ಸಾಮಾಜಿಕ
ಮದುವೆ ಮನೆಗೆ ಬಂದ ಕಪಿರಾಯ..! ಮಂಗನಾಟಕ್ಕೆ ಹೈರಾಣಾದ ನೆಂಟರಿಷ್ಟರು..

Views: 148
ಹಾಸನ:ಮದುವೆ ಮನೆಗೆ ಬಂದ ಕಪಿರಾಯ ರಂಪಾಟ ನಡೆಸಿದೆ.ಮಂಟಪದಲ್ಲಿ ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ್ದಲ್ಲದೇ, ಮಂಗನಾಟಕ್ಕೆ ಜನರು ಹೈರಾಣಾಗಿದ್ದಾರೆ.

ಊಟ ಮಾಡಲು ಹೋದವರಿಗೂ ತೊಂದರೆ ಕೊಟ್ಟಿದೆ. ಇಷ್ಟು ಮಾತ್ರವಲ್ಲದೇ ಮದುವೆಗೆ ಬಂದವರಿಗೆ ಮಂಗ ಕಚ್ಚಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಘಟನೆ ನಡೆದಿದೆ.
ಹಿರಿಸಾವೆಯ ನುಗ್ಗೆಹಳ್ಳಿ ರಸ್ತೆಯಲ್ಲಿ ನಡೆಯುತ್ತಿದ್ದ ಮದುವೆಗೆ ಕರೆಯದೇ ಬಂದ ಕೋತಿ ಕಾಟಕ್ಕೆ ನೆಂಟರಿಷ್ಟರು ಹೈರಣಾದರು. ಡೈನಿಂಗ್ ಹಾಲ್ನಲ್ಲಿ ಊಟ ಮಾಡುತ್ತಿದ್ದವರಿಗೂ ಕಿರಿಕಿರಿ ಮಾಡಿ, ಊಟ ಕಸಿದುಕೊಂಡಿದೆ. 8-10 ಮಂದಿ ಮೇಲೆ ದಾಳಿ ಮಾಡಿ ಕಚ್ಚಿದೆ. ಸುಶೀಲಮ್ಮ, ಲೀಲಾವತಿ, ನಿಂಗೇಗೌಡ, ಗೌರಮ್ಮ, ಗಿರಿಜಮ್ಮ , ತಿಮ್ಮೇಗೌಡ, ಗಿರಿಗೌಡ ಎಂಬುವವರಿಗೆ ಕೋತಿ ಕಚ್ಚಿದ್ದು, ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸುತ್ತಮುತ್ತಲಿನ ಹಳ್ಳಿಯಲ್ಲಿ ಓಡಾಡುತ್ತಿರುವ ಕೋತಿ ಹಿಡಿದು ಸ್ಥಳಾಂತರ ಮಾಡಲು ಆಗ್ರಹಿಸಿದ್ದಾರೆ.






