ಯುವಜನ

ಮದುವೆ ಪ್ರೀತಿಯಷ್ಟೇ ಅಲ್ಲ..ಜೀವನಪರ್ಯಂತದ ಸಂಬಂಧ..ಮದುವೆಯ ನಿರ್ಧಾರಕ್ಕೆ ಮೊದಲು ಯೋಚಿಸಿ!!!

Views: 61

ಕನ್ನಡ ಕರಾವಳಿ ಸುದ್ದಿ: ಮದುವೆ ಎಂಬುದು ಕೇವಲ ಒಂದು ಸಾಮಾಜಿಕ ಬಾಂಧವ್ಯವಲ್ಲ, ಅದು ಜೀವನಪರ್ಯಂತದ ಸಂಬಂಧ. ಹೀಗಾಗಿ ಮದುವೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು  ತಮ್ಮ ಭವಿಷ್ಯದ ಸಂಗಾತಿಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ.

ಇಂದಿನ ಕಾಲದಲ್ಲಿ ಕುಟುಂಬದ ಒತ್ತಡಕ್ಕೆ ಸಡನ್ ಆಗಿ ಒಪ್ಪಿಗೆ ನೀಡುವುದಕ್ಕಿಂತ ಸ್ವತಃ ವಿಚಾರಮಾಡಿ, ಭಾವನಾತ್ಮಕ ಹಾಗೂ ಬೌದ್ಧಿಕವಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ.

ಮೊದಲಿಗೆ ಹುಡುಗನ ಕುಟುಂಬ ಮತ್ತು ಅವರ ಹಿನ್ನೆಲೆ ಕುರಿತು ತಿಳಿದುಕೊಳ್ಳಬೇಕು. ಅವರ ಮನಸ್ಥಿತಿ, ಸಂಸ್ಕಾರ ಹಾಗೂ ವರ್ತನೆಯ ಬಗ್ಗೆ ಅರಿವು ಹೊಂದಿದರೆ ಮದುವೆಯ ನಂತರದ ಜೀವನ ಸುಗಮವಾಗುತ್ತದೆ. ಅಲ್ಲದೆ ಅವರ ಜೀವನಶೈಲಿ, ಅಭಿಪ್ರಾಯಗಳು, ರಾಜಕೀಯ ಅಥವಾ ಧಾರ್ಮಿಕ ದೃಷ್ಟಿಕೋನಗಳು ನಿಮ್ಮದಕ್ಕೆ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಗಮನಿಸಬೇಕು.

ಭವಿಷ್ಯದ ಯೋಜನೆಗಳ ವಿಷಯದಲ್ಲೂ ಅವರು ಏನನ್ನು ಕನಸಾಗಿಟ್ಟಿದ್ದಾರೆ, ವಿದೇಶದಲ್ಲಿ ನೆಲೆಸುವ ಆಸೆ ಇದೆಯೇ, ಅಥವಾ ತಮ್ಮ ವೃತ್ತಿಜೀವನಕ್ಕೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು.

ಇದರ ಜೊತೆಗೆ ಇಬ್ಬರಿಗೂ ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಲು ಸಿದ್ಧ ಇರಬೇಕು. ಈ ವಿಷಯಗಳನ್ನು ಮುಂಚಿತವಾಗಿ ತಿಳಿದುಕೊಂಡರೆ ಮುಂದಿನ ದಿನಗಳಲ್ಲಿ ಅಸಮಾಧಾನ ಅಥವಾ ಪಶ್ಚಾತ್ತಾಪದ ಸಂದರ್ಭಗಳು ಬರುವುದಿಲ್ಲ.

ಮದುವೆ ಎನ್ನುವುದು ಪ್ರೀತಿಯಷ್ಟೇ ಅಲ್ಲ, ಪರಸ್ಪರ ಅರ್ಥಮಾಡಿಕೊಳ್ಳುವ ಬಾಂಧವ್ಯವೂ ಹೌದು. ಹೀಗಾಗಿ ಜೀವನ ಸಂಗಾತಿ ಆಯ್ಕೆ ಮಾಡುವ ಮೊದಲು ಮನಸ್ಸು ಮತ್ತು ವಿವೇಕ ಎರಡನ್ನೂ ಸಮತೋಲನದಿಂದ ಬಳಸುವುದು ಅತ್ಯಂತ ಮುಖ್ಯ.

 

Related Articles

Back to top button