ಸೆಂಟ್ರಿಂಗ್ ಕಂಬ ಬಿದ್ದು ಶಾಲಾ ಬಾಲಕಿ ಸಾವು

Views: 315
ಕನ್ನಡ ಕರಾವಳಿ ಸುದ್ದಿ: ಸೆಂಟ್ರಿಂಗ್ ಕಂಬ ಬಿದ್ದು 15 ವರ್ಷದ ಶಾಲಾ ಬಾಲಕಿ ಸಾವನ್ನಪ್ಪಿರುವ ಘಟನೆ ಶನಿವಾರ ಬೆಂಗಳೂರಿನ ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.
ತೇಜಸ್ವಿನಿ (15) ಮೃತ ಬಾಲಕಿ. ಮಧ್ಯಾಹ್ನ ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಬಾಲಕಿ ತೇಜಸ್ವಿನಿ ಬೆಂಗಳೂರಿನ ವಿವಿ ಪುರಂ ಮೆಟ್ರೋ ನಿಲ್ದಾಣದ ಪಕ್ಕದಲ್ಲೇ ಇದ್ದ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಹೀಗೆ ನಡ್ಕೊಂಡು ಹೋಗ್ತಿದ್ದ ಆಕೆಗೆ ಯಮ ಬಲೆ ಹಾಕಿ ಕಾಯುತ್ತಿದ್ದಾನೆ ಅನ್ನುವ ಅಂದಾಜೇ ಇರಲಿಲ್ಲ. ಆಕೆಯ ಪಾಲಿಗೆ ಯಕಶ್ಚಿತ್ ಸೆಂಟ್ರಿಂಗ್ ಕಂಬ ಯಮಪಾಶವಾಗಿದೆ.
ರಸ್ತೆಯಲ್ಲಿ ನಡ್ಕೊಂಡು ಹೋಗ್ತಿದ್ದ ಬಾಲಕಿ ದಿಢೀರ್ ಕುಸಿದು ಬಿದ್ದಳು ವಿವಿ ಪುರಂ ಮೆಟ್ರೋ ನಿಲ್ದಾಣದ ರಸ್ತೆ ಪಕ್ಕದಲ್ಲೇ ಇದ್ದ ಜಾಗದಲ್ಲಿ ಆರಂತಸ್ತಿನ ಕಟ್ಟಡದ ಕೆಲಸ ನಡಿತಿತ್ತು. ಆದ್ರೆ ಅದಕ್ಕೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕಾಮಗಾರಿ ನಡಿತಿದ್ರೂ ಟಾರ್ಪಲ್ ಕಟ್ಟಿರಲಿಲ್ಲ. ಇದರಿಂದಾಗಿ 4 ನೇ ಅಂತಸ್ತಿನಿಂದ ಸೆಂಟ್ರಿಂಗ್ ಮರದ ತುಂಡು ಸೀದಾ ಬಾಲಕಿ ಮೇಲೆ ಬಿದ್ದಿದೆ. ಗಾಯಗೊಂಡ ಬಾಲಕಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾಳೆ. ಘಟನೆ ಸಂಬಂಧ ಮಾಲೀಕನ ನಿರ್ಲಕ್ಷ್ಯ ಹಿನ್ನಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.






