ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಕಾಂತಾರ: ಚಾಪ್ಟರ್ 1

Views: 59
ಕನ್ನಡ ಕರಾವಳಿ ಸುದ್ದಿ: ಅಕ್ಟೋಬರ್ 1 ರಂದು ನಡೆಯಲಿರುವ ಪೇಯ್ಡ್ ಪ್ರೀಮಿಯರ್‌ಗಳು ಗಮನ ಸೆಳೆಯಲಿವೆ. ಇಂತಹ ಪ್ರದರ್ಶನಗಳು ಸಾಮಾನ್ಯವಾಗಿ ದೊಡ್ಡ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಮಾತ್ರ ನಡೆಯುತ್ತವೆ. ಆದರೆ ಈ ಬಾರಿ, ಬಿಡುಗಡೆಗೂ ಮುನ್ನವೇ ಟಿಕೆಟ್‌ಗಳು ಭಾರೀ ಬೇಡಿಕೆಯಲ್ಲಿವೆ ಮತ್ತು ಅನೇಕ ಪ್ರದರ್ಶನಗಳು ಮಾರಾಟವಾಗಿವೆ. ತಜ್ಞರ ಪ್ರಕಾರ, ಈ ಬೇಡಿಕೆ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ.
ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ ₹125 ಕೋಟಿಗೆ ಖರೀದಿಸಿದ್ದು. ಕನ್ನಡ ಚಿತ್ರರಂಗದಲ್ಲಿ ಒಂದು ದಾಖಲೆಯಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ಪ್ರಮುಖ ವಿತರಣಾ ಸಂಸ್ಥೆಗಳು ವಿತರಣಾ ಹಕ್ಕುಗಳನ್ನು ಪಡೆದಿವೆ.
ಕಾಂತಾರ ಚಿತ್ರದ ಭರ್ಜರಿ ಯಶಸ್ಸಿನ ನಂತರ. ಕಾಂತಾರ: ಚಾಪ್ಟರ್ 1 ರಿಷಬ್ ಶೆಟ್ಟಿಯವರ ಮತ್ತೊಂದು ಮಹತ್ವದ ಕೃತಿಯಾಗಿದೆ. ಈ ಚಿತ್ರವು ಮೊದಲ ಚಿತ್ರದ ಯಶಸ್ಸನ್ನು ಮೀರಿಸುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಹೊಂಬಾಳೆ ಫಿಲ್ಡ್ ನಿರ್ಮಾಣದ ಈ ಚಿತ್ರವನ್ನು ಭಾರತ ಮತ್ತು ವಿದೇಶಗಳಲ್ಲಿ 2,500ಕ್ಕಿಂತ ಹೆಚ್ಚು ಪರದೆಗಳಲ್ಲಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಬಂಗಾಳಿ ಮತ್ತು ಇಂಗ್ಲಿಷ್ ಸೇರಿ ಏಳಕ್ಕೂ ಅಧಿಕ ಭಾಷೆಗಳಲ್ಲಿ ಡಬ್ ಮಾಡಿ ಪ್ರೀಮಿಯರ್ ಮಾಡಲು ಯೋಜಿಸಲಾಗಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಪ್ರೀಮಿಯರ್‌ಗಳಲ್ಲಿ ಒಂದಾಗಿದ್ದು, ಚೀನಾವನ್ನು ಹೊರತುಪಡಿಸಿ ವಿಶ್ವಾದ್ಯಂತ ಏಕಕಾಲಿಕ ಬಿಡುಗಡೆಯಾಗಲಿದೆ.
ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪೈಕಿ ಒಂದಾದ ಕಾಂತಾರ: ಚಾಪ್ಟರ್ 1, ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ತೆರೆಗೆ ಬರಲು ಸಿದ್ದವಾಗಿದೆ. ಈ ಚಿತ್ರವು ಅಕ್ಟೋಬರ್ 2 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದ್ದು, ಅಕ್ಟೋಬರ್ 1 ರ ಸಂಜೆಯಿಂದ ಪೇಯ್ಡ್ ಪ್ರೀಮಿಯರ್‌ಗಳ ಮೂಲಕ ಭರ್ಜರಿ ಆರಂಭಕ್ಕೆ ವೇದಿಕೆ ಸಜ್ಜಾಗಿದೆ.