ಬಾರ್ಕೂರು: ಕುಲದೇವರ ಭಜನಾ ಕೃತಿ ಬಿಡುಗಡೆ ಮತ್ತು ಸಂಕೀರ್ತನೆ

Views: 207
ಕನ್ನಡ ಕರಾವಳಿ ಸುದ್ದಿ: ಬಾರಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇಗುಲದಲ್ಲಿ ಅಷ್ಟ-ಬಂದ ಬ್ರಹ್ಮಕಲಕೋತ್ಸವ ಸಂದರ್ಭದಲ್ಲಿ ಶ್ರೀ ವೀರಭದ್ರ/ ಭದ್ರಕಾಳಿ/ ದುರ್ಗಾಪರಮೇಶ್ವರಿ ಭಜನಾ ಕೃತಿ ಬಿಡುಗಡೆ ಮತ್ತು ಸಂಕೀರ್ತನೆ ಫೆಬ್ರವರಿ 15 ರಂದು ನಡೆಯಿತು.
ಪದ್ಮಲೇಖ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕರಾದ ಶ್ರೀ ಗಿರೀಶ್ ಶೆಟ್ಟಿಗಾರ್ ವಿಟ್ಲ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ನಿಷ್ಕರ್ಮದಿಂದ ಭಗವಂತನ ಭಜನೆ ಮಾಡಿದಾಗ ಪಾಪ ಪರಿಹಾರವಾಗುವುದರೊಂದಿಗೆ ಉನ್ನತ ಸ್ಥಿತಿ ನಿರ್ಮಾಣವಾಗಿ ಬಹಿರಂಗದಲ್ಲಿ ನಲಿವು ಗೆಲುವು ಜಾಸ್ತಿಯಾಗುತ್ತದೆ ಎಂದರು.
ಕವಯತ್ರಿ ಶ್ರೀಮತಿ ಶೋಭಾ ಹರಿಪ್ರಸಾದ್ ಶೆಟ್ಟಿಗಾರ್ ಅವರು ಭಜನಾಮೃತ ರಸಧಾರೆ ಕೃತಿ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಶೆಟ್ಟಿಗಾರ ವಾಣಿ ಸಂಪಾದಕರಾದ ನಾರಾಯಣ ಶೆಟ್ಟಿಗಾರ್ ಬೆಂಗಳೂರು, ಲೇಖಕರು ಹಾಗೂ ಶಿಕ್ಷಕರಾದ ಶ್ರೀಮತಿ ಶ್ರೀ ಮುದ್ರಾಡಿ ನಿಟ್ಟೆ, ನಾರಾಯಣ ಶೆಟ್ಟಿಗಾರ್ ಸುರತ್ಕಲ್, ವಿಠಲ್ ಶೆಟ್ಟಿಗಾರ್ ಸಗ್ರಿ ಉಪಸ್ಥಿತರಿದ್ದರು.
ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಆಶಾ ವಿಠ್ಠಲ್ ಶೆಟ್ಟಿಗಾರ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಡಾ. ಶಿವಪ್ರಸಾದ್ ಕೆ ಉಡುಪಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಂತಾ ಸಂಜೀವ ಶೆಟ್ಟಿಗಾರ್ ಮತ್ತು ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿಗಾರ್ ವಂದಿಸಿದರು.
ದೇಗುಲದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೇರಿ ಶ್ರೀನಿವಾಸ್ ಶೆಟ್ಟಿಗಾರ್ ಕೊಡುಗೆ ನೀಡಿದ ಸೇವಾ ಕೌಂಟರನ್ನು ಶ್ರೀಮತಿ ಸಾವಿತ್ರಿ ನಾರಾಯಣ ಶೆಟ್ಟಿಗಾರ್ ಸುರತ್ಕಲ್ ದಂಪತಿಗಳು ಉದ್ಘಾಟಿಸಿದರು.