ಸಾಂಸ್ಕೃತಿಕ

ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು ಎಸ್‌ ಎಲ್‌ ಭೈರಪ್ಪ ವಿಲ್ ಗೊಂದಲ,ಭಾರೀ ಚರ್ಚೆ!

Views: 181

ಕನ್ನಡ ಕರಾವಳಿ ಸುದ್ದಿ: ನಿಧನರಾದ ನಾಡಿನ ಹಿರಿಯ ಸಾಹಿತಿ, ಕಾದಂಬರಿಕಾರ ಎಸ್‌ಎಲ್‌ ಭೈರಪ್ಪ ಅವರ ಅಂತ್ಯಕ್ರಿಯೆ  ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬ್ರಾಹ್ಮಣ ಸಂಪ್ರದಾಯದ ವಿಧಿ ನಡೆಯಲಿದೆ.

ಆದರೆ, ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಮಾಡುವಂತಿಲ್ಲ ಎಂದು ಭೈರಪ್ಪನವರು ವಿಲ್ ಬರೆದಿಟ್ಟಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ವಿಲ್ ಬಾಂಡ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ, ಈ ಬಗ್ಗೆ ಅವರ ಕುಟುಂಬಸ್ಥರು ಖಚಿತಪಡಿಸಿಲ್ಲ. ಹೀಗಾಗಿ ಈ ವಿಲ್ ಗೊಂದಲ ಸೃಷ್ಟಿಸಿದ್ದು, ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಈ ವೇಳೆ ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಉದಯ ಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ ಎಂದು ಲೇಖಕ ಎಸ್. ಎಲ್. ಭೈರಪ್ಪ ಮಾಡಿರುವ ವಿಲ್ ಎಂದು ಅವರ ಅಭಿಮಾನಿ ಫಣೀಶ್ ಎಂಬುವರು ಪ್ರದರ್ಶಿಸಿದ್ದಾರೆ. ಭೈರಪ್ಪನವರು ವಿಲ್‌ನಲ್ಲಿ ತಮ್ಮ ಮಕ್ಕಳಾದ ಉದಯಶಂಕರ್ ಮತ್ತು ರವಿಶಂಕರ್ ಅವರು ಅಂತ್ಯಸಂಸ್ಕಾರವನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಬರೆದಿದ್ದಾರೆ. ಅವರ ಬದುಕಿನ ಕೊನೆಯ ದಿನಗಳಲ್ಲಿ ಅವರನ್ನು ನೋಡಿಕೊಂಡ ಹೆಣ್ಣುಮಗಳೇ ಅಂತಿಮ ಸಂಸ್ಕಾರವನ್ನು ನೆರವೇರಿಸಬೇಕು ಎಂಬುದು ಅವರ ಆಶಯವಾಗಿತ್ತು. ಆ ಮಹಾನ್ ಚೇತನದ ಕೊನೆಯ ಆಸೆಯನ್ನು ಈಡೇರಿಸಬೇಕು ಎಂದು ಫಣೀಶ್ ಪ್ರತಿಪಾದಿಸಿದರು.

ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಲಾಮಂದಿರದ ಆವರಣದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಅಭಿಮಾನಿಯ ಈ ನಡೆಯಿಂದಾಗಿ, ಕುಟುಂಬ ಸದಸ್ಯರು ಮತ್ತು ಸಾರ್ವಜನಿಕರ ನಡುವೆ ಗೊಂದಲ ಉಂಟಾಯಿತು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಸ್ಥಳದಲ್ಲಿದ್ದ ಪೊಲೀಸರು, ಕೊನೆಗೆ ಫಣೀಶ್ ಅವರನ್ನ ವಶಕ್ಕೆ ಪಡೆದು ಕರೆದೊಯ್ದರು.

Related Articles

Back to top button
error: Content is protected !!