ಮನೆ ಯಜಮಾನಿಗೆ ಗುಡ್ನ್ಯೂಸ್…! ಪತಿ ಜಂಟಿ ಬ್ಯಾಂಕ್ ಖಾತೆ ಮಾಡಿಸಿ ಪತ್ನಿಗೆ ATM ಕಾರ್ಡ್ ನೀಡಬೇಕು:ಸುಪ್ರೀಂಕೋರ್ಟ್

Views: 111
ನವದೆಹಲಿ: ಭಾರತದ ಗೃಹಿಣಿಯರಿಗೆ ಗುಡ್ನ್ಯೂಸ್…. ಇಷ್ಟು ದಿನ ಗಂಡನ ಬಳಿ ತಮ್ಮ ಸ್ವಂತ ಖರ್ಚಿಗೆ ದುಡ್ಡು ಕೇಳಬೇಕಿತ್ತು. ಆದರೆ ಇದೀಗ ಪತಿ ಜಂಟಿ ಬ್ಯಾಂಕ್ ಖಾತೆ ಮಾಡಿಸಿ ಪತ್ನಿಗೆ ATM ಕಾರ್ಡ್ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಒಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅದರಲ್ಲಿ ಜೀವನಾಂಶ ಅನ್ನೋದು ದಾನವಲ್ಲ. ಅದು ವಿವಾಹಿತ ಮಹಿಳೆಯ ಹಕ್ಕು. ಪತಿಯು ಪತ್ನಿಗೆ ಯಾವೆಲ್ಲ ಸೌಕರ್ಯ ನೀಡಬೇಕು ಅನ್ನೋದನ್ನು ನ್ಯಾಯಪೀಠ ಸವಿವರವಾಗಿ ಹೇಳಿದೆ.
ಮನೆ ನೋಡಿಕೊಳ್ಳೋ ಯಜಮಾನಿ, ಹೆಂಡತಿ ಅಂದ್ರೆ ಸುಮ್ಮನೆ ಅಲ್ಲ. ಆಕೆಗೂ ಜವಾಬ್ದಾರಿಗಳಿದೆ. ಆಕೆಗೂ ಸ್ವಂತ ಖರ್ಚಿಗೆ ಹಣದ ಅವಶ್ಯಕತೆಗಳಿದೆ. ಜೀವನಾಂಶ ಅನ್ನೋದು ವಿವಾಹಿತ ಮಹಿಳೆಯ ಹಕ್ಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸುಪ್ರೀಂಕೋರ್ಟ್ ನ್ಯಾಯಪೀಠದ ಉಲ್ಲೇಖದಂತೆ ಮನೆಯಲ್ಲಿರುವ ಗೃಹಿಣಿಗೆ ದುಡಿಯುವ ಗಂಡ ಜಂಟಿ ಬ್ಯಾಂಕ್ ಖಾತೆ ಮಾಡಿಸಬೇಕು. ಆಕೆಗೂ ATM ಕಾರ್ಡ್ ನೀಡಬೇಕು. ಗೃಹಿಣಿಯರಿಗೆ ಹಣಕಾಸಿನ ಸ್ವಾತಂತ್ರ್ಯ ನೀಡುವುದರಿಂದ ಅವರಿಗೆ ಮನೆಯಲ್ಲಿ ಹೆಚ್ಚು ಸುರಕ್ಷತೆಯ ಭಾವನೆ ಮೂಡುತ್ತದೆ. ಹೀಗಾಗಿ ಮನೆಯ ಖರ್ಚಿನ ಜೊತೆಗೆ ಆಕೆಯ ವೈಯಕ್ತಿಕ ಖರ್ಚುಗಳಿಗೂ ಗಂಡ ಹಣ ಕೊಡಬೇಕು. ಆಗ ಮಾತ್ರ ಮಹಿಳೆಯು ನೆಮ್ಮದಿಯಿಂದ ಇರಲು ಸಾಧ್ಯ ಎಂಬುದಾಗಿ ಕೋರ್ಟ್ ತಿಳಿಸಿದೆ.






