ಬುದ್ಧಿಮಾಂದ್ಯ ಯುವತಿಯೊಬ್ಬಳನ್ನು ತಾಳಿ ಕಟ್ಟಿದ ಗಂಡನಿಗೆ ಮತ್ತೊಂದು ಮದುವೆ ಮಾಡಿಸಿದ ಹೆಂಡತಿ!!
"ನಿನ್ನ ಗಂಡನನ್ನು ನಾನು ಮನಸಾರೆ ಇಷ್ಟ ಪಟ್ಟಿದೀನಿ" ಅಂತ ಮಹಿಳೆಗೆ ಹೇಳಿದ್ದಾಳೆ. ವಿಷಯ ಯಾವಾಗ ಗೊತ್ತಾಯ್ತೋ, ಆ ಯುವತಿಗೆ ತನ್ನ ಗಂಡನೊಂದಿಗೆ ಮದುವೆ ಮಾಡಿಸಿದ್ದಾಳೆ ಹೆಂಡತಿ

Views: 202
ಹೈದ್ರಾಬಾದ್: ಹೆಂಡ್ತಿಯೊಬ್ಬಳು ತಾನೇ ಮುಂದೆ ನಿಂತುಕೊಂಡು, ತನಗೆ ತಾಳಿ ಕಟ್ಟಿದ ಗಂಡನಿಗೆ ಎರಡನೇ ಮದುವೆ ಮಾಡಿಸಿದ ಘಟನೆ ನಡೆದಿದೆ.
ತನ್ನ ಗಂಡನನ್ನು ಬುದ್ಧಿಮಾಂದ್ಯ ಯುವತಿಯೊಬ್ಬಳು ನಿನ್ನ ಗಂಡನನ್ನ ನಾನು ಮನಸಾರೆ ಇಷ್ಟ ಪಟ್ಟಿದೀನಿ ಅಂತ ಮಹಿಳೆಗೆ ಹೇಳಿದ್ದಾಳೆ. ವಿಷಯ ಯಾವಾಗ ಗೊತ್ತಾಯ್ತೋ, ಆ ಯುವತಿಗೆ ತನ್ನ ಗಂಡನೊಂದಿಗೆ ಮದುವೆ ಮಾಡಿಸಿದ್ದಾಳೆ. ಈ ಅಚ್ಚರಿಯ ಘಟನೆ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಚಿನ್ನಗುಡೂರಿನ ಉಗ್ಗಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಉಗ್ಗಂಪಲ್ಲಿ ಗ್ರಾಮದ ಸುರೇಶ್ ಅನ್ನೋ ವ್ಯಕ್ತಿಯನ್ನು ಸರಿತಾ ಅನ್ನೋ ಮಹಿಳೆ, ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ರು. ಇವರಿಬ್ಬರು, ಮಗ ಮತ್ತು ಮಗಳೊಂದಿಗೆ ಒಳ್ಳೇ ಲೈಫ್ ನಡೆಸ್ತಾ ಇದ್ದರು. ಇತ್ತೀಚಿಗೆ ಮಹಬೂಬಾಬಾದ್ ಸಿಟಿಯಲ್ಲಿದ್ದ ಸುರೇಶ್ ಸಂಬಂಧಿ ಮಗಳಾದ ಸಂಧ್ಯಾ ಅನ್ನೋಳು, ತನ್ನ ಸೋದರ ಮಾವನಾದ ಸುರೇಶ್ನನ್ನು ಪ್ರೀತಿಸೋಕೆ ಶುರು ಮಾಡಿದ್ದಾಳೆ. ಈ ವಿಷಯ ತಿಳಿದು ಆಕೆಯ ಪೋಷಕರು ದಯವಿಟ್ಟು ನನ್ನ ಮಗಳಿಗೆ ನಿನ್ನ ಗಂಡನೊಂದಿಗೆ ಮದುವೆ ಮಾಡಿಸ್ತೀಯಾ ಅಂತ ಸರಿತಾ ಹತ್ತಿರ ಕೇಳಿಕೊಂಡಿದ್ದಾರೆ. ಸಂಧ್ಯಾ ಬುದ್ಧಿಮಾಂದ್ಯ ಯುವತಿಯಾಗಿರುವುದರಿಂದ ಆಕೆಯ ಇಷ್ಟವನ್ನು ಪೂರೈಸಿ ಆಕೆಗೂ ಒಂದು ಜೀವನ ಕೊಡೋಣ ಅಂತ ಮಾನವೀಯ ದೃಷ್ಟಿಯಿಂದ ಸರಿತಾ ಒಪ್ಪಿಕೊಂಡಿದ್ದಾಳೆ. ಈ ನಿರ್ಧಾರದಂತೆ ಆಗಸ್ಟ್ 28ನೇ ತಾರೀಖು, ನಗರದ ಭಕ್ತ ಮಾರ್ಕೆಂಡೇಯ ದೇವಸ್ಥಾನದಲ್ಲಿ ಕುಟುಂಬಸ್ಥರು ಹಾಗೂ ಬಂಧುಮಿತ್ರರ ಸಮ್ಮುಖದಲ್ಲಿ ಗಂಡ ಸುರೇಶ್ ಹಾಗೂ ಸಂಧ್ಯಾಗೆ ತಾಳಿ ಕಟ್ಟಿಸಿ, ಸಪ್ತಪದಿ ತುಳಿದು ಅದ್ಧೂರಿಯಾಗಿ ಮದುವೆಯನ್ನು ಹೆಂಡ್ತಿ ಸರಿತಾ ಮಾಡಿಸಿದ್ದಾಳೆ. ಈ ಎರಡನೇ ಮದುವೆ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗುತ್ತಿದೆ.






