ಕೃಷಿ
ಬ್ರಹ್ಮಾವರ: ಎತ್ತಿನ ಕೊಂಬು ಕುತ್ತಿಗೆಗೆ ಸಿಲುಕಿ ಯುವಕ ಸಾವು

Views: 202
ಕನ್ನಡ ಕರಾವಳಿ ಸುದ್ದಿ: ಕೃಷಿ ಕೆಲಸಕ್ಕೆಂದು ಹಟ್ಟಿಯಿಂದ ಎತ್ತನ್ನು ಬಿಡಿಸಿಕೊಂಡು ಗದ್ದೆಯತ್ತ ಹೋಗುವಾಗ ಮನೆಯ ತೋಟದ ಬಳಿ ಎತ್ತಿನ ಕೊಂಬು ಅಕಸ್ಮಿಕವಾಗಿ ಯುವಕನ ಕುತ್ತಿಗೆಗೆ ಹೊಕಿದ್ದು, ಇದರಿಂದ ಅತಿಯಾದ ರಕ್ತಸ್ರಾವದಿಂದ ಆತ ಮೃತಪಟ್ಟ ಘಟನೆ ಕೊಕ್ಕರ್ಣೆ ಸಮೀಪದ ಕುದಿ ಗ್ರಾಮದ ಹೊರ್ಲಾಳಿ ತೆಂಕಬೈಲು ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಹೊರ್ಲಾಳಿ ತೆಂಕಬೈಲಿನ ಜಯಪ್ರಕಾಶ್ (27) ಎಂದು ಗುರುತಿಸಲಾಗಿದೆ. ಜಯಪ್ರಕಾಶ್ ಬೆಳಗ್ಗೆ ಕೃಷಿ ಕೆಲಸಕ್ಕೆಂದು ಹಟ್ಟಿಯಿಂದ ಎತ್ತನ್ನು ಕೊಂಡೊಯ್ಯುತಿದ್ದಾಗ ಈ ದುರ್ಘಟನೆ ನಡೆದಿದೆ. ಎತ್ತಿನ ಉದ್ದದ ಕೊಂಬು ಅಕಸ್ಮಿಕವಾಗಿ ಜಯಪ್ರಕಾಶ್ ಕುತ್ತಿಗೆಗೆ ಹೊಕ್ಕಿದ್ದು, ಅತೀಯಾದ ರಕ್ತಸ್ರಾವದಿಂದ ಬಿದ್ದು ಹೊರಳಾಡುತಿದ್ದ ಆತನನ್ನು ಕೂಡಲೇ ಅಂಬುಲೆನ್ಸ್‌ನಲ್ಲಿ ಮಣಿಪಾಲ ಕೆಎಂಸಿ ಗೆ ಕರೆದೊಯ್ದರು ಅಲ್ಲಿ ತಲುಪುವ ಮೊದಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.