ಯುವಜನ
ಬಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಯುವಕನ ಸೆರೆ
Views: 124
ಕನ್ನಡ ಕರಾವಳಿ ಸುದ್ದಿ: ಮುಳ್ಳೇರಿಯಾದ ಕಾರಡ್ಕ ಸಮೀಪದ ಮನೆಯೊಂದರಲ್ಲಿ ಬಾಲಕಿ ಸ್ನಾನ ಮಾಡುತ್ತಿದ್ದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದ ಮಲಪ್ಪುರಂ ಮೂಲದ ಪ್ರಜಿಲ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಾರಾಟ ಪ್ರತಿನಿಧಿಯಾಗಿರುವ ಆತ ಮನೆಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಮನೆಯ ಹೊರಗಿರುವ ಸ್ನಾನದ ಕೊಠಡಿಯಲ್ಲಿ ನೀರು ಬೀಳುತ್ತಿರುವ ಶಬ್ದ ಕೇಳಿ ಯುವಕ ಅಲ್ಲಿಗೆ ತೆರಳಿ ಬಾಗಿಲ ಸಂದಿಯಿಂದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯ ಆರಂಭಿಸಿದ್ದ ಕೂಡಲೇ ಬಾಲಕಿಯ ಗಮನಕ್ಕೆ ಬಂದು ಬೊಬ್ಬೆ ಹಾಕಿದಳು. ಪರಾರಿಯಾಗಲು ಯತ್ನಿಸಿದ ಪ್ರಜಿಲ್‌ನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಇಲ್ಲಿನ ಪೊಲೀಸರಿಗೆ ಒಪ್ಪಿಸಿದರು.






