ರಾಜಕೀಯ

ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಗನ 130 ಕ್ಕೂ ಹೆಚ್ಚು ಅಶ್ಲೀಲ ವಿಡಿಯೋ ವೈರಲ್‌…!

Views: 308

ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಮೈನ್ಪುರಿಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೀಮಾ ಗುಪ್ತಾ ಮಗ ಶುಭಂ ಗುಪ್ತಾಗೆ ಸಂಬಂಧಿಸಿದ 130ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಖುಲ್ಲಂಖುಲ್ಲಾ ಗುಪ್ತ್ ವಿಡಿಯೋ ಮೈನ್ಪುರಿಯ ಪ್ರಮುಖ ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಖುದ್ದು ಶುಭಂ ಗುಪ್ತಾ ತೆಗೆದುಕೊಂಡಿರೋ ವಿಡಿಯೋಗಳು ಅವನ ಅಸಲಿ ಮುಖವನ್ನು ಬಿಚ್ಚಿಟ್ಟಿವೆ. ಹಲವು ಮಹಿಳೆಯರೊಂದಿಗೆ ಅತ್ಯಂತ ಅಸಹ್ಯಕರ ಸ್ಥಿತಿಯಲ್ಲಿ ಕಾಣಿಸಿಕೊಂಡಿರೋ ಶುಭಂ ವಿಡಿಯೋಗಳು ಯುಪಿ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿವೆ.

ಶುಭಂ ಗುಪ್ತಾ, ಪತ್ನಿ ಶೀತಲ್ ಜೊತೆ ಗಲಾಟೆ ಮಾಡಿಕೊಂಡಿದ್ದ. ಇತ್ತೀಚೆಗೆ ತನ್ನ ಗಂಡ ಸ್ಯಾಡಿಸ್ಟ್ ಅಂತ ಶೀತಲ್ ಹೇಳಿದ್ದಳು. ಆತ ತನ್ನೊಂದಿಗೆ ಅಸಹಜ ಲೈಂಗಿಕ ಶೃಂಗಾರ ಬಯಸುತ್ತಿದ್ದ. ಸಿಗರೇಟ್ನಿಂದ ಸುಡುತ್ತಿದ್ದ ಅಂತ ಬಹಿರಂಗವಾಗಿಯೇ ಆರೋಪಿಸಿದ್ದರು. ಈ ಬಗ್ಗೆ ಪತಿಯ ಮೇಲೆ ಶೀತಲ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಳು. ಹೀಗೆ ದೂರು ದಾಖಲಾದ ಮೇಲೆಯೇ ಈ ವಿಡಿಯೋಗಳು ಲೀಕ್ ಆಗಿದ್ದು, ವೈರಲ್ ಆಗುತ್ತಿವೆ.

ಖುದ್ದು ಶೀತಲ್ ಹೇಳೋ ಪ್ರಕಾರ ಇಂಥಾ ವಿಡಿಯೋಗಳನ್ನೂ ಸಹ ಶುಭಂ ಗುಪ್ತ ತನ್ನ ಪತ್ನಿಗೆ ಬಲವಂತವಾಗಿ ತೋರಿಸುತ್ತಿದ್ದನಂತೆ. ಅಷ್ಟೇ ಅಲ್ಲ, ಆಕೆಯ ವಿಡಿಯೋಗಳನ್ನೂ ಸಹ ಚಿತ್ರೀಕರಿಸುತ್ತಿದ್ದನಂತೆ.. ನಾಲ್ಕು ವರ್ಷ ಕಾಲ ಮಾನಸಿಕವಾಗಿ, ದೈಹಿಕವಾಗಿ ಹಿಂಸಿಸಿದ್ದ ಅಂತಲೂ ಶೀತಲ್ ದೂರಿದ್ದಾರೆ. ಆದರೇ, ಈ 130 ವಿಡಿಯೋಗಳು ಹೇಗೆ ಲೀಕ್ ಆದ್ವು ಅನ್ನೋ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಶುಭಂ ಗುಪ್ತಾ ಪತ್ನಿಯೇ ಇವುಗಳನ್ನ ಲೀಕ್ ಮಾಡಿರಬಹುದು ಅಂತ ಅಂದಾಜಿಸಲಾಗುತ್ತಿದೆ.

Related Articles

Back to top button
error: Content is protected !!