ಮದುವೆಯಾಗುವಂತೆ ಒತ್ತಡ ಹೇರಿದ್ದ ಪ್ರೇಯಸಿ ಕೊಲೆ ಮಾಡಿದ ಪ್ರಿಯಕರ!
Views: 84
ಕನ್ನಡ ಕರಾವಳಿ ಸುದ್ದಿ: ಮದುವೆಯಾಗುವಂತೆ ಒತ್ತಡ ಹೇರಿದ್ದ ಪ್ರೇಯಸಿಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಈರೋಡ್ ನಲ್ಲಿ ನಡೆದಿದೆ.
ಮೃತರನ್ನು ಅಪ್ಪಕುಡಲ್ ಪಟ್ಟಣದ ಬ್ಯೂಟಿಷಿಯನ್ ಸೋನಿಯಾ ಎಂದು ಗುರುತಿಸಲಾಗಿದೆ. ಮೋಹನ್ ಬಂಧಿತ ಆರೋಪಿ.
ಮಳೆ ಬಂತೆಂದು ಅಣಬೆ ಸಂಗ್ರಹಿಸಲು ಹೊಲಕ್ಕೆ ಹೋದ ಸ್ಥಳೀಯರು ರಕ್ತಸಿಕ್ತ ಚಾಕು ಮತ್ತು ಮಣ್ಣಿನಲ್ಲಿ ಕೂದಲನ್ನು ಕಂಡು ಬೆಚ್ಚಿಬಿದ್ದಿದ್ದರು. ಕೃಷಿಭೂಮಿಯೊಂದರಲ್ಲಿ ಮೂರು ಅಡಿ ಆಳದ ಗುಂಡಿಯಿಂದ ಪೊಲೀಸರು ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ.
ಸೋನಿಯಾ ನವೆಂಬರ್ 1 ರಿಂದ ಕಾಣೆಯಾಗಿದ್ದರು. ಅವರು ಕೆಲಸದಿಂದ ಮನೆಗೆ ಬಾರದ ಕಾರಣ ಅವರ ಕುಟುಂಬವು ನಾಪತ್ತೆ ದೂರು ದಾಖಲಿಸಿತ್ತು. ವಿಧವೆಯಾಗಿರುವ ಸೋನಿಯಾ, ತನ್ನ ಮಕ್ಕಳು ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದರು. ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಭೇಟಿಯಾಗಿ ಇಬ್ಬರ ಮಧ್ಯೆ ಸಂಬಂಧ ಬೆಳೆದಿತ್ತು.
ನಂತರ ಆಕೆ ತನ್ನನ್ನು ಮದ್ವಯಾಗುವಂತೆ ಪೀಡಿಸುತ್ತಿದ್ದುದಕ್ಕೆ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಅಪರಾಧ ನಡೆದ ದಿನ ಮೋಹನ್ ಕುಮಾರ್ ತನ್ನ ಜಮೀನಿನಲ್ಲಿ ಗುಂಡಿ ತೋಡಿ ರಾತ್ರಿ 8 ಗಂಟೆ ಸುಮಾರಿಗೆ ಸೋನಿಯಾಳನ್ನು ಅಲ್ಲಿಗೆ ಕರೆಸಿಕೊಂಡಿದ್ದ. ಅವನು ಆಕೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಸಣ್ಣ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಂದು, ನಂತರ ಆಕೆಯ ಶವವನ್ನು ಹೂತು ಹಾಕಿ, ಆಕೆಯ ಫೋನ್ ಮತ್ತು ಬಟ್ಟೆಗಳನ್ನು ಭವಾನಿ ಕಾಲುವೆಯ ಬಳಿ ವಿಲೇವಾರಿ ಮಾಡಿದ್ದ. ಪೆರುಂಡುರೈ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಂಡದೊಂದಿಗೆ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.






