ಸಾಮಾಜಿಕ

ಮದುವೆ ಮಾಡಿಕೊಳ್ಳಲು ರಜೆ ಕೊಡದ ಬಾಸ್ – ವಿಡಿಯೋ ಕಾಲ್‌ನಲ್ಲಿಯೇ ಮದುವೆ

Views: 294

ಕನ್ನಡ ಕರಾವಳಿ ಸುದ್ದಿ: ಮದುವೆ ಮಾಡಿಕೊಳ್ಳಲು ಬಾಸ್ ರಜೆ ಕೊಡದ ಕಾರಣ ವರ ಹಾಗೂ ವಧು ವಿಡಿಯೋ ಕಾಲ್‌ನಲ್ಲಿಯೇ ವಿವಾಹವಾಗಿರುವ ಸಂಗತಿಯೊಂದು ನಡೆದಿದೆ.

ಭಾರತೀಯ ಮೂಲದ ವ್ಯಕ್ತಿ ಟರ್ಕಿಯಲ್ಲಿದ್ದರು ಆತನ ಮದುವೆ ಮಾಡಿ ಕೊಳ್ಳಲು ಬಾಸ್ ರಜೆ ಕೊಡದ ಕಾರಣ ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ವಧುವಿನೊಂದಿಗೆ ವಿಡಿಯೋ ಕಾಲ್ ಮೂಲಕ ವಿವಾಹವಾಗಿದ್ದಾರೆ.

ವಧುವಿನ ಅಜ್ಜನಿಗೆ ಅನಾರೋಗ್ಯದ ಹಿನ್ನೆಲೆ ವರನನ್ನು ಬೇಗ ಮದುವೆಯಾಗು ಎಂದು ವಧುವಿನ ಕುಟುಂಬಸ್ಥರು ಒತ್ತಾಯಿಸಿದ್ದರು. ಈ ಕಾರಣದಿಂದ ವರ ಮದುವೆಗಾಗಿ ಬಾಸ್ ಬಳಿ ರಜೆ ಕೋರಿದ್ದರು. ಆದರೆ ಬಾಸ್ ರಜೆಯನ್ನು ನಿರಾಕರಿಸಿದ್ದರು. ಇದರಿಂದ ಈ ವಿಷಯವನ್ನು ತಿಳಿದ ಕುಟುಂಬಸ್ಥರು ವರ್ಚುವಲ್ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ

ಬಿಲಾಸ್‌ಪುರದ ನಿವಾಸಿಯಾಗಿರುವ ವರ ಅದ್ನಾನ್ ಮುಹಮ್ಮದ್ ಅವರ ಕುಟುಂಬವು ಭಾನುವಾರ ಮಂಡಿಗೆ ತಲುಪಿದರು. ಬಳಿಕ ಸೋಮವಾರ ವಿಡಿಯೋ ಕರೆಯ ಮೂಲಕ ವಿವಾಹವಾಗಿದ್ದು, ಖಾಜಿಯೊಬ್ಬರು ಕುಬೂಲ್ ಹೈ ಎಂದಾಗ ಮೂರು ಬಾರಿ ಹೇಳುವ ಮೂಲಕ ಧಾರ್ಮಿಕ ಕ್ರಿಯೆಗಳು ನೆರವೇರಿದವು.

Related Articles

Back to top button