ಸಾಮಾಜಿಕ

ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಪ್ರೀತಿಯ  ಬಲೆಗೆ ಬಿದ್ದು ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿ!

Views: 428

ಮಕ್ಕಳ ಮದುವೆಗೆ ಇನ್ನೇನು ದಿನ ಹತ್ತಿರವಾಗುತ್ತಿದ್ದಂತೆ ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿಯಾಗಿದ್ದಾರೆ.

ಈ  ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದ್ದು, ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ವಧುವಿನ ತಾಯಿಯೊಂದಿಗೆ ವರನ ತಂದೆ ಪರಾರಿಯಾಗಿದ್ದಾನೆ. ಮಕ್ಕಳ ಮದುವೆ ಮಾತುಕತೆ ಸಂದರ್ಭದಲ್ಲಿ ವರನ ತಂದೆ ಶಕೀಲ್‌ ಮತ್ತು ವಧುವಿನ ತಾಯಿ ಅಸ್ಮಾ ಖಾತುನ್‌ ನಡುವೆ ಪ್ರೀತಿ ಚಿಗುರೊಡದಿದೆ. ಮತ್ತು ಮದುವೆ ಮಾತುಕತೆಯ ನೆಪದಲ್ಲಿ ಶಕೀಲ್‌, ಅಸ್ಮಾಳ ಮನೆಗೆ ಹೋಗುತ್ತಿದ್ದ. ಇದೀಗ ಮಕ್ಕಳ ಮದುವೆ ಸಮೀಪಿಸುತ್ತಿದ್ದಂತೆ ಈ ಇಬ್ಬರು ಓಡಿ ಹೋಗಿದ್ದಾರೆ.

ವರದಿಗಳ ಪ್ರಕಾರ ಶಕೀಲ್‌ಗೆ 10 ಮತ್ತು ವಧುವಿನ ತಾಯಿಗೆ 6 ಮಕ್ಕಳಿದ್ದಾರೆ. ಆದ್ರೆ ಪ್ರೀತಿಯ ಬಲೆಗೆ ಬಿದ್ದ ಈ ಇಬ್ಬರು ಮಕ್ಕಳ ಜವಬ್ದಾರಿಯನ್ನೂ ಮರೆತು ಇದೀಗ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಈ ಬಗ್ಗೆ ಅಸ್ಮಾಳ ಗಂಡ ಶಕೀಲ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ವರನ ತಂದೆಯೇ ನನ್ನ ಪತ್ನಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾನೆ. ದೂರಿನ ಅನ್ವಯ ಇದೀಗ ಪೊಲೀಸರು ಈ ಇಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Related Articles

Back to top button
error: Content is protected !!