ಸಾಮಾಜಿಕ

ಮದುವೆಗೆ ಮುನ್ನ ಭಾವಿ ಪತ್ನಿಯನ್ನು ನೇಣು ಹಾಕಿ ಪರಾರಿಯಾದ ಪತಿ !… ಸಾವಿನ ಕೇಸ್‌ಗೆ ಟ್ವಿಸ್ಟ್‌..!?

Views: 258

ಮೈಸೂರು: ನಿಶ್ಚಿತಾರ್ಥ ಮಾಡ್ಕೊಂಡು ಭಾವಿ ಪತಿ, ತನ್ನ ಹುಡುಗಿಯನ್ನೇ ಕೊಂದ ಆರೋಪ ಎದುರಿಸುತ್ತಿದ್ದಾನೆ.

ಮೈಸೂರು ಜಿಲ್ಲೆ ಹೆಚ್‌.ಡಿ.ಕೋಟೆ, ತಾಲೂಕಿನ ಹಿರೇಹಳ್ಳಿ ಗ್ರಾಮದ ಕವಿತಾ ಮತ್ತು ನಿರಂಜನ ಜಗ್ಗ ಎಂಬಾತ ಜೊತೆ ನಿಶ್ಚಿತಾರ್ಥ ನೆರವೇರಿತ್ತು. ಅದು ಕೆಲ ದಿನಗಳ ಹಿಂದೆ. ಅಷ್ಟೇ ಅಲ್ಲ, ಎರಡು ಮನೆಯ ಹಿರಿಯರು ಸೇರಿ ಅಕ್ಟೋಬರ್‌ 21ರಂದು, ಮದ್ವೆ ಕೂಡ ನಿಶ್ಚಯ ಮಾಡಿಬಿಟ್ಟಿದ್ದರು. ಆದ್ರೆ, ಈಗ ಕವಿತಾಳೇ ಇಲ್ಲ. ಆಕೆಯನ್ನು ನಿರಂಜನನೇ ಕೊಂದು ನೇಣು ಹಾಕಿದ್ದಾನೆ ಅನ್ನೋದು ಹುಡುಗಿ ಮನೆಯವರ ಗಂಭೀರ ಆರೋಪ.

ಸದ್ಯ ಎಲ್ಲರನ್ನು ಕಾಡ್ತಿರೋ ಪ್ರಶ್ನೆ ಕವಿಳಾದ್ದು ಕೊಲೆಯೋ ಆತ್ಮಹತ್ಯೆಯೋ ಅನ್ನೋದು. ಆದ್ರೆ, ಆಕೆಯ ಪೋಷಕರಾದ ಪುಟ್ಟಮಲ್ಲಪ್ಪ ಹಾಗು ಶಿವನಂಜಮ್ಮ ಪ್ರಕಾರ, ಇದೊಂದು ಕೊಲೆ. ಅದೇ ರೀತಿಯಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಷ್ಟಕ್ಕೂ ಮದುವೆಗೂ ಮುನ್ನ ಏನಾಯ್ತು ಅಂದ್ರೆ ಹಿರೇಹಳ್ಳಿಯಲ್ಲಿರೋ ಕವಿತಾ ಮನೆಗೆ ಭಾವಿ ಪತಿ ನಿರಂಜನ ಬಂದಿದ್ದನಂತೆ. ಆ ವೇಳೆಗೆ ಕವಿತಾ ಪೋಷಕರು ಹೊಲದಲ್ಲಿ ಕೆಲ್ಸ ಮಾಡ್ತಿದ್ದರಂತೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಬಂದ ನಿರಂಜನ ಮತ್ತು ಕವಿತಾ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆಯಂತೆ. ಈ ಜಗಳ ವಿಕೋಪಕ್ಕೆ ಹೋಗಿ, ನಿರಂಜನ ಕವಿತಾಳನ್ನು ಸಾಯಿಸಿ, ನೇಣು ಹಾಕಿದನಂತೆ ಅನ್ನೋದು ಪೋಷಕರ ಆರೋಪ.

ಆ ನಂತರ ಮನೆಯ ಹೆಂಚು ತೆಗೆದು, ಅಲ್ಲಿಂದ ಹಾರಿ ಎಸ್ಕೇಪ್ ಆದನಂತೆ. ಗ್ರಾಮಸ್ಥರು ನಿರಂಜನನ್ನು ಹಿಡಿಯಲು ಓಡಿದ್ದಾರೆ. ಆದ್ರೆ, ಆತ ಎಸ್ಕೇಪ್ ಆಗುವಲ್ಲಿ ಯಶಸ್ವಿಯಾಗಿದ್ದಾನೆ. ಯಾವಾಗ ಆತ ಓಡಿದನೋ ಈ ವಿಚಾರ ಪೋಷಕರಿಗೆ ತಿಳಿಸಲಾಗಿದೆ. ಮನೆಗೆ ಬಂದು ನೋಡಿದಾಗ, ಕವಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹೀಗಾಗಿ, ನನ್ನ ಮಗಳನ್ನು ಈತನೇ ಕೊಂದು ನೇಣು ಹಾಕಿದ್ದಾನೆ ಅನ್ನೋದು ಕುಟುಂಬದ ಗಂಭೀರ ಆರೋಪ.

ಘಟನೆ ನಡೆದ ನಂತರ ಎಚ್.ಡಿ.ಕೋಟೆ ಅಂತರಸಂತೆ ಠಾಣೆಗೆ ತೆರಳಿ ಆರೋಪಿ ನಿರಂಜನ ಪೊಲೀಸ್ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾನೆ. ನಾನು, ಕೊಲೆ ಮಾಡಿಲ್ಲ. ಆಕೆಯೇ ನೇಣು ಹಾಕಿಕೊಂಡಿದ್ದಾಳೆ. ಗ್ರಾಮಸ್ಥರು ನನ್ನನ್ನ ಹೊಡೆದು ಸಾಯಿಸಿಬಿಡ್ತಾರೆ ಅನ್ನೋ ಭಯದಿಂದ ನಾನು ಓಡಿ ಹೋದೆ, ಅಂತಾ ಪೊಲೀಸರ ಮುಂದೆ ಹೇಳಿದ್ದಾನೆ.

ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಆದ್ರೆ, ಜಗಳಕ್ಕೆ ನಿಖರ ಕಾರಣವೇನು? ನಿರಂಜನ ಹೇಳ್ತಿರೋದು ನಿಜಾನಾ ಸುಳ್ಳಾ? ಅನ್ನೋದನ್ನ ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related Articles

Back to top button
error: Content is protected !!