ಮದುವೆಯಾಗಿ ಗಂಡನ ಮನೆಯಿಂದಲೇ ಲೂಟಿ ಮಾಡಿಕೊಂಡು ಪರಾರಿಯಾಗುವ ವಧು ವಶಕ್ಕೆ
Views: 120
ಕನ್ನಡ ಕರಾವಳಿ ಸುದ್ದಿ: ಲೂಟಿ ಮಾಡುವ ವಧು ಬಂಧಿಸಿದ ಪೊಲೀಸರಿಗೆ ನಗು ಮುಖದ ಆರೋಪಿ ಕಾಜಲ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಮದುವೆ ಹೆಸರಿನಲ್ಲಿ ನಾಟಕವಾಡಿ ಗಂಡನ ಮನೆಯ ಹಣ, ಚಿನ್ನಾಭರಣ ಲೂಟಿ ಮಾಡಿಕೊಂಡು ಪರಾರಿಯಾಗುವ ಗ್ಯಾಂಗ್ ಇದು.

ಒಂದು ವರ್ಷಕ್ಕೂ ಹೆಚ್ಚು ಕಾಲ, ಅವಳು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ಸಿಮ್ ಕಾರ್ಡ್, ಐಡೆಂಟಿಟಿಯನ್ನು ಸಿನಿಮಾ ಶೈಲಿಯಲ್ಲಿ ಬದಲಾಯಿಸಿಕೊಂಡು ಊರಿಂದ ಊರಿಗೆ ಓಡಾಡುತ್ತಿದ್ದಳು. ನೋಡಲು ಸುಂದರವಾದ ಈಕೆಯನ್ನು ಹಿಂದಿ ಭಾಷೆಯಲ್ಲಿ ಲೂಟೇರಿ ದುಲ್ಹನ್ ಅಂತ ಕರೆಯುತ್ತಾರೆ. ಅಂದರೇ, ಲೂಟಿ ಮಾಡುವ ವಧು ಎಂದರ್ಥ. ಮದುವೆಯಾಗಿ ಗಂಡನ ಮನೆಯಿಂದ ಹಣ, ಚಿನ್ನಾಭರಣವನ್ನು ಲೂಟಿ ಮಾಡಿಕೊಂಡು ಪರಾರಿಯಾಗುವ ಹೆಣ್ಣು ಎಂದರ್ಥ. ಮದುವೆಯ ಪವಿತ್ರ ಬಂಧನವನ್ನು ವಂಚನೆಯ ಸಾಧನವನ್ನಾಗಿ ಮಾಡಿಕೊಂಡಿದ್ದಳು. ಈಕೆಯೇ ಕಾಜಲ್. ಈಕೆ ಮೂಲತಃ ಉತ್ತರ ಪ್ರದೇಶದ ಮಥುರಾದ ಗೋವರ್ಧನ್ ಪ್ರದೇಶದವಳು. ತನ್ನ ತಂದೆ, ತಾಯಿ ಹಾಗೂ ಸೋದರಿ ಜೊತೆ ಸೇರಿ ಮದುವೆಯಾಗದ ಹುಡುಗರನ್ನು ಹಣದಾಸೆಗಾಗಿ ಮದುವೆಯಾಗಿ ವಂಚಿಸುವುದೇ ಈಕೆಯ ಕಾಯಕ.

ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಜನರಿಗೆ ಮದುವೆ ಹೆಸರಿನಲ್ಲಿ ಕಾಜಲ್ ಜನರಿಗೆ ವಂಚಿಸಿದ್ದಳು. ಸುಳ್ಳು , ನಕಲಿ ವಿವಾಹ, ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ, ಮೋಸಗೊಳಿಸುವ ಕಲೆ ಕರಗತವಾಗಿತ್ತು. ಮದುವೆಯಾಗದ ಹುಡುಗರನ್ನು ಹುಡುಕಿ ಅವರಿಂದ ಮದುವೆಗೆ ವಧುದಕ್ಷಿಣೆಯಾಗಿ 10 ರಿಂದ 12 ಲಕ್ಷ ರೂಪಾಯಿ ಹಣ ಪಡೆದು ಒಂದೆರೆಡು ದಿನದಲ್ಲೇ ಮದುವೆಯಾದ ಗಂಡನ ಮನೆಯಿಂದಲೇ ನಾಪತ್ತೆಯಾಗುತ್ತಿದ್ದಳು. ಈಕೆಯ ವಿರುದ್ಧ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಈ ಸುಂದರಿ ಕಾಜಲ್ ಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.






