ಬಾಲಕನಿಂದ ಭೀಕರ ಕೃತ್ಯ! ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ
Views: 410
ಕನ್ನಡ ಕರಾವಳಿ ಸುದ್ದಿ: ಗುಜರಾತ್‌ನ ಜುನಾಗಢದ ಶೋಭವದಲಾ ಗ್ರಾಮದ ಖೋಡಿಯಾರ್ ಆಶ್ರಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ ತನ್ನ ಅಣ್ಣ ಮತ್ತು ಗರ್ಭಿಣಿ ಅತ್ತಿಗೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ತನ್ನ ಅತ್ತಿಗೆಯನ್ನು ಕೊಲ್ಲುವ ಮೊದಲು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದನು. ಇಷ್ಟಕ್ಕೆ ಸುಮ್ಮನಾಗದ ಆರೋಪಿ ಮಹಿಳೆಯ ಹೊಟ್ಟೆಗೆ ಬಲವಾಗಿ ಒದ್ದಿದ್ದರಿಂದ ಆಕೆಯ 6 ತಿಂಗಳ ಭ್ರೂಣ ಗರ್ಭದಿಂದ ಹೊರಗೆ ಬಂದಿತ್ತು. ಈ ಘಟನೆ ಅಕ್ಟೋಬರ್ 16ರಂದು ನಡೆದಿದ್ದೂ ಅಕ್ಟೋಬರ್ 31ರ ಶುಕ್ರವಾರ ಬೆಳಕಿಗೆ ಬಂದಿತು. ಆರೋಪಿಯು ತನ್ನ ಸಹೋದರ ಮತ್ತು ಅತ್ತಿಗೆಯ ಶವಗಳನ್ನು ಮನೆಯಲ್ಲಿ ಬೆತ್ತಲೆಯಾಗಿ ಹೂತುಹಾಕಿದ್ದನು.
ಕೊಲೆ ಮಾಡಿದ ನಂತರ ಆರೋಪಿ ಅವರ ಬಟ್ಟೆಗಳಿಗೆ ಬೆಂಕಿ ಹಚ್ಚಿ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದನು. ಆರೋಪಿಗೆ ಆತನ ಅಣ್ಣ ಮತ್ತು ಅತ್ತಿಗೆಯ ಶವಗಳನ್ನು ಮನೆಯಲ್ಲಿ ಹೂಳಲು ಆರೋಪಿಯ ತಾಯಿ ಸಹಾಯ ಮಾಡಿದಳು. ಅಕ್ಟೋಬರ್ 31ರಂದು ಪೊಲೀಸರು ಆಶ್ರಮಕ್ಕೆ ಹೋಗಿ ಆಶ್ರಮದ ಹಿಂದಿನ ಮನೆಯಿಂದ ಗಂಡ, ಹೆಂಡತಿ ಮತ್ತು ನವಜಾತ ಶಿಶುವಿನ ಕೊಳೆತ ಶವಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ಸಹ ಬಂಧಿಸಿದ್ದಾರೆ. ಮೃತರನ್ನು ಶಿವಮಗಿರಿ (22 ವರ್ಷ) ಮತ್ತು ಆತನ ಪತ್ನಿ ಕಾಂಚನ್ ಕುಮಾರಿ (19) ಎಂದು ಗುರುತಿಸಲಾಗಿದೆ. ಶಿವಮಗಿರಿ ಆಶ್ರಮದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿಗಳು ಗೋಶಾಲೆಯಲ್ಲಿ ಹಸುಗಳಿಗೆ ಸೇವೆ ಸಲ್ಲಿಸುತ್ತಿದ್ದರು.






