ಇತರೆ

ಮನೆಯಲ್ಲಿ ಆಡುತ್ತಿದ್ದ 6 ವರ್ಷದ ಮಗು ಅಪಹರಿಸಿ ನದಿಗೆ ಎಸೆದ ಭೂಪ!

Views: 130

ಕನ್ನಡ ಕರಾವಳಿ ಸುದ್ದಿ: ಆರು ವರ್ಷದ ಮಗುವನ್ನು ಅಪಹರಿಸಿದ್ದಲ್ಲದೇ ನದಿಗೆಸೆದ ಘಟನೆ ಬಿಹಾರದ ಮೋತಿಹಾರಿಯ ರಲ್‌ನಲ್ಲಿ ನಡೆದಿದೆ. ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಗ್ಯ ಕಾರ್ಯಕರ್ತರ ಆರು ವರ್ಷದ ಮಗು ಇದಾಗಿದ್ದು, ಆರೋಪಿ ನೇಪಾಳದ ನಾರಾಯಣ್‌ ಘಾಟ್‌ನಲ್ಲಿರುವ ನಾರಾಯಣಿ ನದಿಗೆ ಎಸೆದಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಆರೋಪಿ ನೀಡಿದ ಮಾಹಿತಿಯ ಮೇರೆಗೆ ರಕ್ಷೌಲ್ ಪೊಲೀಸರ ತಂಡ ನಾರಾಯಣ್ ನದಿಯಲ್ಲಿ ಮಗುವಿಗಾಗಿ ಹುಡುಕಾಟ ನಡೆಸಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಕೂಡ ನಡೆಸಲಾಗುತ್ತಿದೆ. ಮಗುವಿನ ಶವ ಪತ್ತೆಯಾಗಿಲ್ಲ. ಹಾಗಾಗಿ ನದಿಯಲ್ಲಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ಯಾವುದೋ ಸೇಡಿನ ಹಿನ್ನೆಲೆಯಲ್ಲಿ ಮೇ 28ರಂದು ಮನೆಯಲ್ಲಿ ಆಡುತ್ತಿದ್ದ ಮಗುವನ್ನು ಯಾರಿಗೂ ಗೊತ್ತಾಗದಂತೆ ಅಪಹರಿಸಿದ್ದ ಆರೋಪಿ, ನೇಪಾಳದ ನದಿಗೆ ಎಸೆದಿದ್ದ. ಅಪಹರಣದ ಬಗ್ಗೆ ತಿಳಿದ ತಕ್ಷಣ ಪೋಷಕರು, ಪೊಲೀಸರಿಗೆ ಮಾಹಿತಿ ನೀಡಿದ್ದರು.

Related Articles

Back to top button
error: Content is protected !!