಮ್ ಲೆಸ್ ಟಿವಿಯಾಗಿರುವುದರಿಂದ ಶೇ.98.5ರಷ್ಟು ಸೀನ್ ಸಿಗಲಿದೆ.

ಡ್ಯುಯಲ್ ಎಐ ಪ್ರೊಸೆಸರ ದೊಡ್ಡ ಎಐ ಈ ಕಾಲದ ಅತ್ಯಗತ್ಯ ತಂತ್ರಜ್ಞಾನವಾಗಿ ರೂಪುಗೊಂಡಿದ್ದು, ಪ್ರತಿಯೊಂದು ವಸ್ತುಗಳಲ್ಲಿಯೂ ಅದನ್ನು ಸಮರ್ಥವಾಗಿ ಬಳಸಿ ಕೊಳ್ಳುವತ್ತ ಕಂಪನಿಗಳು ಮುಂದಾಗಿವೆ. ಏಸರ್ ಕೂಡ ಎಐ ತಂತ್ರಜ್ಞಾನವನ್ನು ಬಳಸಿದೆ. ಗೂಗಲ್ ಟಿವಿಯಾಗಿರುವುದರಿಂದ, ಗೂಗಲ್ ಅಸಿಸ್ಟೆಂಟ್ ಮೂಲಕವೇ ಈ ಟಿವಿಯ ಕಾರ್ಯನಿರ್ವಹಸಿ ನಿಯಂತ್ರಿಸಬಹುದಾಗಿದೆ. ಅದು ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ನೀಡುತ್ತದೆ.

50 ಇಂಚಿನ ಕ್ಯೂಎಲ್‌ಇಡಿ ಟಿವಿಯಲ್ಲಿ 2 ಜಿಬಿ ರ್ಯಾಮ್, 16 ಸ್ಟೋರೇಜ್ ಇದ್ದು, ಈ ಸೌಲಭ್ಯವು ಈ ಟಿವಿ ವೇಗವಾಗಿ ಇಂಟರ್ ನೆಟ್ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಆ೦ಡ್ರಾಂ 14 ಗೂಗಲ್ ಟಿವಿಯಲ್ಲಿ ತ್ವರಿತವಾಗಿ ಕೆಲಸ ಮಾಡುತ್ತದೆ. ಇಷ್ಟೆಲ್ಲ ಸೌಲಭ್ಯವಿದ್ದರೂ, ದರ ಗ್ರಾಹಕ ಸ್ನೇಹಿಯಾಗಿದ್ದು, 50 ಇಂಚಿನ ಟಿವಿ 29 ಸಾವಿರ ರೇಂಜ್‌ನಲ್ಲಿದೆ. ಕಡಿಮೆ ಬಜೆಟ್‌ನಲ್ಲಿ ಉತ್ತಮ ಟಿವಿ ಬಯಸುವ ಮಂದಿ ಈ ಕಡೆ ಗಮನ ಹರಿಸಬಹುದಾಗಿದೆ.

Related Articles

Back to top button