ಮಲ್ಪೆಯಲ್ಲಿ ಸಮುದ್ರ ಪಾಲಾಗಿದ್ದ ಹಾಸನದ ಇಬ್ಬರು ಯುವಕರು ಸಾವು

Views: 81
ಕನ್ನಡ ಕರಾವಳಿ ಸುದ್ದಿ: ಮಲ್ಪೆ ಬೀಚ್‌ನಲ್ಲಿ ಶುಕ್ರವಾರ ಸಮುದ್ರದ ನೀರಿನಲ್ಲಿ ಈಜಲು ಹೋಗಿ ಅಲೆಗಳ ಸೆಳೆತಕ್ಕೆ ಕೊಚ್ಚಿ ಹೋಗಿದ್ದ ಮಿಥುನ್ (19) ಅವರ ಮೃತದೇಹವು ಶನಿವಾರ ಸಂಜೆ 4 ಗಂಟೆ ವೇಳೆಗೆ ಕದಿಕೆ ಸಮೀಪದ ಗೆಸ್ಟ್ ಬಳಿಯ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಶಶಾಂಕ (21) ಅವರು ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮುಂಜಾನೆ ಸಾವನ್ನಪ್ಪಿದ್ದಾರೆ.
ಆ. 3ರಂದು ಮುಂಜಾನೆ ಹಾಸನ ದಿಂದ 7 ಜನರ ತಂಡದೊಂದಿಗೆ ಬಂದ ಈ ಇಬ್ಬರು ಮಲ್ಪೆ ಬೀಚ್‌ನ ಸಮುದ್ರದ ನೀರಿನಲ್ಲಿ ಈಜಾಡಿ ಅಲೆಯ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದರು. ಅವರಲ್ಲಿ ಮಿಥುನ್ ಕಣ್ಮರೆಯಾಗಿದ್ದು, ಶಶಾಂಕನನ್ನು ರಕ್ಷಿಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶುಕ್ರವಾರ ರಾತ್ರಿಯಿಂದಲೇ ಪೊಲೀಸರು ಮತ್ತು ಮುಳುಗು ತಜ್ಞ ಈಶ್ವರ ಮಲೈ ಅವರು ಶೋಧ ಕಾರ್ಯ ನಡೆಸಿದ್ದರು. ಮಿಥುನ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಬಳಿಕ ಮನೆಯವರು ಬಿಟ್ಟು ಕೊಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.